ಇದು ಹೂವಿನ ಹಾರ ಅಲ್ಲ, ಹಾವಿನ ಹಾರ | ಹಾರದ ಬದಲು ಹಾವನ್ನೇ ಬದಲಾಯಿಸಿ ಮದುವೆ ಮಾಡಿಕೊಂಡ ವಧು ವರರು |

0 17

ಮದುವೆಯ ದಿನ ಗಂಡು ಹೆಣ್ಣು ಪರಸ್ಪರ ಹಾರ ಬದಲಾಯಿಸುವುದನ್ನು ನೋಡಿದ್ದೇವೆ. ಆದರೆ ಎಲ್ಲಾದರೂ ನೀವು ಹೂವಿನ ಹಾರದ ಬದಲು ಹಾವನ್ನೇ ಹೂವಿನ ಹಾರದ ರೀತಿಯಲ್ಲಿ ಯಾವುದೇ ಭಯವಿಲ್ಲದೆ ಹಾಕಿದ್ದನ್ನು ನೋಡಿದ್ದೀರಾ? ವಿಚಿತ್ರ ಎನಿಸಿದರೂ ಮಹಾರಾಷ್ಟ್ರದಲ್ಲಿ ಇಂತಹ ಘಟನೆಯೊಂದು ನಡೆದಿದೆ.

ಮದುವೆ ಸಂದರ್ಭದಲ್ಲಿ ಸಾಮಾನ್ಯವಾಗಿ ಗಂಡು ಹೆಣ್ಣು ಹಾರ ಬದಲಾವಣೆ ಮಾಡುತ್ತಾರೆ. ಆದರೆ ಇಲ್ಲೊಂದು ವಿಚಿತ್ರ ನಡೆದಿದೆ. ಹಾವು ಎಂದರೆ ಭಯಬಿದ್ದು ದೂರ ಓಡೋ ಈ ಕಾಲದಲ್ಲಿ ಹಾವನ್ನೇ ಹಾರ ಮಾಡಿದ ಜೋಡಿಗೆ ಭೇಷ್ ಎನ್ನಲೇಬೇಕು. ಈ ಜೋಡಿ ಹಾವನ್ನೇ ಪರಸ್ಪರರ ಕೊರಳಿಗೆ ಹಾಕಿದ್ದನ್ನು ನೋಡಿ ಜನ ದಂಗಾಗಿದ್ದಾರೆ.

ಮಹಾರಾಷ್ಟ್ರದ ಬೀಡ್ ಜಿಲ್ಲೆಯ ದೂರದ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ವೀಡಿಯೋದಲ್ಲಿ ಕಾಣಿಸುವಂತೆ ದಂಪತಿಗಳು ಬಿಳಿ ಬಟ್ಟೆಗಳನ್ನು ಧರಿಸಿ, ಪರಸ್ಪರರ ಕುತ್ತಿಗೆಗೆ ಹಾವುಗಳನ್ನು ಹಾಕುತ್ತಾರೆ. ಅಲ್ಲದೇ ವಧುವಾಗಲಿ ವರನಾಗಲಿ ಹಾವನ್ನು ಕಂಡು ಹೆದರುವುದಿಲ್ಲ. ವಧು ಮೊದಲು ವರನ ಕುತ್ತಿಗೆಗೆ ದೊಡ್ಡ ಹಾವನ್ನು ಹಾಕುತ್ತಾಳೆ. ನಂತರ ವರನ ಸರದಿ ಬಂದಾಗ, ಅವನು ದೊಡ್ಡ ಹೆಬ್ಬಾವನ್ನು ತಂದು ವಧುವಿನ ಕುತ್ತಿಗೆಗೆ ಹಾಕುತ್ತಾನೆ. ಅದರ ನಂತರ ದಂಪತಿಗಳು ಫೋಟೋಗಳಿಗೆ ಪೋಸ್ ನೀಡುತ್ತಾರೆ. ಈ ಮದುವೆಯಲ್ಲಿ ಪಾಲ್ಗೊಳ್ಳಲು ಅಪಾರ ಜನಸ್ತೋಮವೇ ನೆರೆದಿತ್ತು. ಗಮನಾರ್ಹ ವಿಚಾರ ಎಂದರೆ ಇಬ್ಬರು ಸ್ಥಳೀಯ ಸ್ಥಳೀಯ ವನ್ಯಜೀವಿ ಇಲಾಖೆ ನೌಕರರಾಗಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ, ಅವರು ರಾಜ್ಯದ ದೂರದ ಜಿಲ್ಲೆಯಲ್ಲಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ.

https://www.instagram.com/reel/CeEF98fItMW/?utm_source=ig_web_copy_link

ಈ ವೀಡಿಯೋ ವೈರಲ್ ಆಗಿದ್ದು ನೆಟ್ಟಿಗರು ದೃಶ್ಯ ನೋಡಿ ಬೆಚ್ಚಿ ಬಿದ್ದಿದ್ದಾರೆ. ಹಾವುಗಳು ಭಯಾನಕ ಜೀವಿಗಳಾಗಿದ್ದು, ಅವುಗಳ ಗಾತ್ರ ಅಥವಾ ತಳಿಯ ಹೊರತಾಗಿಯೂ, ಅವುಗಳೊಂದಿಗೆ ಯಾವುದೇ ಚೆಲ್ಲಾಟ ಜೀವಕ್ಕೆ ಸಂಚಾಕಾರ ತರಬಲ್ಲದು. ಅಂತಹದರಲ್ಲಿ ಈ ಜೋಡಿ ಅವುಗಳನ್ನು ಕುತ್ತಿಗೆಯಲ್ಲಿ ನೇತಾಡಿಸಿಕೊಂಡು ಮದುವೆಯಾಗಿದ್ದು ಜನರನ್ನು ಬೆಚ್ಚಿ ಬೀಳಿಸಿದೆ.

Leave A Reply