ಸೌಹಾರ್ದತೆಗೆ ಸಾಕ್ಷಿಯಾದ ಮುಸ್ಲಿಂ ಯುವತಿ-ಹಿಂದೂ ಯುವಕನ ವಿವಾಹ!! ಶುಭ ಕಾರ್ಯದಲ್ಲಿ ಅಪಾರ ಗಣ್ಯರು ಭಾಗಿ

ಪ್ರಸಕ್ತ ಕಾಲಮಾನದಲ್ಲಿ ರಾಜ್ಯದಲ್ಲಿ ಹಿಂದೂ ಮುಸ್ಲಿಂ ಕೋಮು ಸೌಹಾರ್ದತೆ ಎನ್ನುವ ಪದ ಮೂಲೆಗೆ ಸರಿಯುತ್ತಿರುವುದು ವಾಸ್ತವ ಸಂಗತಿಯಾದರೂ ಇದನ್ನು ಮೀರಿಸಿದ ಮದುವೆಯೊಂದು ಸೌಹಾರ್ದತೆಗೆ ಸಾಕ್ಷಿಯಾಗುವುದರೊಂದಿಗೆ ಎರಡೂ ಧರ್ಮಗಳ ಮುಖಂಡರು, ಅತಿಥಿಗಳು ಮದುವೆಯಲ್ಲಿ ಪಾಲು ಪಡೆದಿದ್ದರು.

ಮೈಸೂರು ನಗರ ಎ.ಐ.ಡಿ.ಎಸ್.ಓ ಉಪಾಧ್ಯಕ್ಷ ನಿರಂಜನ್ ಎಸ್. ಹಿರೇಮಠ್ ಹಾಗೂ ಉಪಾಧ್ಯಕ್ಷೆ ಆಸಿಯಾ ಬೇಗಂ ಭಿನ್ನಧರ್ಮದವರಾದರೂ ಪರಸ್ಪರ ಒಪ್ಪಿಗೆ ಸೂಚಿಸಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ವಿಶೇಷ ವಿವಾಹ ಕಾಯಿದೆಯಡಿಯಲ್ಲಿ ನೋಂದಣಿಯಾದ ಬಳಿಕ ನಡೆದ ಔತಣಕೂಟದಲ್ಲಿ ಹಲವು ಗಣ್ಯರು ಆಗಮಿಸಿ ನೂತನ ವಧು-ವರರಿಗೆ ಶುಭ ಹಾರೈಸಿದಾರಲ್ಲದೇ, ಕರ್ನಾಟಕ ರಾಜ್ಯದ ಮಟ್ಟಿಗೆ ಪ್ರಮುಖ ಘಟನೆ ಇದಾಗಿದ್ದು, ನವ ದಂಪತಿಗಳಿಗೆ ಎಲ್ಲರ ಸಹಕಾರ ಸಿಗಲಿ ಎಂದರು.

1 Comment
  1. Muneer says

    ಹುಡುಗ ಒಬ್ಬ ಮುಸ್ಲಿಂ ಆಗಿದ್ದರೆ ಲವ್ ಜಿಹಾದ್ ಹುಡುಗ ಹಿಂದೂ ಆದ್ದರಿಂದ ಸೌಹಾರ್ದತೆ….ಎಂಥ ಕರ್ಮ ಮಾರಾಯ….

Leave A Reply

Your email address will not be published.