ಕೇವಲ ಅಂಡರ್ ವೇರ್ ಧರಿಸಿ ಬಂದು ‘ಒತ್ತಿ’ ಎಂದ ಕಂಪನಿ

ಕ್ಯಾನ್‌ಬೆರಾ: ಆಸ್ಟ್ರೇಲಿಯಾದ ಚುನಾವಣೆ ಹಲವಾರು ಕಾರಣಗಳಿಂದಾಗಿ ಸಾಕಷ್ಟು ಮಾಧ್ಯಮಗಳ ಗಮನವನ್ನು ಸೆಳೆಯುತ್ತಿದೆ. ಅದರಲ್ಲಿಯೂ ಎರಡು ಜತೆ ಅಂಡರ್‌ವೇರ್‌ ಸಂಚಲನ ಸೃಷ್ಟಿಸಿದೆ.

ಅಂಡರ್ ವೇರ್ ನಲ್ಲಿ ಬಂದು ಮತ ಚಲಾಯಿಸಿದ್ರೆ, ಒಳ ಉಡುಪು ಫ್ರೀ ಎಂಬ ವಿಲಕ್ಷಣ ಸುದ್ದಿ ಕೇಳಿ ಎಲ್ಲರು ಆಚ್ಚರಿ ವ್ಯಕ್ತಪಡಿಸಿದ್ದಾರೆ. ಇದು ನಿಜಾನಾ ಎಂದು ಕೆಲವರು ಪ್ರಶ್ನೆ ಕೇಳುತ್ತಿರುವಾಗ, ಮತ್ತೆ ಕೆಲವರು ಅಲ್ಲಿ ಹೇಳಿದಂತೆ ಹೋಗಿ ಓಟು ಹಾಕಿ ಬಂದಿದ್ದಾರೆ.

ಆಸ್ಟ್ರೇಲಿಯಾದ ಸಾರ್ವತ್ರಿಕ ಚುನಾವಣೆಗಳು ಇದೇ 21ರಂದು ಮುಗಿದಿದೆ. ಲಿಬರಲ್ ಪಕ್ಷವನ್ನು ಸೋಲಿಸಿ ಲೇಬರ್ ಪಕ್ಷ ಅಧಿಕಾರಕ್ಕೆ ಬಂದಿದೆ. ಪ್ರಧಾನಿಯಾಗಿದ್ದ ಸ್ಕಾಟ್ ಮಾರಿಸನ್ ಜಾಗದಲ್ಲಿ ಕಾರ್ಮಿಕ ನಾಯಕ ಆಂಥೋನಿ ಅಲ್ಬನೀಸ್ ಪ್ರಧಾನಿಯಾಗುತ್ತಿದ್ದಾರೆ. ಆದರೆ ಈ ಚುನಾವಣೆಯ ಮತದಾನವು ಭಿನ್ನ ಮತ್ತು ವಿಚಿತ್ರವಾಗಿ ನಡೆಯಿತು. ಅದರಲ್ಲಿ ಅಂಡರ್ ವೇರ್ ಕೂಡಾ ಸೇರಿ ಕೊಂಡು ಮಜಾ ತಂದಿದೆ.

ಅಲ್ಲಿನ ಬಝೀಸ್ಮಗ್ಲರ್ ಎಂಬ ಅಂಡರ್‌ವೇರ್ ಕಂಪನಿಯು ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ” ಚುನಾವಣೆ ಬಿಸಿಯು ಬರುತ್ತಿದೆ. ನೀವು ಯಾರಿಗೆ ಮತ ಹಾಕುತ್ತೀರಾ ಎಂಬುದಕ್ಕೆ ನಮ್ಮ ಏನೂ ಅಭ್ಯಂತರವಿಲ್ಲ. ಆದರೆ ನೀವು ಪ್ಯಾಂಟ್ ಇಲ್ಲದೆ ಮತದಾನ ಮಾಡುವ ನಿಮ್ಮ ಸಾಂವಿಧಾನಿಕ ಹಕ್ಕನ್ನು ‘ ಒತ್ತಬೇಕೆಂದು’ ನಾವು ಬಯಸುತ್ತೇವೆ. ಒಂದು ವೇಳೆ ನೀವು ಈ ರೀತಿ ಮಾಡಿ ಫೋಟೋ ಶೇರ್ ಮಾಡಿಕೊಂಡರೆ ಅವರಿಗೆ ಒಳ ಉಡುಪನ್ನು ಉಚಿತವಾಗಿ ಕೊಡುತ್ತೇವೆ ಎಂದು ಪೋಸ್ಟ್ ಮಾಡಲಾಗಿತ್ತು.

ಈ ಸವಾಲನ್ನು ಸ್ವೀಕರಿಸಿದ ಹಲವು ಸಾಹಸಿಗಳು ಪ್ಯಾಂಟ್ ಜಾರಿಸಿ ಕೇವಲ ಅಂಡರ್‌ವೇರ್ ಹೋಗಿ ಒತ್ತಿ ಬಂದಿದ್ದಾರೆ ! ಕೆಲವರು ಮಹಿಳೆಯರೂ ಇಂತಹ ಸಾಹಸದ ಅವಕಾಶವನ್ನು ಮಿಸ್ ಮಾಡ್ಕೊಂಡಿಲ್ಲ. ಅವರು ಕೂಡಾ V ಶೇಪಿನ ಪ್ಯಾಂಟಿ ಧರಿಸಿ ಅಬಂದು ಮತ ಚಲಾಯಿಸಿದ್ದಾರೆ. ನಂತರ ಈ ಫೋಟೋಗಳನ್ನು ಶೇರ್ ಮಾಡಿದ್ದಾರೆ ಅದಕ್ಕೆ ಬಝೀಸ್ಮಗ್ಲರ್‌ನಲ್ಲಿ ತಕ್ಕ ಪ್ರತಿಕ್ರಿಯೆ ಬಂದಿದೆ. ‘ ಇದು ನಮಗೆ ದುಬಾರಿ ಚುನಾವಣಾ ದಿನವಾಗಿರುತ್ತದೆ. ಎಲ್ಲರಿಗೂ ಫ್ರೀಯಾಗಿ ಒಳ ಉಡುಪುಕೊಂಡಲು ಸಿದ್ಧರಾಗಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ನಾವು ಶೀಘ್ರ ನಿಮ್ಮ ಒಳಉಡುಪಿನ ಗಿಫ್ಟ್ ಕಳಿಸಲಿದ್ದೇವೆ” ಎಂದಿದೆ ಕಂಪನಿ.

Leave A Reply

Your email address will not be published.