BCCI ಅಧ್ಯಕ್ಷ ಸ್ಥಾನಕ್ಕೆ ಸೌರವ್ ಗಂಗೂಲಿ ದಿಢೀರ್ ರಾಜೀನಾಮೆ

ಐಪಿಎಲ್ 2022 ಟೂರ್ನಿ ಮುಗಿದ ಬೆನ್ನಲ್ಲೇ ಭಾರತೀಯ ಕ್ರಿಕೆಟ್‌ನಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸೌರವ್ ಗಂಗೂಲಿ ರಾಜೀನಾಮೆ ನೀಡುವ ಸುಳಿವು ನೀಡಿದ್ದಾರೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಬುಧವಾರ ಮಂಡಳಿಯ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡುವ ಸುಳಿವು ನೀಡಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

“ಬಹಳಷ್ಟು ಜನರಿಗೆ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುವ ಏನನ್ನಾದರೂ ಪ್ರಾರಂಭಿಸಲು ನಾನು ಯೋಜಿಸುತ್ತಿದ್ದೇನೆ” ಎಂದು ಸೌರವ್ ಗಂಗೂಲಿ ಟ್ವೀಟ್ ಮಾಡಿದ್ದು, ಇದು ಗಂಗೂಲಿ ರಾಜಕೀಯ ಸೇರಲಿದ್ದಾರೆಯೇ ಎಂಬ ಊಹಾಪೋಹಕ್ಕೆ ಕಾರಣವಾಗಿದೆ. ಬುಧವಾರ ಸಂಜೆ 5 ಗಂಟೆಗೆ ಟ್ವಿಟ್ ಮಾಡಿರುವ ಸೌರವ್ ಗಂಗೂಲಿ, 1992ರಲ್ಲಿ ನನ್ನ ಕ್ರಿಕೆಟ್ ಪಯಣ ಆರಂಭಿಸಿದ್ದು 2022ಕ್ಕೆ 30 ವರ್ಷಗಳು ಪೂರೈಸಲಿದೆ. ಅಲ್ಲಿಂದ ಇಲ್ಲಿಯವರೆಗೆ ಕ್ರಿಕೆಟ್ ನನಗೆ ಬಹಳಷ್ಟು ನೀಡಿದೆ. ಮುಖ್ಯವಾಗಿ ಅದು ನನಗೆ ನಿಮ್ಮೆಲ್ಲರ ಬೆಂಬಲವನ್ನು ನೀಡಿದೆ. ನನ್ನ ಪಯಣದಲ್ಲಿ ಭಾಗವಾದ, ಬೆಂಬಲ ನೀಡಿದ, ನಾನು ಈಗ ಇರುವ ಸ್ಥಿತಿಗೆ ಮುಟ್ಟಲು ಕಾರಣವಾದ ಪ್ರತಿಯೊಬ್ಬ ವ್ಯಕ್ತಿಗೂ ನಾನು ಧನ್ಯವಾದಗಳನ್ನು ಹೇಳುತ್ತೇವೆ. ಇವತ್ತು ನಾನು ಹೊಸತೊಂದನ್ನು ಆರಂಭಿಸಲು ಯೋಚಿಸುತ್ತಿದ್ದೇನೆ, ಇದರಿಂದ ಬಹಳಷ್ಟು ಜನರಿಗೆ ಸಹಾಯ ಮಾಡಬಲ್ಲೆ ಎಂದು ಟ್ವೀಟ್ ಮಾಡಿದ್ದಾರೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಸೌರವ್ ಗಂಗೂಲಿ ಟ್ವೀಟ್ ಹಲವು ಗೊಂದಲಿಗೆ ಕಾರಣವಾಗುತ್ತಿದ್ದಂತೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸ್ಪಷ್ಟನೆ ನೀಡಿದ್ದಾರೆ. ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ ಎಂದಿದ್ದಾರೆ.

error: Content is protected !!
Scroll to Top
%d bloggers like this: