ಸ್ವಚ್ಛತೆ ಹಾಗೂ ಹಸಿರೀಕರಣ ಸಪ್ತಾಹಕ್ಕೆ ಚಾಲನೆ

ವಿಶ್ವ ಪರಿಸರದ ದಿನದ ಅಂಗವಾಗಿ ಅರಣ್ಯ ಇಲಾಖೆಯಿಂದ ಅಭಿಯಾನ
ಹೊಸಪೇಟೆ ಜೂ೨: ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ಇದು £ತ್ಯದ ಕಾಯಕವಾಗಿಸಬೇಕು ಎಂದು ಸದುದ್ದೇಶದಿಂದ ಹೊಸಪೇಟೆಯ ಅರಣ್ಯ ಇಲಾಖೆ ವಿಭಿನ್ನವಾಗಿ ವಿಶ್ವ ಪರಿಸರ ದಿನವನ್ನು ಆಚರಿಸುತ್ತಿದೆ ಎಂದು ವಲಯ ಅರಣ್ಯಾಧಿಕಾರಿ ವಿನಾಯಕ ಎ.ಸಿ ತಿಳಿಸಿದರು.

ಅವರು ಹೊಸಪೇಟೆಯ ತುಂಗಭದ್ರ ಜಲಾನಯದ ಹಿ£್ನರು ಪ್ರದೇಶದಲ್ಲಿ ಗುರುವಾರ ಬೆಳಿಗ್ಗೆ ಸ್ವಚ್ಛತಾ ಕಾರ್ಯಕ್ಕೆ ಚಾಲನೆ £Ãಡಿ ಮಾತನಾಡಿ ನಮ್ಮ ಆಚರಣೆಗಳು ಕಾರ್ಯಕ್ರಮಕ್ಕೆ ಸೀಮಿತವಾಗದೆ £ತ್ಯದ ಕಾಯಕವಾಗಬೇಕು, ಗಿಡಗಳನ್ನು ನೆಡುವುದೊಂದೆ ಅಲ್ಲ ಸ್ವಚ್ಛತೆ ಹಾಗೂ ಪರಿಸರ ಸ್ನೇಹಿ ವಾತಾವರ್ಣ £ರ್ಮಾಣ ಮಾಡುವುದು ಸಹ ಇದರ ಭಾಗ ಅಲ್ಲದೆ ಪರಿಸರ ಮಹತ್ವ ಹಾಗೂ ಉಳಿಸುವ ವಿಧಾನವನ್ನು ತಿಳಿಸುವುದು ಸಹ ಮುಖ್ಯ ಎಂದರು.

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಅರಣ್ಯ ಇಲಾಖೆ ಸ್ವಚ್ಛತೆ ಮತ್ತು ಹಸಿರೀಕರಣ ಸಪ್ತಾಹವನ್ನು ಆಚರಿಸುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಮುಂದಾಗಿದೆ ಎಂದು ಮಾಹಿತಿ £Ãಡಿದರು, ಸಪ್ತಾಹದಲ್ಲಿ ವಾರವೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಜೂನ್ ೨ ರಿಂದ ೭ರ ವರೆಗೂ ವೈವಿದ್ಯಮಯ ಕಾರ್ಯಕ್ರಮಗಳ ಮೂಲಕ ವಿಶ್ವ ಪರಿಸರ ದಿನ ಹಾಗೂ ಜಾಗೃತಿ ಕಾರ್ಯಕ್ರಮವನ್ನು ರೂಪಿಸಿಲಾಗಿದೆ ಎಂದರು.
ಜೂನ್ ೨ ರಂದು ತುಂಗಭದ್ರ ಜಲಾಶಯದ ಜಲಾನಯನ ಪ್ರದೇಶದಲ್ಲಿ ಸ್ವಚ್ಛತೆಯೊಂದಿಗೆ ಸಪ್ತಾಹಕ್ಕೆ ಚಾಲನೆ £Ãಡಲಿದ್ದು ಜೂನ್ ೩ ರಂದು ಜೋಳದರಾಶಿ ಗುಡ್ಡಗಾಡು ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ, ಜೂನ್ ೪ ರಂದು ಶಾಲಾ ಕಾಲೇಜುಗಳಲ್ಲಿ ಸ್ವಚ್ಛಾ ಮತ್ತು ಪರಿಸರ ಸಂರಕ್ಷಣೆಯ ಮಾಹಿತಿ ಹಾಗೂ ಗಿಡ ನೆಡುವ ಕಾರ್ಯ, ಜೂನ್ ೫ ರಂದು ಹೊಸಪೇಟೆ ನಗರದ ವಿವಿಧ ಪ್ರದೇಶಗಳಲ್ಲಿ ಸಸಿ ನೆಡುವ ಕಾರ್ಯಕ್ರಮ, ಜೂನ್ ೬ ರಂದು ಜಂಬೂನಾಥ ಗುಡ್ಡದಲ್ಲಿ ಸ್ವಚ್ಛತೆ ಹಾಗೂ ಸಸಿ ನೆಡುವ ಕಾರ್ಯಕ್ರಮ ಹಾಗೂ ಜೂನ್ ೭ ರಂದು ಹೊಸಪೇಟ ನಗರ ಹಾಗೂ ಸೂತ್ತಲೂ ಪ್ರದೇಶದಲ್ಲಿ ಸ್ವಚ್ಛತೆ, ಗಿಡ ನೆಡುವ ಮತ್ತು ಬಿತ್ತನೆ ಕಾರ್ಯಕ್ರಮಗಳ ಮೂಲಕ ವಿಭಿನ್ನವಾಗಿ ವಿಶ್ವಪರಿಸರ ದಿನವನ್ನು ಆಚರಿಸಲು £ರ್ಧರಿಸಲಾಗಿದೆ.

ತುಂಗಭದ್ರ ಹಿ£್ನರು ಪ್ರದೇಶದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ಕೆ ಸಾಮಾಜಿಕ ಅರಣ್ಯ ಇಲಾಖೆಯ ಅರಣ್ಯಾಧಿಕಾರಿ ರಾಘವೇಂದ್ರ, ಅಧಿಕಾರಿಗಳಾದ ಯಂಕಪ್ಪ, ಶಿವಕುಮಾರ, ಭರಮಪ್ಪ, ಸಿಬ್ಬಂದಿಗಳು, ಗ್ರೀನ್ ಹೊಸಪೇಟೆಯ ಮುಖ್ಯಸ್ಥ ಸು£Ãಲ್‌ಗೌಡ, ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಕುಂತಲಾ ಹಾಗೂ ವಿಜಯನಗರ ಬಾಸ್ಕೇಟ್ ಬಾಲ ಹಾಗೂ ಪೂಟ್ಬಾಲ ಕ್ಲಬ್ ಸಿಬ್ಬಂದಿಗಳ ಪಾಲ್ಗೊಂಡು ಸಪ್ತಾಹಕ್ಕೆ ಚಾಲನೆ £Ãಡಿದರು.

Leave A Reply

Your email address will not be published.