ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಗೆ ಇಂದು ಮೋದಿಯಿಂದ ಚಾಲನೆ | ಈ ಯೋಜನೆಯಡಿಯಲ್ಲಿ ಮಕ್ಕಳಿಗೆ ಸಿಗುವ ಪ್ರಯೋಜನಗಳೇನು ??

ದೇಶಕ್ಕೆ ಕೊರೋನಾ ಅಪ್ಪಳಿಸಿದ ಕಾರಣ ಅದೆಷ್ಟೋ ಮಕ್ಕಳು ಅನಾಥರಾಗಿದ್ದಾರೆ. ಹೀಗೆ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳ ನೆರವಿಗಾಗಿ ಕೇಂದ್ರ ಸರ್ಕಾರ ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಯನ್ನು ಆರಂಭಿಸಿತ್ತು. ಈ ಯೋಜನೆಯಡಿ ಇಂದು ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ.


Ad Widget

Ad Widget

ಇಂದು ಬೆಳಗ್ಗೆ 11 ಗಂಟೆಗೆ ಈ ಯೋಜನೆಗೆ ಪ್ರಧಾನಿ ಮೋದಿ ವೀಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ. ಸ್ಕಾಲರ್‌ಶಿಪ್‌ಗೆ ಸಂಬಂಧಿಸಿದ ಪೋಸ್ಟ್‌ ಆಫೀಸ್‌ ಪಾಸ್‍ಬುಕ್ ಜೊತೆಗೆ ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಕೂಡ ನೀಡಲಾಗುತ್ತದೆ ಎಂದು ಪ್ರಧಾನಿಮಂತ್ರಿಗಳ ಕಾರ್ಯಾಲಯ ತಿಳಿಸಿದೆ.


Ad Widget

2020 ಮಾರ್ಚ್ 11ರಿಂದ 2022ರ ಮಾರ್ಚ್ 28ರ ಅವಧಿಯಲ್ಲಿ ಕೋವಿಡ್‍ನಿಂದ ಸಾವನ್ನಪ್ಪಿದವರ ಮಕ್ಕಳು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ. ಸಮಗ್ರ ರಕ್ಷಣೆಯ ಭಾಗವಾಗಿ ಈ ಮಕ್ಕಳಿಗೆ ವಸತಿ, ವಿದ್ಯೆ, ಸ್ಕಾಲರ್‌ಶಿಪ್‌ ಸಿಗಲಿದೆ. ಉನ್ನತ ಶಿಕ್ಷಣಕ್ಕೂ ನೆರವು ಸಿಗಲಿದೆ.

23 ವರ್ಷಕ್ಕೆ ಬಂದಾಗ ಆರ್ಥಿಕವಾಗಿ ಸ್ವಯಂಸಮೃದ್ಧಿ ಹೊಂದಲು 10 ಲಕ್ಷ ರೂಪಾಯಿ ನೆರವು ಕೂಡ ಯೋಜನೆಯಡಿ ಸಿಗಲಿದೆ. ಈ ಯೋಜನೆಯಡಿ ನೋಂದಾಯಿಸಿಕೊಳ್ಳಲು ಪ್ರತ್ಯೇಕ ವೆಬ್ ಪೋರ್ಟಲ್ ತೆರೆಯಲಾಗಿದೆ. ಈವರೆಗೂ ಬಂದ ಅರ್ಜಿಗಳ ಪರಿಶೀಲನೆ ಆಗಿ, ಅನುಮೋದನೆಗೊಂಡ ಬಾಧಿತ ಮಕ್ಕಳಿಗೆ ಇಂದು ಪ್ರಧಾನಿ ಮೋದಿ ನೆರವು ನೀಡಲಿದ್ದಾರೆ.

Ad Widget

Ad Widget

Ad Widget

ಮಕ್ಕಳಿಗೆ ಮಾರ್ಚ್‌ 2022 ರಿಂದ ಪ್ರತಿ ತಿಂಗಳು 2,500 ರೂ. ಸ್ಪೈಫಂಡ್‌, ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ 50,000 ರೂ. ಮತ್ತು ಆಯುಷ್ಮಾನ್‌ ಹೆಲ್ತ್‌ ಕಾರ್ಡ್‌ ಮೂಲಕ 5 ಲಕ್ಷ ರೂ. ವಿಮೆ ಸಿಗಲಿದೆ.

error: Content is protected !!
Scroll to Top
%d bloggers like this: