ನಿಮ್ಮ ಫ್ರೆಂಡ್ಸ್ ವಾಟ್ಸಪ್ ಸ್ಟೇಟಸ್ ಅವರಿಗೆ ತಿಳಿಯದಂತೆ ನೋಡುವುದು ಹೇಗೆ ? ಇಲ್ಲಿದೆ ಸುಲಭ ಟ್ರಿಕ್ !!!

ವಾಟ್ಸಪ್ ಮೆಸೇಜಿಂಗ್ ಅಪ್ಲಿಕೇಶನ್ ಇಂದು ಸಾಕಷ್ಟು ಜನಪ್ರಿಯತೆ ಪಡೆದುಕೊಂಡ ಆ್ಯಪ್ ಎಂದರೆ ತಪ್ಪಾಗಲಾರದು. ಮೆಟಾ ಒಡೆತನದ ಈ ಅಪ್ಲಿಕೇಶಮ್ ಹೊಸ ಹೊಸ ಅಪ್ಡೇಟ್ಸ್ ಗಳನ್ನು ತನ್ನ ಗ್ರಾಹಕರಿಗೆ ನೀಡುತ್ತಲೇ ಇರುತ್ತದೆ.

ವಿಶ್ವದಲ್ಲಿ 200 ಕೋಟಿಗೂ ಅಧಿಕ ಮಂದಿ ವಾಟ್ಸಪ್ ಆ್ಯಪ್ ನ್ನು ಉಪಯೋಗಿಸುತ್ತಾರೆ. ಈ ಆ್ಯಪ್ ನಲ್ಲಿ ಅದೆಷ್ಟೋ ಮಂದಿಗೆ ತಿಳಿದಿರದ ಅದೆಷ್ಟೋ ಟ್ರಿಕ್‌ಗಳಿವೆ. ಡಿಲೀಟ್ ಆದ ಮೆಸೇಜ್ ನೋಡುವುದೋ, ಅಥವಾ ನಮ್ಮ ಡಿಪಿಯನ್ನು ಯಾರೆಲ್ಲ ನೋಡಿದ್ದಾರೆಂಬ ಬಗ್ಗೆ ಇರಬಹುದು ಈ ತರಹ ಅನೇಕ ಹಿಡನ್ ಸೀಕ್ರೇಟ್ ವಾಟ್ಸಪ್ ನಲ್ಲಿದೆ. ಅಂತೆಯೇ ವಾಟ್ಸಪ್‌ನಲ್ಲಿ ಬೇರೆ ಮಂದಿ ಹಂಚಿಕೊಂಡ ಸ್ಟೇಟಸ್ ಅನ್ನು ಅವರಿಗೆ ತಿಳಿಯದಂತೆ ನೋಡಬಹುದು. ಇದಕ್ಕೂ ಟ್ರಿಕ್‌ಗಳಿವೆ. ಇದಕ್ಕಾಗಿ ನೀವು ಥರ್ಡ್ ಪಾರ್ಟಿ ಆ್ಯಪ್ ಮೊರೆ ಹೋಗಬೇಕು ಅಂತಿಲ್ಲ. ಬದಲಾಗಿ ವಾಟ್ಸ್ ಆ್ಯಪ್ ಸೆಟ್ಟಿಂಗ್‌ನಲ್ಲಿ ಕೊಂಚ ಬದಲಾವಣೆ ಮಾಡುವ ಮೂಲಕ ಈ ಟ್ರಿಕ್ ಉಪಯೋಗಿಸಬಹುದು.

ವಾಟ್ಸ್‌ಆ್ಯಪ್ ಸ್ಟೇಟಸ್ ನ್ನು ಮಿಸ್ ಮಾಡದೇ ಎಲ್ಲರೂ ಬಳಸುತ್ತಾರೆ. ವಾಟ್ಸಪ್ ಸ್ಟೇಟಸ್ 24 ಗಂಟೆಗಳ ಅವಧಿ ಕಾಲಮಿತಿ ಹೊಂದಿದ್ದು, ಅನಂತರ ತನ್ನಿಂತಾನೇ ಆಗಿ ಸ್ಟೇಟಸ್ ಡಿಲೀಟ್ ಆಗಿಬಿಡುತ್ತದೆ. ವಾಟ್ಸಪ್ ಸ್ಟೇಟಸ್ ಯಾರೆಲ್ಲಾ ವೀಕ್ಷಿಸಿದ್ದಾರೆ ಎನ್ನುವ ಮಾಹಿತಿ ಬಳಕೆದಾರರಿಗೆ ಸಾಮಾನ್ಯವಾಗಿ ಸಿಗುತ್ತದೆ. ಆದರೆ ನೀವು ಯಾರ ಸ್ಟೇಟಸ್ ನೋಡಿದರೂ ಅದು ಅವರಿಗೆ ತಿಳಿಯದಂತೆ ಸೆಟ್ ಮಾಡಬಹುದಾಗಿದೆ. ಅದಕ್ಕೆ ಇಲ್ಲಿದೆ ನೋಡಿ ಸುಲಭ ಟ್ರಿಕ್ಸ್ :

ಮೊದಲು ನಿಮ್ಮ ಫೋನ್‌ನಲ್ಲಿನ ವಾಟ್ಸ್ ಆ್ಯಪ್ ಅಪ್ಲಿಕೇಶನ್‌ಗೆ ಹೋಗಿ ನಂತರ ಸೆಟ್ಟಿಂಗ್‌ ಮೆನು ತೆರೆಯಿರಿ, ಅನಂತರ ಪ್ರೈವಸಿ ಸೆಟ್ಟಿಂಗ್‌ಗೆ ಕೆಳಗೆ ಸ್ಕ್ರೋಲ್ ಮಾಡಿ, ನೀವು ಅಲ್ಲಿ ಕೆಲವು ಆಯ್ಕೆಗಳು ಇರುತ್ತದೆ, ಅಲ್ಲಿ ಕೆಳಗೆ Read receipts ಆಯ್ಕೆಯನ್ನು ನಿಷ್ಕ್ರಿಯಗೊಳಿಸಿ. ನಂತರ, ನೀವು ಬಳಕೆದಾರರ(ನಿಮ್ಮ ಕಾಂಟ್ಯಾಕ್ಟ್) ವಾಟ್ಸಪ್ ಸ್ಟೇಟಸ್ ವೀಕ್ಷಿಸಿದ್ದಿರಾ ಅಥವಾ ಇಲ್ಲವೇ ಎಂಬುದು ತಿಳಿಯುವುದಿಲ್ಲ.

Leave A Reply

Your email address will not be published.