ಸಲಿಂಗಿಗಳ ಮದುವೆಗೆ ಸಾಕ್ಷಿಯಾಯಿತು ಕ್ರಿಕೆಟ್ ಲೋಕ !! | ಅದ್ಧೂರಿಯಾಗಿ ಮದುವೆ ಮಾಡಿಕೊಂಡ ಮಹಿಳಾ ಕ್ರಿಕೆಟ್ ಆಟಗಾರ್ತಿಯರು

ಸಲಿಂಗಿಗಳ ಮದುವೆಗೆ ಕ್ರೀಡಾಲೋಕ ಸಾಕ್ಷಿಯಾಗಿದೆ. ಇದೇ ಮೊದಲ ಬಾರಿಗೆ ಇಬ್ಬರು ಮಹಿಳಾ ಆಟಗಾರ್ತಿಯರು ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ‌ 2017ರ ಮಹಿಳಾ ಕ್ರಿಕೆಟ್ ವಿಶ್ವಕಪ್ ವಿಜೇತ ತಂಡದ ಆಟಗಾರ್ತಿಯರಾದ ಕ್ಯಾಥರೀನ್ ಬ್ರಂಟ್ ಮತ್ತು ನ್ಯಾಟ್ ಸೀವರ್ ಸಲಿಂಗ ವಿವಾಹ ಮಾಡಿಕೊಂಡಿದ್ದಾರೆ.

ವಿವಾಹವಾದ ಕ್ಯಾಥರೀನ್ ಬ್ರಂಟ್ ಮತ್ತು ನ್ಯಾಟ್ ಸೀವರ್ ಅವರಿಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ನಮ್ಮ ಆತ್ಮೀಯ ಅಭಿನಂದನೆಗಳು ಎಂದು ಶುಭ ಹಾರೈಸಿ ಟ್ವೀಟ್ ಮಾಡಿದೆ.


Ad Widget

Ad Widget

Ad Widget

Ad Widget

Ad Widget

Ad Widget

ತಂಡದ ನಾಯಕಿ ಹೀದರ್ ನೈಟ್, ಡ್ಯಾನಿ ವ್ಯಾಟ್, ಇಸಾ ಗುಹಾ, ಜೆನ್ನಿ ಗನ್ ಸೇರಿದಂತೆ ಇಂಗ್ಲೆಂಡ್ ತಂಡದ ಪ್ರಸ್ತುತ ಮತ್ತು ಹಿಂದಿನ ಆಟಗಾರರೆಲ್ಲರೂ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಬ್ರಂಟ್ ಮತ್ತು ಸೀವರ್ 2017ರ ವಿಶ್ವಕಪ್ ವಿಜೇತ ತಂಡದ ಆಟಗಾರ್ತಿಯಾರಾಗಿದ್ದಾರೆ. ಇವರಿಬ್ಬರು 2022ರ ಮಹಿಳಾ ವಿಶ್ವಕಪ್‍ನಲ್ಲಿ ಕಾಣಿಸಿಕೊಂಡಿದ್ದು, ಇದರಲ್ಲಿ ಇಂಗ್ಲೆಂಡ್ ರನ್ನರ್-ಅಪ್ ಆಗಿ ಹೊರಹೊಮ್ಮಿತ್ತು.

ನ್ಯೂಜಿಲೆಂಡ್‍ನಲ್ಲಿ ಇತ್ತೀಚೆಗೆ ನಡೆದ ಏಕದಿನ ಗ್ಲೋಬಲ್ ಇವೆಂಟ್‍ನಲ್ಲಿ, ಸೀವರ್ 121 ಎಸೆತಗಳಲ್ಲಿ ಅಜೇಯ 148 ರನ್ ಗಳಿಸಿದ್ದರು. ಆದರೆ ಅಂತಿಮವಾಗಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿದರು. ಅಕ್ಟೋಬರ್ 2019 ರಲ್ಲಿ ಬ್ರಂಟ್ ಜೊತೆಗಿನ ನಿಶ್ಚಿತಾರ್ಥವನ್ನು ಸೀವರ್ ಘೋಷಿಸಿದ್ದರು. ಸಲಿಂಗ ದಂಪತಿ ಸೆಪ್ಟೆಂಬರ್ 2020ರಲ್ಲಿ ಮದುವೆಯಾಗಬೇಕಿತ್ತು. ಆದರೆ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಅವರ ಮದುವೆಯನ್ನು ಮುಂದೂಡಲಾಗಿತ್ತು.

error: Content is protected !!
Scroll to Top
%d bloggers like this: