ಅತೀ ವೇಗದ ಚಾಲನೆಯಿಂದ ನಿಯಂತ್ರಣ ತಪ್ಪಿ ವಿದ್ಯುತ್ ಟ್ರಾನ್ಸಫಾರ್ಮರ್ ಏರಿದ ಬೈಕ್

ಕೇರಳ: ವೇಗವಾಗಿ ಬಂದ ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಟ್ರಾನ್ಸಫಾರ್ಮರ್ ಏರಿದ ಘಟನೆ ಕೇರಳದ ಇಡುಕಿಯ ವೆಲ್ಲಾಯಕುಂಡಿಯಲ್ಲಿ ನಡೆದಿದೆ.

ಬೈಕ್ ಸವಾರ ವಿಷ್ಣುಪ್ರಸಾದ್ ಈ ಅನಾಹುತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ವಿಷ್ಣುಪ್ರಸಾದ್ ತನ್ನ ಗೆಳೆಯನ ಬೈಕ್ ನ್ನು ಅತಿ ವೇಗದಲ್ಲಿ ಓಡಿಸಿಕೊಂಡು ಬಂದಿದ್ದಾನೆ. ಈ ವೇಳೆ ಬೈಕ್ ಆತನ ನಿಯಂತ್ರಣ ತಪ್ಪಿ, ಆತ ಒಂದು ಕಡೆ ಬಿದ್ದಿದ್ದಾನೆ. ಅಲ್ಲದೆ ಬೈಕ್ ಮೂರು ಪಲ್ಟಿ ಹೊಡೆದು ಟ್ರಾನ್ಸ್‌ಫಾರ್ಮರ್ ಏರಿದೆ.

ಆದರೆ ಆತ ಘಟನೆಯ ಬಳಿಕ ಸ್ಥಳದಿಂದ ಎಸ್ಕೆಪ್ ಆಗಿದ್ದು, ಬಳಿಕ ಕೇರಳ ವಿದ್ಯುತ್ ಬೋರ್ಡ್‌ನ ಅಧಿಕಾರಿಗಳು ವಿದ್ಯುತ್ ಸ್ಥಗಿತಗೊಳಿಸಿ ಹೆಚ್ಚಿನ ಅನಾಹುತವಾಗದಂತೆ ತಡೆದಿದ್ದಾರೆ. ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Leave A Reply

Your email address will not be published.