2021 ನೇ ಸಾಲಿನ UPSC ಪರೀಕ್ಷೆಯ ರಿಸಲ್ಟ್ ಪ್ರಕಟ | ಕರ್ನಾಟಕದ 24 ಅಭ್ಯರ್ಥಿಗಳು ಉತ್ತೀರ್ಣ

ನವದೆಹಲಿ: 2021ನೇ ಸಾಲಿನ ನಾಗರೀಕ ಸೇವಾ ಪರೀಕ್ಷೆ( UPSC )ಯ ಫಲಿತಾಂಶವನ್ನು ಇಂದು ಪ್ರಕಟಿಸಲಾಗಿದ್ದು, ಈ ಪರೀಕ್ಷೆಯಲ್ಲಿ ಕರ್ನಾಟಕದ 22 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ದಾವಣಗೆರೆಯ ಅವಿನಾಶ್ ಎಂಬುವರು 31ನೇ ರ್ಯಾಂಕ್ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದು, 24 ಕರ್ನಾಟಕದ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.

ಇಂದು ಪ್ರಕಟವಾದ ಅಂತಿಮ ಫಲಿತಾಂಶದಲ್ಲಿ ಶ್ರುತಿ ಶರ್ಮಾ ಅಖಿಲ ಭಾರತ ಮಟ್ಟದಲ್ಲಿ 1ನೇ ಸ್ಥಾನ ಪಡೆದಿದ್ದಾರೆ. ಮೊದಲ ಮೂರು ಸ್ಥಾನಗಳನ್ನು ಈ ವರ್ಷ ಮಹಿಳಾ ಅಭ್ಯರ್ಥಿಗಳು ಪಡೆಯುವ ಮೂಲಕ ಮೇಲು ಗೈ ಸಾಧಿಸಿದ್ದಾರೆ. ಶ್ರುತಿ ಸೇಂಟ್ ಸ್ಟೀಫನ್ಸ್ ಕಾಲೇಜು ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿದ್ದು, ಜಾಮಿಯಾ ಮಿಲಿಯಾ ಇಸ್ಲಾಮಿಯಾ ರೆಸಿಡೆನ್ಷಿಯಲ್ ಕೋಚಿಂಗ್ ಅಕಾಡೆಮಿಯಲ್ಲಿ ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಗೆ ತಯಾರಿ ನಡೆಸಿದ್ದರು.

ಯುಪಿಎಸ್ಸಿ ಸಿಎಸ್‌ಇ ಪೂರ್ವಭಾವಿ ಪರೀಕ್ಷೆಯನ್ನು ಅಕ್ಟೋಬರ್ 10, 2021 ರಂದು ನಡೆಸಲಾಯಿತು. ಪರೀಕ್ಷೆಯ ಫಲಿತಾಂಶಗಳನ್ನು ಅಕ್ಟೋಬರ್ 29 ರಂದು ಬಿಡುಗಡೆ ಮಾಡಲಾಯಿತು. ಮುಖ್ಯ ಪರೀಕ್ಷೆಯನ್ನು ಜನವರಿ 7 ರಿಂದ 16, 2022 ರವರೆಗೆ ನಡೆಸಲಾಯಿತು. ಫಲಿತಾಂಶಗಳನ್ನು ಮಾರ್ಚ್ 17, 2022 ರಂದು ಘೋಷಿಸಲಾಯಿತು. ಏಪ್ರಿಲ್ 5 ರಂದು ಪ್ರಾರಂಭವಾದ ಮತ್ತು ಮೇ 26ರಂದು ಮುಕ್ತಾಯಗೊಂಡ ಪರೀಕ್ಷೆಯ ಕೊನೆಯ ಸುತ್ತಿನ ಸಂದರ್ಶನ ನಡೆಸಲಾಯಿತು.

UPSC ಪರೀಕ್ಷೆಯಲ್ಲಿ ಉತ್ತೀರ್ಣರಾದ ಕರ್ನಾಟಕದ 24 ಅಭ್ಯರ್ಥಿಗಳು :

ಬೆನಕ ಪ್ರಸಾದ್ 92 Rank
ನಿಖಿಲ್ ಬಸವಾರಾಜ್ ಪಾಟೀಲ್- 139
ಮೆಲ್ವನ್ 118
ವಿನಯ್ ಕುಮಾರ್ 151
ಚಿತ್ರಂಜನ್ 155
ಅಪೂರ್ವ ಬಸೂರ್ 191
ಮನೋಜ್ ಹೆಗ್ಡೆ 213
ಮುಂಜುನಾಥ್ 219
ರಾಜೇಶ್ ಪೊನ್ನಪ್ಪ 22
ಹರ್ಷವರ್ಧನ್ 318
ಗಜಾನನ ಬಾಳೆ 319
ವಿನಯ್ ಕುಮಾರ್ – 352
ಕಲ್ಪಶ್ರೀ 291
ಕ್ಯೂಮರ್ ಉದ್ದೇನ್ ಖಾನ್ 414
ಮೇಘನಾ 425
ಚೇತನ ಕೆ 532
ರವಿನಂದನ್ 455
ಸವಿತಾ 497
ಮೊಹ್ಮದ್ ಷರೀಪ್ 479
ಸಚಿನ್ 682
ಪ್ರಶಾಂತ್ ಕುಮಾರ್ 641
ರಾಘವೇಂದ್ರ 649 Rank ಗಳಿಸಿದ್ದಾರೆ.

ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ upsc.gov.in ನಲ್ಲಿ ತಮ್ಮ ಫಲಿತಾಂಶಗಳನ್ನು ವೀಕ್ಷಿಸಬಹುದಾಗಿದೆ.

Leave A Reply

Your email address will not be published.