ವಾಟ್ಸಪ್ ಬಳಕೆದಾರರಿಗೆ ಇಲ್ಲಿದೆ ಗುಡ್ ನ್ಯೂಸ್ !! | ಸದ್ಯದಲ್ಲೇ ಬಳಕೆದಾರರ ಅನುಕೂಲಕ್ಕಾಗಿ ಬರಲಿದೆ ಈ ಅದ್ಭುತ ಫೀಚರ್

ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್, ಇನ್ಸ್ಟ್ರಾಗ್ರಾಮ್, ವಾಟ್ಸಾಪ್, ಫೇಸ್ಬುಕ್ ಗಳಲ್ಲಿ ಆಗಾಗ್ಗೆ ಹೊಸ ಫೀಚರ್ ಗಳು ಬರುವುದು ಮಾಮೂಲಿ. ಹಾಗೆಯೇ ಹಲವು ದಿನಗಳಿಂದ ಟ್ವಿಟ್ಟರ್ ಬಳಕೆದಾರರು ಮೆಸೇಜ್ ಎಡಿಟ್ ಬಟನ್ ಬರುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಟ್ವಿಟ್ಟರ್ ಈ ಎಡಿಟ್ ಬಟನ್ ಅನ್ನು ತರುತ್ತದೋ ಇಲ್ಲವೋ ಗೊತ್ತಿಲ್ಲ, ಆದರೆ ವಾಟ್ಸಪ್ ಟ್ವಿಟ್ಟರ್‌ಗೂ ಮೊದಲೇ ಬಳಕೆದಾರರಿಗೆ ಎಡಿಟ್ ಆಪ್ಶನ್ ನೀಡುವ ಸಾಧ್ಯತೆ ಇದೆ.

ಹೌದು. ವಾಟ್ಸಪ್ ತನ್ನ ಬೀಟಾ ಆವೃತ್ತಿಯಲ್ಲಿ ಎಡಿಟ್ ಬಟನ್ ಅನ್ನು ಪರೀಕ್ಷಿಸುತ್ತಿದೆ. ಇದರ ಪ್ರಕಾರ ಬಳಕೆದಾರರು ಯಾರಿಗಾದರೂ ಸಂದೇಶ ಕಳುಹಿಸಿದಾಗ ಅಕ್ಷರಗಳು ತಪ್ಪಾಗಿದ್ದಲ್ಲಿ, ಅದನ್ನು ಎಡಿಟ್ ಮಾಡಲು ಸಾಧ್ಯವಿದೆ.

ಈ ಹಿಂದೆ ಬಳಕೆದಾರರು ತಪ್ಪಾಗಿ ಸಂದೇಶವನ್ನು ಯಾರಿಗಾದರೂ ಕಳುಹಿಸಿದಾಗ, ಅದನ್ನು ಎಡಿಟ್ ಮಾಡಲು ಅವಕಾಶ ಇರಲಿಲ್ಲ. ಬದಲಿಗೆ ಆ ಸಂದೇಶವನ್ನು ಡಿಲೀಟ್ ಫಾರ್ ಎವ್ರಿವನ್ ಮೂಲಕ ಅಳಿಸಿ, ಹೊಸದಾಗಿ ಸಂದೇಶ ಕಳುಹಿಸಲಾಗುತ್ತಿತ್ತು. ಆದರೆ ಇದೀಗ ಹೊಸ ಫೀಚರ್ ಮೂಲಕ ತಪ್ಪಾಗಿ ಕಳುಹಿಸಿದ ಸಂದೇಶವನ್ನು ಅಳಿಸದೇ ಅಲ್ಲಿಂದಲ್ಲಿಗೇ ಸರಿಪಡಿಸಲು ಸಾಧ್ಯವಾಗಲಿದೆ.

ವಾಟ್ಸಪ್ ಈ ಎಡಿಟ್ ಬಟನ್ ತರುವ ಬಗ್ಗೆ 5 ವರ್ಷಗಳ ಹಿಂದೆಯೇ ಯೋಜಿಸಿತ್ತು ಎಂದು ವರದಿಯಾಗಿದೆ. ಇತ್ತೀಚೆಗೆ ಟ್ವಿಟ್ಟರ್ ಎಡಿಟ್ ಬಟನ್ ತರುವ ಬಗ್ಗೆ ಪ್ರಸ್ತಾಪಿಸಿದ ಬಳಿಕ ವಾಟ್ಸಪ್ ಕೂಡಾ ಮತ್ತೆ ಈ ಎಡಿಟ್ ಬಟನ್ ಮೇಲೆ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ.

ಸದ್ಯ ವಾಟ್ಸಪ್ ಅಭಿವೃದ್ಧಿಪಡಿಸುತ್ತಿರುವ ಫೀಚರ್‌ನ ಸ್ಕ್ರೀನ್‌ಶಾಟ್ ಅನ್ನು ವೆಬಿಟೈನ್‌ಫೋ ಹಂಚಿಕೊಂಡಿದೆ. ಬಳಕೆದಾರರು ಕಳುಹಿಸಿದ ಸಂದೇಶವನ್ನು ಲಾಂಗ್ ಪ್ರೆಸ್ ಮೂಲಕ ಆಯ್ಕೆ ಮಾಡಿದಾಗ, ಸಂದೇಶವನ್ನು ನಕಲಿಸು(ಕಾಪಿ), ಫಾರ್ವರ್ಡ್ ಆಯ್ಕೆಯೊಂದಿಗೆ ಎಡಿಟ್ ಆಯ್ಕೆಯೂ ಗೋಚರಿಸಲಿದೆ. ಎಡಿಟ್ ಬಟನ್ ಆಯ್ಕೆ ಮಾಡಿದ ಬಳಿಕ ಕಳುಹಿಸಲಾದ ಸಂದೇಶದಲ್ಲಿ ಅಕ್ಷರ ದೋಷವಿದ್ದರೆ, ಅದನ್ನು ಸರಿಪಡಿಸಬಹುದು.

ಆದರೆ ಸಂದೇಶವನ್ನು ಎಡಿಟ್ ಮಾಡಿದ ಬಳಿಕ ಹಿಂದೆ ಕಳುಹಿಸಿದ ಸಂದೇಶದ ಬಗ್ಗೆ ಯಾವುದೇ ಎಡಿಟ್ ಹಿಸ್ಟರಿ ಇತಿಹಾಸವನ್ನು ತೋರಿಸುವುದಿಲ್ಲ. ಇದು ಅಭಿವೃದ್ಧಿ ಹಂತದಲ್ಲಿರುವುದರಿಂದ ವಾಟ್ಸಪ್ ಈ ಬಗ್ಗೆ ಬಿಡುಗಡೆಗೂ ಮೊದಲು ಫೀಚರ್‌ನಲ್ಲಿ ಬದಲಾವಣೆ ತರುವ ಸಾಧ್ಯತೆ ಇದೆ.

ಈ ಫೀಚರ್ ಸದ್ಯ ಆಂಡ್ರಾಯ್ಡ್ ಬೀಟಾ ಬಳಕೆದಾರರಿಗೆ ಮಾತ್ರವೇ ಲಭ್ಯವಿದೆ. ವಾಟ್ಸಪ್ ಐಒಎಸ್ ಬೀಟಾ ಬಳಕೆದಾರರಿಗೂ ಫೀಚರ್ ಅನ್ನು ಹೊರತರುವಲ್ಲಿ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗುತ್ತಿದೆ. ಕೊನೆಯದಾಗಿ ಈ ಫೀಚರ್ ಎಲ್ಲಾ ಬಳಕೆದಾರರಿಗೆ ಲಭ್ಯವಾಗುವಾಗ ಏನೆಲ್ಲಾ ಬದಲಾವಣೆಯಾಗಬಹುದು ಎಂಬುದು ಕಾದು ನೋಡಬೇಕಿದೆ.

Leave A Reply

Your email address will not be published.