ಉಪ್ಪಿನಂಗಡಿ: ಬಸ್ಸಿನಲ್ಲಿ ಅನ್ಯಕೋಮಿನ ಯುವಕನಿಂದ ಹಿಂದೂ ಮಹಿಳೆಗೆ ಕಿರುಕುಳ!! ಬಸ್ ಸಿಬ್ಬಂದಿಯ ಅಸಡ್ಡೆಯ ವರ್ತನೆಗೆ ಅರ್ಧದಲ್ಲೇ ಇಳಿದ ಸಂತ್ರಸ್ತೆ

ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಖಾಸಗಿ ಬಸ್ ನಲ್ಲಿ ಅನ್ಯ ಕೋಮಿನ ಯುವಕನೊಬ್ಬ ಹಿಂದೂ ಮಹಿಳಾ ಪ್ರಯಾಣಿಕೆಗೆ ಕಿರುಕುಳ ನೀಡಿದ್ದರಿಂದ ಮನನೊಂದು ಮಹಿಳೆ ನಡು ದಾರಿಯಲ್ಲಿ ಇಳಿದು ಸಂಬಂಧಿಕರ ಮನೆಗೆ ತೆರಳಿ ಬಚಾವಾದ ಘಟನೆ ಉಪ್ಪಿನಂಗಡಿ ಸಮೀಪ ನಡೆದಿದೆ.

ಘಟನೆಯ ವಿವರ: ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಮಹಿಳೆಯೊಬ್ಬರು ತನ್ನ ಮಗುವಿನ ಜೊತೆಗೆ ಉಪ್ಪಿನಂಗಡಿ ಸಮೀಪದ ತನ್ನ ಸಂಬಂಧಿಕರ ಮನೆಗೆ ಬಂದು ಮತ್ತೆ ಬೆಂಗಳೂರಿಗೆ ಪ್ರಯಾಣಿಸಲೆಂದು ರೆಡ್ ಬಸ್ ಆಪ್ ಮುಖಾಂತರ ಭಾರತಿ ಬಸ್ ನಲ್ಲಿ ಸ್ಲೀಪರ್ ಸೀಟ್ ಬುಕ್ ಮಾಡಿದ್ದರು. ಮಹಿಳೆ ಉಪ್ಪಿನಂಗಡಿಯಲ್ಲಿ ಬಸ್ ಹತ್ತಿದ ವೇಳೆ ಅದ್ಯಾವುದೋ ನಶೆಯಲ್ಲಿದ್ದ ತೂರಾಡುತ್ತಿದ್ದ ಮುಸ್ಲಿಂ ಯುವಕನೊಬ್ಬ ಮಹಿಳೆ ಬುಕ್ ಮಾಡಿದ ಸ್ಲೀಪರ್ ಸೀಟ್ ನಲ್ಲಿ ಕುಳಿತಿರುತ್ತಾನೆ. ಈ ವೇಳೆ ಈ ವಿಚಾರವನ್ನು ಮಹಿಳೆಯು ಬಸ್ ನ ಚಾಲಕ ಮತ್ತು ನಿರ್ವಾಹಕನ ಗಮನಕ್ಕೆ ತಂದಿದ್ದಾರೆ. ಬಸ್ ಚಲಾಯಿಸುತ್ತಿದ್ದ ವೇಳೆ ನಿರ್ವಾಹಕ ಆ ಯುವಕನನ್ನು ವಿಚಾರಿಸಿದ್ದು, ಈ ಸಂದರ್ಭದಲ್ಲಿ ನಿರ್ವಾಹಕ ಮತ್ತು ಮುಸ್ಲಿಂ ಯುವಕನ ನಡುವೆ ಮಾತಿಗೆ ಮಾತು ಬೆಳೆದು ನಿಂತಿದೆ. ನಾನು ಬುಕ್ ಮಾಡಿದ ಸೀಟ್ ಎಂದು ಅಲ್ಲಿಂದ ಕದಡಲಿಲ್ಲ. ಟಿಕೆಟ್ ತೋರಿಸಲು ನಿರಾಕರಿಸಿದ್ದಾನೆ.
ಈ ವೇಳೆ ಯಾರ ಮಾತು ಕೂಡಾ ಲೆಕ್ಕಿಸದ ಯುವಕನನ್ನು ಕಂಡ ಮಹಿಳೆ ಅಪಾಯವನ್ನರಿತು ತಕ್ಷಣವೇ ತನ್ನ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ.

ಈ ವೇಳೆ ಗಾಬರಿಗೊಂಡ ಸಂಬಂಧಿಕರು ಬಸ್ ನಿಲ್ಲಿಸುವಂತೆ ಹೇಳಿ.. ಆ ಸ್ಥಳಕ್ಕೆ ಧಾವಿಸಿದ್ದಾರೆ. ಈ ಸಂಧರ್ಭ ಆ ಯುವಕನನ್ನು ವಿಚಾರಿಸಿದಾಗ ಆತ ನಶೆಯಲ್ಲಿದ್ದು ಕಂಡು ಬಂದಿದೆ. ಮತ್ತು ಆತನನ್ನು ಬಸ್ ನಿರ್ವಾಹಕ ಮತ್ತು ಚಾಲಕನಿಗೆ ಬಸ್ ನಿಂದ ಕೆಳಗಿಳಿಸುವ ತಾಕತ್ತು ಇಲ್ಲದಾಗಿದ್ದು ಬೆಳಕಿಗೆ ಬಂದಿದೆ.

ಕೊನೆಗೆ ಮಹಿಳೆಯ ಸಂಬಂಧಿಕರು ಮಹಿಳೆಯನ್ನು ಬಸ್ ನಿಂದ ಅರ್ಧದಾರಿಯಲ್ಲಿ ಕೆಳಗಿಳಿಸಿ ಸುರಕ್ಷಿತವಾಗಿ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ.

ಈ ಬಗ್ಗೆ ಮಹಿಳೆ ಸಂಬಂಧಿಕರು ರೆಡ್ ಬಸ್ ಆಪ್ ಗೆ ಮತ್ತು ಭಾರತಿ ಬಸ್ ಸಂಸ್ಥೆಯ ಕಚೇರಿಗೆ ದೂರು ನೀಡಿದ್ದಾರೆ.
ಈ ಯುವಕ ಎಲ್ಲಿ ಟಿಕೆಟ್ ಬುಕ್ ಮಾಡಿದ್ದಾನೆ, ಹಾಗಾದ್ರೆ ಆತ ಮಹಿಳೆ ಮಹಿಳೆ ಹೆಸರಿನಲ್ಲಿ ಸೀಟ್ ಬುಕ್ ಮಾಡಿದ್ದಾನೆಯೇ ಎಂಬುವುದು ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈಗಾಗಲೇ ಉಪ್ಪಿನಂಗಡಿ ಪರಿಸರದಲ್ಲಿ ಅನೇಕ ಕೋಮು ಪ್ರಚೋದಿತ ಪ್ರಕರಣಗಳು ಕಂಡುಬರುತ್ತಿದ್ದು, ಇಂತಹ ಪ್ರಕರಣಗಳನ್ನು ಅನ್ಯ ಕೋಮಿನ ಯುವಕರು ಪ್ರಿ ಪ್ಲಾನ್ ಆಗಿ ಮಾಡುತ್ತಿದ್ದಾರೆಯೋ ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ..

ಬಸ್ ನಲ್ಲಿದ್ದ ಉಳಿದ ಪ್ರಯಾಣಿಕರು ಮಹಿಳೆಯ ಪರ ಮಾತನಾಡಿದಾಗ ಬಸ್ ಡ್ರೈವರ್ , ನಿರ್ವಾಹಕ , ಮತ್ತು ಇತರ ಇಬ್ಬರು ಗುಂಪು ನಡೆಸಿ ಮಾತನಾಡಿದ್ದಾರೆ . ಇದು ಇನ್ನಷ್ಟು ಸಂಶಯಕ್ಕೆ ಕಾರಣವಾಗಿದೆ

ಒಂದು ಮಹಿಳೆಯನ್ನು ಬೇಜವಾಬ್ದಾರಿಯಿಂದ ವರ್ತಿಸಿ ಬಸ್ಸಿನಲ್ಲಿ ಪ್ರಯಾಣಕ್ಕೆ ಅನುವು ಮಾಡಿ ಕೊಡದ ಭಾರತಿ ಬಸ್ ನ ಮತ್ತು ಇಂತಹ ಗೂಂಡಾ ಕಾಮುಕರ ವಿರುದ್ಧ ಹೆಚ್ಚಿನ ತನಿಖೆ ನಡೆಸಬೇಕೆಂದು ಮಹಿಳೆಯ ಸಂಬಂಧಿಕರು ಒತ್ತಾಯಿಸಿದ್ದಾರೆ.

Leave A Reply

Your email address will not be published.