ಗರ್ಭಿಣಿಯಾದ ಕೆಲವೇ ವಾರದಲ್ಲಿ ಮತ್ತೊಮ್ಮೆ ಗರ್ಭಿಣಿಯಾದ ಮಹಿಳೆ ! ಅರೆ ಇದು ಹೇಗೆ ಸಾಧ್ಯ?

ಮಹಿಳೆಯೋರ್ವಳು ಗರ್ಭಿಣಿಯಾಗಿದ್ದಾಗಲೇ ಇನ್ನೊಮ್ಮೆ ಗರ್ಭ ಧರಿಸಿರುವ ವಿಚಿತ್ರ ಘಟನೆಯೊಂದು ನಡೆದಿದೆ. ಇದು ಹೇಗೆ ಸಾಧ್ಯ ಅನ್ನೊ ಸಂಶಯ ನಿಮಗೆ ಕಾಡಬಹುದು. ಆದರೆ ಇದು ನಿಜವಾಗಿಯೂ ಇಂಥಹದ್ದೊಂದು ಘಟನೆ ಟೆಕ್ಸಾಸ್ ನ ಲ್ಲಿ ನಡೆದಿದೆ. ಗರ್ಭಿಣಿಯಾಗಿದ್ದಾಗಲೇ ಮಹಿಳೆ ಮತ್ತೊಮ್ಮೆ ಗರ್ಭಿಣಿಯಾಗಿದ್ದಾಳೆ.

ಹೆಣ್ಣು ತಾಯಿಯ ಪಾತ್ರ ವಹಿಸುವುದೇ ಅತ್ಯಂತ ಖುಷಿಯ ಕ್ಷಣ ಎಂದೇ ಹೇಳಬಹುದು. ಅದರಲ್ಲೂ ಆಕೆ ತನ್ನ ಒಡಲಲ್ಲಿ ಪುಟ್ಟ ಜೀವವೊಂದು ರೂಪುಗೊಳ್ಳುವ ಪ್ರಕ್ರಿಯಿಯೇ ಅದ್ಭುತ. ಹೆಣ್ಣು ಅವಳಿ ಮಕ್ಕಳಿಗೆ ಜನ್ಮ ನೀಡುವುದು ಸಾಮಾನ್ಯ. ಕೆಲವೊಮ್ಮೆ ಮೂರು ಮಕ್ಕಳಿಗೆ, ಇನ್ನೂ ಕೆಲವೊಮ್ಮೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿರುವ ಮಹಾತಾಯಿಯ ಬಗ್ಗೆ ನಾವು ಕೇಳಿದ್ದೇವೆ. ಆದರೆ ಒಬ್ಬ ಮಹಿಳೆ ಗರ್ಭಿಣಿಯಾಗಿರುವಾಗಲೇ ಮತ್ತೊಮ್ಮೆ ಗರ್ಭಿಣಿಯಾಗಿರುವ ಬಗ್ಗೆ ನೀವು ಕೇಳಿದ್ದೀರಾ ? ಅರೆ ಇದೇನ್ ಹೇಳ್ತಿದ್ದಾರಪ್ಪಾ ಅಂತ ಬೆಚ್ಚಿ ಬೀಳಬೇಡಿ. ನಾವ್ ಹೇಳಿರೋದು ನಿಜಾನೇ. ಹೆಚ್ಚಿನ ಮಾಹಿತಿ ಇಲ್ಲಿದೆ.

ಅಮೆರಿಕಾದ ಟೆಕ್ಸಾಸ್ ನಲ್ಲಿ ಇಂಥಹದ್ದೊಂದು ಘಟನೆ ನೈಜವಾಗಿ ನಡೆದಿದೆ. 30 ವರ್ಷದ ಕಾರಾ ವಿನ್ ಹೋಲ್ಡ್ ಎಂಬ ಅಮೆರಿಕ ಮಹಿಳೆಯೊಬ್ಬಳು ಇಂತಹ ಒಂದು ಅಪರೂಪದ ಗರ್ಭಧಾರಣೆಯನ್ನು ಅನುಭವಿಸಿದ ನಂತರ ತದ್ರೂಪಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಈ

ವಿನ್‌ಹೋಲ್ಡ್ ಎಂಬ ಮಹಿಳೆ ಮೊದಲು ಮೂರು ಬಾರಿ ಗರ್ಭಪಾತಗಳನ್ನು ಎದುರಿಸಿದ ನಂತರ ಗರ್ಭಿಣಿಯಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮಾತ್ರವಲ್ಲ ಗರ್ಭಿಣಿಯಾಗಿದ್ದ ಸಮಯದಲ್ಲಿ ಮತ್ತೊಮ್ಮೆ ಗರ್ಭಿಣಿಯಾದ ಸುದ್ದಿಯನ್ನು ವೈದ್ಯರು ಬಹಿರಂಗಪಡಿಸಿದರು. ಇದರಿಂದ ಈ ಮಹಿಳೆ ನಿಜಕ್ಕೂ ಆಶ್ಚರ್ಯಗೊಂಡಿದ್ದಾಳೆ.

ಡಾಕ್ಟರ್ ಗಳ ಪ್ರಕಾರ, ಈ ಸ್ಥಿತಿಯನ್ನು ‘ಸೂಪರ್ಫೆಟೇಶನ್’ ಎಂದು ಕರೆಯಲಾಗುತ್ತದೆ. ಆರಂಭಿಕ ಗರ್ಭಧಾರಣೆಯ ಸಮಯದಲ್ಲಿ ಹೊಸ ಗರ್ಭಧಾರಣೆಯು ಸಂಭವಿಸಿದಾಗ ಹೀಗಾಗುತ್ತದೆ. ಮೊದಲ ಗರ್ಭಧಾರಣೆಯ ನಂತರ ಕೆಲವು ದಿನಗಳು ಅಥವಾ ವಾರಗಳ ನಂತರ ಎರಡನೆಯದು ಸಂಭವಿಸಬಹುದು.

“ಮೊದಲ ಬಾರಿ ನನ್ನನ್ನು ಪರೀಕ್ಷಿಸಿದಾಗ ಗರ್ಭಿಣಿ ಎಂದು ಹೇಳಿದ ನಂತರ, ಮತ್ತೊಮ್ಮೆ ನಾ ಚೆಕಪ್ ಗೆಂದು ಹೋದಾಗ, ಎರಡು ಬಾರಿ ಗರ್ಭಿಣಿ ಮಾಡಿದ್ದೇನೆ, ಸುಮಾರು ಒಂದು ವಾರದ ಅಂತರದಲ್ಲಿ ವಿವಿಧ ಸಮಯಗಳಲ್ಲಿ ಸಂತಾನೋತ್ಪತ್ತಿ ಮಾಡಿವೆ ಎಂದು ವೈದ್ಯರು ನನಗೆ ಹೇಳಿದರು ಎಂದು ವಿನ್‌ಹೋಲ್ಡ್ ಹೇಳಿದ್ದಾರೆ. ನನ್ನ ಗರ್ಭಾವಸ್ಥೆಯ ಪ್ರಯಾಣದಲ್ಲಿ ನಡೆದ ಈ ಘಟನೆ ನಿಜವಾಗಲೂ ಪವಾಡವೇ ಎಂದು ನನಗನಿಸುತ್ತಿದೆ ಎಂದು ವಿನ್‌ಹೋಲ್ಡ್ ಹೇಳಿದ್ದಾರೆ.

ಮೂರು ಗರ್ಭಪಾತವಾಗಿ ತುಂಬಾನೇ ಅನಾರೋಗ್ಯಕ್ಕೆ ತುತ್ತಾದ ನಂತರ, ಇದೆಲ್ಲದರ ಮಧ್ಯೆ ಗರ್ಭಿಣಿಯಾಗಿರುವಾಗಲೇ ಮತ್ತೊಮ್ಮೆ ಗರ್ಭಧಾರಣೆ ಮಾಡಿದ ಮಹಿಳೆ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದು, ದಂಪತಿಗಳಲ್ಲಿ ಸಂತಸಗೊಂಡಿದ್ದಾರೆ.
ಮಹಿಳೆ ಈ ರೀತಿಯ ಖುಷಿ ಅದು ಕೂಡಾ ಡಬಲ್ ಖುಷಿ ನೀಡಿದ್ದು ಜೀವನದಲ್ಲಿ ಭರವಸೆಯ ಆಶಾ ಕಿರಣ ಮೂಡಿಸಿ ಜೀವನೋತ್ಸಾಹ ನೀಡಿದ್ದಂತೂ ಸುಳ್ಳಲ್ಲ.

Leave A Reply

Your email address will not be published.