ವಿಕಾಸ ಥಟ್ ಅಂತ ಹೇಳಿ- ಸಿಂಧನೂರಿನ ದೇವರಾಜ ಪಾಟೀಲ್ ಪ್ರಥಮ.

ವಿಕಾಸ ಬ್ಯಾಂಕಿನ ಬೆಳ್ಳಿಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ, ಯಾಜಿ ಪ್ರಕಾಶನ ಮತ್ತು ವಿವಿಡ್ಲಿಪಿ ಸಹಯೋಗದೊಡನೆ ಡಾ.ನಾ. ಸೋಮೇಶ್ವರ ಅವರ ನೇತೃತ್ವದಲ್ಲಿ ಕನ್ನಡಿಗರಿಗಾಗಿ ಕನ್ನಡದ ಜನಪ್ರಿಯ ವಿಕಾಸ ಥಟ್ ಅಂತ ಹೇಳಿ ಸರಣಿ ಕಾರ್ಯಕ್ರಮ, ಸೋಮವಾರದಂದು ಆನ್ಲೈನ್ ವೇದಿಕೆಯಲ್ಲಿ ನಡೆಯಿತು.

ಈ ವಾರದ ಸ್ಪರ್ಧೆಯನ್ನು ವಿಶೇಷವಾಗಿ ಎಂಜಿನಿಯರಿಂಗ್ ಸಮುದಾಯಕ್ಕಾಗಿ ಹಮ್ಮಿಕೊಳ್ಳಲಾಗಿತ್ತು. ಹೊಸಪೇಟೆ ಶಾಖೆಯಿಂದ ವಿವೇಕಾನಂದ ಎಸ್.ಎಸ್, ಸಿಂಧನೂರು ಶಾಖೆಯಿಂದ ದೇವರಾಜ ಪಾಟೀಲ್, ಹುಬ್ಬಳ್ಳಿ ಶಾಖೆಯಿಂದ ರಾಜೇಶ್ವರಿ ಅಗರವಾಲ್ ಹಾಗೂ ಬಳ್ಳಾರಿ ಶಾಖೆಯಿಂದ ರೋಖಿಯ ಬೇಗಂ ಅವರು ಸ್ಪರ್ಧಿಗಳಾಗಿ ಭಾಗವಹಿಸಿದ್ದರು.

8 ಸುತ್ತುಗಳ ಕಾರ್ಯಕ್ರಮದಲ್ಲಿ ಅಂತಿಮವಾಗಿ ಸಿಂಧನೂರಿನ ದೇವರಾಜ ಪಾಟೀಲ್ 130 ಅಂಕ ಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರು. ಉಳಿದಂತೆ ಹುಬ್ಬಳ್ಳಿಯ ರಾಜೇಶ್ವರಿ ಅಗರವಾಲ್ ಹಾಗೂ ಹೊಸಪೇಟೆಯ ವಿವೇಕಾನಂದ.ಎಸ್.ಎಸ್ ಸಮಾನವಾಗಿ 120 ಅಂಕಗಳನ್ನು ಮತ್ತು ಬಳ್ಳಾರಿಯ ರೋಖಿಯ ಬೇಗಂ 100 ಅಂಕಗಳನ್ನು ಗಳಿಸಿದರು.

ಈ ಕಾರ್ಯಕ್ರಮವು ಬಳ್ಳಾರಿ ಶಾಖೆಯ ಬಸಯ್ಯ.ಎಸ್.ಪಿ ಮತ್ತು ಅವರ ತಂಡದ ಮುಂದಾಳತ್ವದಲ್ಲಿ ನಡೆಯಿತು.
ಕಾರ್ಯಕ್ರಮದ ನೇರ ಪ್ರಸಾರ ವಿಕಾಸ ಬ್ಯಾಂಕಿನ ಯೂಟ್ಯೂಬ್ ಮತ್ತು ಫೇಸ್ಬುಕ್ ನಲ್ಲಿ ಹಾಗೂ ವಿವಿಡ್ಲಿಪಿಯ ಯೂಟ್ಯೂಬ್ ಮತ್ತು ಫೇಸ್ಬುಕ್ ಚಾನೆಲ್ ನಲ್ಲಿ ಪ್ರಸಾರಗೊಂಡಿತ್ತು.

Leave A Reply