ರಾಜ್ಯದಲ್ಲೊಂದು ಬೆಚ್ಚಿಬೀಳಿಸುವ ಘಟನೆ | ಮಗಳ ಶವದ ಜೊತೆ 4 ದಿನ ಕಳೆದ ಅಮ್ಮ!!!

ಮಗಳ ಮೃತದೇಹದ ಜೊತೆ ನಾಲ್ಕು ದಿನದಿಂದ ತಾಯಿ ವಾಸವಿದ್ದ ಭಯಾನಕ ಘಟನೆಯೊಂದು ಮಂಡ್ಯದಲ್ಲಿ ನಡೆದಿದೆ. ನಗರದ ಹಾಲಹಳ್ಳಿ ಕೆರೆಯ ನ್ಯೂ ತಮಿಳು ಕಾಲೋನಿಯಲ್ಲಿ ನಿನ್ನೆ(ಸೋಮವಾರ) ಬೆಳಕಿಗೆ ಬಂದಿದೆ. 30 ವರ್ಷದ ರೂಪ ಎಂಬುವರು ಮೃತಪಟ್ಟ ದುರ್ದೈವಿ.


Ad Widget

ನಾಲ್ಕು ದಿನಗಳ ಹಿಂದಯೇ ರೂಪ ಮೃತಪಟ್ಟಿದ್ದು ತಾಯಿ ನಾಗಮ್ಮ ಮಾತ್ರ ಮಗಳ ಸಾವಿನ ವಿಚಾರ ಯಾರಿಗೂ ತಿಳಿಸಿರಲಿಲ್ಲ. ಮನೆಯ ಬಾಗಿಲು ಹಾಕಿಕೊಂಡು ಮನೆ ಒಳಗೆ ಇದ್ದರಂತೆ. ಆದ್ರೆ 4 ದಿನಗಳಿಂದ ಮನೆಯಲ್ಲೇ ಇದ್ದ ಮೃತದೇಹ ಕೊಳೆತು ದುರ್ವಾಸನೆ ಬರಲು ಆರಂಭಿಸಿದೆ. ಆರಂಭದಲ್ಲಿ ಇಲಿ, ಹೆಗ್ಗಣ ಸತ್ತಿರಬಹುದು ಎಂದುಕೊಂಡು ಹುಡುಕಾಡಿದ್ದ ಅಕ್ಕಪಕ್ಕದವರು ಯಾವಾಗ ನಾಗಮ್ಮ ಮತ್ತು ರೂಪ ಮನೆಯಿಂದ ಹೊರಬರದೆ ಇದ್ದರೂ ಆಗ ಅನುಮಾನಗೊಂಡು, ಬಳಿಕ ಮಿಕ್ಸಿ ರಿಪೇರಿಗೆಂದು ಬಂದವನನ್ನ ಕರೆದು ಮನೆಯ ಬಾಗಿಲು ಹೊಡೆಸಿದ ಸ್ಥಳೀಯರು ಮನೆ ಒಳಗಿನ ದೃಶ್ಯ ನೋಡಿ ಬೆಚ್ಚಿಬಿದ್ದಿದ್ದರು.

ಮೃತಪಟ್ಟ ರೂಪಾಳ ಶವದ ಜೊತೆ ನಾಗಮ್ಮ ಕುಳಿತಿದ್ದಳು. ಆತಂಕದ ನಡುವೆಯೇ ಪೂರ್ವ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದ ಸ್ಥಳೀಯರು ಪೊಲೀಸರ ಸಹಾಯದೊಂದಿಗೆ ಮೃತದೇಹ ರವಾನಿಸಿದ್ದರು.


Ad Widget

30 ವರ್ಷ ವಯಸ್ಸಿನ ಮೃತ ರೂಪ ಹೋಮ್ ಗಾರ್ಡ್ ಆಗಿ ಕೆಲಸ ಮಾಡ್ತಿದ್ದರು. ಕೆಲ ತಿಂಗಳ ಹಿಂದೆ ಕಾರಣಾಂತರಗಳಿಂದ ಸಸ್ಪೆಂಡ್ ಆಗಿದ್ದರು. ಇತ್ತೀಚಿಗೆ ಮತ್ತೆ ಕೆಲಸಕ್ಕೆ ಬರುವುದಾಗಿ ಪತ್ರ ಬರೆದಿದ್ದಾರೆ. ಕಳೆದ 10 ವರ್ಷಗಳ ಹಿಂದೆ ವಿವಾಹವಾಗಿದ್ದ ರೂಪ ಕೌಟುಂಬಿಕ ಕಲಹ ಹಿನ್ನೆಲೆ 5 ವರ್ಷಗಳ ಹಿಂದೆ ಗಂಡ ಇಬ್ಬರು ಮಕ್ಕಳನ್ನ ಬಿಟ್ಟು ಪ್ರತ್ಯೇಕವಾಗಿದ್ದಾರೆ. ಗಂಡನಿಂದ ದೂರಾದ ಬಳಿಕ ತಾಯಿ ಮನೆಯಲ್ಲೇ ವಾಸವಿದ್ದರು. ಕೆಲದಿನಗಳಿಂದ ಕುಡಿತದ ಚಟಕ್ಕೆ ತಾಯಿ ಮಗಳಿಬ್ಬರು ಬಲಿಯಾಗಿದ್ದರಂತೆ. ಪ್ರತಿನಿತ್ಯ ಒಂದಲ್ಲ ಒಂದು ಕಾರಣಕ್ಕೆ ಇಬ್ಬರ ಮಧ್ಯೆ ಜಗಳವಾಗಿತ್ತಂತೆ. ಆದ್ರೆ ನಾಲ್ಕು ದಿನಗಳಿಂದ ಯಾವುದೇ ಮಾತುಕತೆ ಇಲ್ಲದೇ ಇಬ್ಬರು ಮನೆಯಿಂದ ಹೊರಬಾರದೆ ಇದ್ದಾಗ ಅಕ್ಕಪಕ್ಕದವರು ಅನುಮಾನಗೊಂಡಿದ್ದರು.


Ad Widget

ದುರ್ವಾಸನೆಗೆ ಬೇಸತ್ತು ಮನೆ ಬಾಗಿಲು ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಆದ್ರೆ ರೂಪ ಸಾವಿಗೆ ಕಾರಣ ಮಾತ್ರ ಇನ್ನು ತಿಳಿದು ಬಂದಿಲ್ಲ. ನಾಲ್ಕು ದಿನಗಳ ಹಿಂದೆ ಅಕ್ಕದವರನ್ನ ಪ್ರೀತಿಯಿಂದಲೇ ಮಾತನಾಡಿಸಿದ್ದ ರೂಪ ಬಳಿಕ ನಿಗೂಢವಾಗಿ ಸಾವನ್ನಪ್ಪಿರುವುದು ಅನುಮಾನ ಸೃಷ್ಟಿಸಿದೆ. ಸದ್ಯ ಶವಗಾರಕ್ಕೆ ಮೃತದೇಹ ರವಾನೆ ಮಾಡಲಾಗಿದ್ದು. ಶವಪರೀಕ್ಷೆ ಬಳಿಕ ಸಹಜ ಸಾವೋ ಇಲ್ಲವೋ ಎಂಬ ಸತ್ಯ ಹೊರಬರಲಿದೆ.

error: Content is protected !!
Scroll to Top
%d bloggers like this: