ಧರ್ಮಸ್ಥಳದಲ್ಲಿ ಅಪರೂಪದ ಹಾವು ಪತ್ತೆ

ಪಶ್ಚಿಮ ಘಟ್ಟ ಹಾಗೂ ಅರಣ್ಯ ಪ್ರದೇಶದಲ್ಲಿ ಮಾತ್ರ ಕಂಡು ಬರುವ ವಿಷರಹಿತ ಅಪರೂಪದ ‘ ಸಾರಿಬಾಳ ‘ ಹಾವು  ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ದಾಮೋದರ್ ಎಂಬವರ ಮನೆಯಲ್ಲಿ ಪತ್ತೆಯಾಗಿದೆ.

ಅದನ್ನು ಬೆಳ್ತಂಗಡಿಯ ಸ್ನೇಕ್ ಅಶೋಕ್ ಲಾಯಿಲ ಅವರು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ. ಸ್ನೇಕ್ ಅಶೋಕ್ ಅವರು 6 ವರ್ಷದ ಹಿಂದೆ ಲಾಯಿಲ ಗ್ರಾಮದ ಕಿಂಡಾಜೆ ಎಂಬಲ್ಲಿ ಸಾರಿಬಾಳ ಹಾವನ್ನು ಮೊದಲ ಬಾರಿ ಹಿಡಿದ್ದಿದ್ದರು ಇದಾದ ಬಳಿಕ ಧರ್ಮಸ್ಥಳದಲ್ಲಿ ಎರಡನೇ ಭಾರಿ ಸುಮಾರು 7 ಅಡಿ ಉದ್ದದ ಹಾವು ಪತ್ತೆಯಾಗಿದೆ.

ಸಾರಿಬಾಳ ಅಳಿವಿನಂಚಿನಲ್ಲಿರುವ ವಿಷರಹಿತ ಹಾವಾಗಿದ್ದು, ಇದರ ಸಂತತಿ ಕೂಡ ಕಡಿಮೆಯಾಗಿದೆ. 

Leave A Reply

Your email address will not be published.