ಶೋಭಾ ಕರಂದ್ಲಾಜೆ ಮತ್ತೆ ರಾಜ್ಯ ರಾಜಕೀಯಕ್ಕೆ ಯಾವಾಗ ಬರ್ತಾರೆ, ಏನಂದ್ರು ಶೋಭಕ್ಕ ?

ಬೆಂಗಳೂರು: ಶೋಭಾ ಕರಂದ್ಲಾಜೆ ಸೈಲೆಂಟ್ ಆಗಿದ್ದಾರೆ. ಹಾಯ್ ಕಮಾಂಡ್ ನ ಆದೇಶ ಅವರಿಗಿದೆ. ಅದಕ್ಕಾಗೇ ಅವರು ಮುಗುಮ್ಮಾಗಿ ಬಾಯಿಗೆ ಬೀಗ ಬಡಿದುಕೊಂಡು ಕೂತಿದ್ದಾರೆ. ಶೀಘ್ರದಲ್ಲೆ ಅವರು ರಾಜ್ಯ ರಾಜಕೀಯಕ್ಕೆ ಮರಳುತ್ತಾರೆ. ಸಿಎಂ ಕೂಡಾ ಆಗ್ತಾರೆ ಅಂತೆ ಇತ್ಯಾದಿ ಕಂತೆ ಕಥೆ ಗಳು ಬಹಳ ತಿಂಗಳುಗಳಿಂದ ರಾಜಕೀಯ ಅಂಗಳದಲ್ಲಿ ಅತ್ತಿಂದಿತ್ತ ಶಥಪಥ ಸುತ್ತುತ್ತಿವೆ.
ಈಗ ಸ್ವತಃ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಇದಕ್ಕೆಲ್ಲ ಒಂದು ದೊಡ್ಡ ಫುಲ್ ಸ್ಟಾಪ್ ಹಾಕಿದ್ದಾರೆ. ಯಾವುದೇ ಕಾರಣಕ್ಕೂ ರಾಜ್ಯ ರಾಜಕೀಯಕ್ಕೆ ಮರಳೋದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಶೋಭಕ್ಕ ರಾಜ್ಯ ರಾಜಕೀಯಕ್ಕೆ ಬರುತ್ತಾರಾ ಎಂಬ ಚರ್ಚೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ರಾಜ್ಯ ರಾಜಕೀಯಕ್ಕೆ ಮತ್ತೆ ವಾಪಸ್ ಬರೋದಿಲ್ಲ. ಈಗ ನರೇಂದ್ರ ಮೋದಿ ಅವರು ನನಗೆ ಕೃಷಿ ಇಲಾಖೆ ಜವಾಬ್ದಾರಿ ಕೊಟ್ಟಿದ್ದಾರೆ. ಅನೇಕ ರಾಜ್ಯಗಳಲ್ಲಿ ಚುನಾವಣೆ ಉಸ್ತುವಾರಿಯನ್ನು ನನಗೆ ಕೊಟ್ಟಿದ್ದಾರೆ. ನಾನು ಇದ್ರಲ್ಲಿ ಖುಷಿಯಾಗಿ ಇದ್ದೇನೆ ಎಂದವರು ಹೇಳಿದ್ದಾರೆ.

ನಾನು ರಾಜ್ಯಕ್ಕೆ ವಾಪಸ್ ಬರಬೇಕು, ಬರುತ್ತೇನೆ ಮುಂತಾದ. ಯಾವುದೆ ಚರ್ಚೆಯೇ ಆಗಿಲ್ಲ. ಇದು ಆಧಾರವಿಲ್ಲದ ಊಹಾಪೋಹಗಳು. ಪಕ್ಷ ನನಗೆ ಜವಾಬ್ದಾರಿ ಕೊಟ್ಟಿದೆ. ಅದನ್ನ ನಿಭಾಯಿಸಿಕೊಂಡು ಹೋಗುತ್ತೇನೆ. ರಾಜ್ಯ ರಾಜಕಾರಣಕ್ಕೆ ನಾನೂ ಮತ್ತೆ ವಾಪಸ್ ಆಗೋದಿಲ್ಲ ಎಂದು ಅವರು ತಿಳಿಸಿದ್ದಾರೆ.

Leave A Reply

Your email address will not be published.