140 ಪ್ರಯಾಣಿಕರ ಜೀವ ಉಳಿಸಿ ತಾನೇ ಪ್ರಾಣ ತ್ಯಾಗ ಮಾಡಿದ ಹೈಸ್ಪೀಡ್ ಬುಲೆಟ್ ಟ್ರೈನ್ ಚಾಲಕ

ಬೀಜಿಂಗ್: 140 ಪ್ರಯಾಣಿಕರಿದ್ದ ಹೈಸ್ಪೀಡ್ ಬುಲೆಟ್ ರೈಲೊಂದು ಹಳಿ ತಪ್ಪಿದ್ದು, ಚಾಲಕ ಮೃತಪಟ್ಟ ಘಟನೆ ಚೀನಾದ ಗ್ಯುಝೌ ಪ್ರಾಂತ್ಯದಲ್ಲಿ ನಡೆದಿದೆ. ಜಾಗೃತ ಚಾಲಕ ತನ್ನ ಪ್ರಯಾಣಿಕರನ್ನು ರಕ್ಷಿಸಿ ತಾನು ಪ್ರಾಣ ಬಿಟ್ಟಿದ್ದಾನೆ.

ಬುಲೆಟ್ ರೈಲು ಚೀನಾದ ಸೌತ್ ವೆಸ್ಟರ್ನ್ ಗುಯಾಂಗ್ ಪ್ರಾಂತ್ಯದಿಂದ ದಕ್ಷಿಣ ಪ್ರಾಂತ್ಯದ ಗುವಾಂಗ್‌ಝೌಗೆ ಚಲಿಸುತ್ತಿದ್ದಾಗ ರೊಂಗ್‌ಜಿಯಾಂಗ್ ನಿಲ್ದಾಣದ ಸುರಂಗ ಪ್ರವೇಶದ್ವಾರದಲ್ಲಿ ಹಳಿತಪ್ಪಿದೆ. ರೋಜಿಯಾಂಗ್ ನಿಲ್ದಾಣದಲ್ಲಿ ಮಣ್ಣು ಕುಸಿದಿದ್ದ ಕಾರಣ ರೈಲಿನ 2 ಬೋಗಿಗಳು ಹಳಿತಪ್ಪಿವೆ ಎಂದು ವರದಿಯಾಗಿದೆ.

ಘಟನೆ ಬಳಿಕ ಆನ್ ಬೋರ್ಡ್ ಡೇಟಾ ಪರಿಶೀಲಿಸಿದಾಗ, ಬುಲೆಟ್ ರೈಲು ಯುಝೈ ಸುರಂಗ ಪ್ರವೇಶಿಸುವ ಸಂದರ್ಭ ಹಳಿಯಲ್ಲಿ ದೋಷವಿರುವುದನ್ನು ಚಾಲಕ ಕೇವಲ 5 ಸೆಕೆಂಡುಗಳಲ್ಲಿ ಗುರುತಿಸಿದ್ದಾನೆ. ತಕ್ಷಣವೇ ಅಪಾಯ ಆರಿತು ಬ್ರೇಕ್ ಅದುಮಿದ್ದಾನೆ. ಆದರೂ ರೈಲು 900 ಮೀಟರ್ ದೂರಕ್ಕೆ ಜಾರಿಕೊಂಡು ಹೋಗಿದೆ. ಚಾಲಕನ ಸಮಯಪ್ರಜ್ಞೆಯಿಂದ ಸುಮಾರು 140 ಪ್ರಯಾಣಿಕರು ಪಾರಾಗಿದ್ದಾರೆ. ಘಟನೆಯಲ್ಲಿ 7 ಪ್ರಯಾಣಿಕರು ಗಾಯಗೊಂಡಿದ್ದಾರೆ. ಆದ್ರೆ ದುರದೃಷ್ಟವಶಾತ್ ಚಾಲಕ ಕುಳಿತಿರುವ ಜಾಗ ಕ್ರಾಷ್ ಆಗಿದೆ. ಅಲ್ಲಿದ್ದ ಚಾಲಕ ಮಾತ್ರ ಪ್ರಾಣ ಬಿಟ್ಟಿದ್ದಾನೆ.

Leave A Reply

Your email address will not be published.