ಕನ್ನಡದ ನಟರ ಹೆಸರಲ್ಲಿರುವ ರಸ್ತೆಗಳ ಬಗ್ಗೆ ನಿಮಗೆ ತಿಳಿದಿದೆಯೇ? ಏಷ್ಯಾದಲ್ಲೇ ಉದ್ದನೆಯ ರಸ್ತೆ ಯಾರ ಹೆಸರಲ್ಲಿದೆ?

ನಮ್ಮ‌ ರಾಜ್ಯದಲ್ಲಿ ಸಿನಿಮಾ ನಟರ ಹೆಸರಿನಲ್ಲಿ ಎಷ್ಟು ರಸ್ತೆಗಳಿಗೆ ಹೆಸರು ಇಡಲಾಗಿದೆ ಎಂದು ನಿಮಗೆ ತಿಳಿದಿದೆಯೇ ? ಯಾರ ಹೆಸರಲ್ಲಿ ಎಲ್ಲೆಲ್ಲಿ ರಸ್ತೆಗಳಿವೆ ಎಷ್ಟು ಉದ್ದ ರಸ್ತೆಗಳಿವೆ ಎಂದು ಇಲ್ಲಿ ನಾವು ನಿಮಗೆ ಹೇಳುತ್ತೇವೆ.

ಡಾ.ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಹೆಚ್ಚು ಉದ್ದದ ರಸ್ತೆ ಇದ್ದು, ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್ನಿಂದ ಬನ್ನೇರುಘಟ್ಟ ರಸ್ತೆಯ ವೆಗಾ ಸಿಟಿ ಮಾಲ್ ಜಂಕ್ಷನ್ ವರೆಗಿನ ರಸ್ತೆಗೆ ಕರ್ನಾಟಕ ರತ್ನ ಡಾ|| ಪುನೀತ್ ರಾಜುಮಾರ್ ರಸ್ತೆ ಎಂದು ಹೆಸರಿಡಲಾಗಿದ್ದು, ಇದು ಬರೋಬ್ಬರಿ 12 ಕಿ.ಮೀ ಉದ್ದದ ರಸ್ತೆಯಾಗಿದ್ದು, ಇದು ಕರ್ನಾಟಕದ ನಟರ ಹೆಸರಲ್ಲಿರುವ ಉದ್ದದ ರಸ್ತೆಗಳಲ್ಲಿ ಒಂದಾಗಿದೆ.

ಪಾರ್ವತಮ್ಮ ರಾಜ್‌ಕುಮಾರ್ ಹೆಸರಿನಲ್ಲಿ ಸಹ ರಸ್ತೆಗೆ ಹೆಸರಿಡಲಾಗಿದ್ದು, ಸಿನಿಮಾ ರಂಗಕ್ಕೆ ಅವರು ಸಲ್ಲಿಸಿದ ಸೇವೆಯನ್ನು ಗಮನಿಸಿ ಹೆಸರನ್ನು ಇಡಲಾಗಿದೆ.
ಸೌತ್ ಎಂಡ್ ರಸ್ತೆ ಬಳಿಯ, ಮಾಧವ ರಾಮ್ ಸರ್ಕಲ್ ನಿಂದ ನಾಗಸಂದ್ರದ ತನಕದ ರಸ್ತೆಗೆ ಪಾರ್ವತಮ್ಮ ರಾಜ್‌ಕುಮಾರ್ ರಸ್ತೆ ಎಂದು ಹೆಸರಿಡಲಾಗಿದೆ.

ವರನಟ ರಾಜ್‌ಕುಮಾರ್ ಅವರ ಹೆಸರು ಬಹಳಷ್ಟು ರಸ್ತೆಗಳಿಗೆ ಇಡಲಾಗಿದೆ. ಅವರ ಅಭಿಮಾನಿಗಳು ಅಭಿಮಾನದ ಸಂಕೇತವಾಗಿ ರಾಜ್ಯದ ಹಲವಾರು ಸ್ಥಳಗಳಲ್ಲಿ ರಸ್ತೆಗೆ ಅವರ ಹೆಸರನ್ನು ಇಟ್ಟಿದ್ದಾರೆ.

ವಿಷ್ಣುವರ್ಧನ್ ಹೆಸರಿನಲ್ಲಿನಲ್ಲಿರುವ ರಸ್ತೆ ದಾಖಲೆಯನ್ನು ಮಾಡಿರುವ ರಸ್ತೆ ಎನ್ನಬಹುದು. ಅತಿ ಉದ್ದದ ರಸ್ತೆಗೆ ತನ್ನ ಹೆಸರನ್ನು ಹೊಂದಿದ ಏಕೈಕ ಕಲಾವಿದ ವಿಷ್ಣುವರ್ಧನ್ ಅವರು. ಸುಮಾರು 14.5 ಕಿ.ಮೀ ಉದ್ದದ ಬನಶಂಕರಿಯಿಂದ ಕೆಂಗೇರಿ ತನಕ ಇರುವ ರಸ್ತೆಗೆ ಡಾ.ವಿಷ್ಣುವರ್ಧನ್ ರಸ್ತೆ ಎಂದು ಇಡಲಾಗಿದ್ದು, ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಮಹತ್ತರ ಸಾಧನೆಯ ಪ್ರತೀಕ ಎಂದು ಹೇಳಬಹುದು.

Leave A Reply

Your email address will not be published.