ಬಾಡಿಹೋಯಿತು ಕನಸಿನ ರಾಣಿಯನ್ನು ವಿವಾಹವಾದ ಸಂತೋಷ!! ಕೆಲವೇ ಗಂಟೆಗಳಲ್ಲಿ ತಿಳಿಯಿತು ‘ನಾನು ಅವಳಲ್ಲ ಅವನು’ ಎಂಬ ಸತ್ಯ

ಮದುವೆ ಪ್ರತಿಯೊಬ್ಬರ ಜೀವನದಲ್ಲೂ ವಿಶೇಷ ಘಟ್ಟ ಅಂತಾನೇ ಹೇಳಬಹುದು. ವಿವಾಹದ ನಂತರ ಪತಿ ಪತ್ನಿ ಜೀವನ ಪರ್ಯಂತ ಒಂದಾಗಿರುವ ಕನಸು ಕಾಣ್ತಾರೆ. ಒಂದಾಗಿ ಬಾಳ್ವೆ ಮಾಡಬೇಕೆನ್ನುವ ಪ್ರಮಾಣ ಮಾಡ್ತಾರೆ. ಆದ್ರೆ ಅನೇಕರು ಯಾಕಾದ್ರೂ ಮದುವೆಯಾದೆ ಎಂದು ಮರುಕಪಡುತ್ತಾರೆ.

ಎಷ್ಟೋ ಜನರ ಬಾಳಲ್ಲಿ ನಾನಾ ಕಾರಣಗಳಿಂದ ದಾಂಪತ್ಯ ಮುರಿದು ಬೀಳುವುದಿದೆ. ಒಡವೆಗಳ ಕಾರಣಕ್ಕೆ ಹೆಣ್ಣಿನ, ಗಂಡಿನ ಸ್ವಭಾವ, ಅತ್ತೆ ಸ್ವಭಾವ ಹೀಗೆ ನಾನಾ ಕಾರಣಕ್ಕೆ ದಾಂಪತ್ಯ ಮುರಿದು ಬೀಳುತ್ತೆ. ಹಾಗೆನೇ ಇಲ್ಲೊಂದು ಮದುವೆ ಮುರಿದು ಬಿದ್ದಿದೆ. ಅದಕ್ಕೆ ಕಾರಣ ಹುಡುಗಿಯ ವರ್ತನೆ ಸ್ವಭಾವ ಅದ್ಯಾವುದೂ ಅಲ್ಲ. ಅದೇನು ತಿಳ್ಕೊಳ್ಳೋಣ ಬನ್ನಿ.

ಎಲ್ಲರಂತೆ ಆತನೂ ಜೀವನದಲ್ಲಿ ಮದುವೆಯಾಗುವ ಕನಸು ಕಂಡಿದ್ದ. ತನ್ನಿಷ್ಟದ ಹುಡುಗಿಯನ್ನೇ ಮದುವೆಯಾಗಬೇಕೆಂಬ ಆಸೆ ಇಟ್ಕೊಂಡಿದ್ದ. ತನ್ನ ಮನದರಸಿಯನ್ನು ಕುಟುಂಬಸ್ಥರ ಸಮ್ಮುಖದಲ್ಲಿ ತನ್ನವಳಾಗಿ ಮಾಡಿಕೊಳ್ಳಬೇಕೆಂಬ ಕನಸಿತ್ತು. ಕೊನೆಗೂ ಆತನ ಮದುವೆ ಕನಸು ಈಡೇರೋ ಕಾಲ ಬಂದಿತ್ತು. ಅವನ ಕನಸಿನ ಹುಡುಗಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಿದ್ದಳು. ಆಕೆಯ ಪರಿಚಯ, ನಂತರ ಸ್ನೇಹ, ಪ್ರೀತಿ ಎಲ್ಲಾ ಆಯಿತು. ತನ್ನ ಸುಧೀರ್ಘ ಕಾಲದ ಕನಸಿನಂತೆ ಆಕೆಯನ್ನು ಗುರುಹಿರಿಯರ ಸಮ್ಮುಖದಲ್ಲಿ ಮದುವೆಯೂ ಆದ. ಆದರೆ ಆಮೇಲೆ ನಡೆದಿದ್ದು ನೋಡಿ ಬೆಚ್ಚಿಬೀಳುವ ಸಂಗತಿ.

ಬಾಲಸೋರ್‌ನ ಅಲೋಕ್ ಕುಮಾರ್ ಮಿಸ್ತ್ರಿ ಎಂಬವರಿಗೆ ಫೇಸ್‌ಬುಕ್ ನಲ್ಲಿ ಒಬ್ಬಾಕೆಯ ಪರಿಚಯ ಮಾಡಿ, ಮೆಸೇಜ್, ಕಾಲ್ ನಂತರ ಇಬ್ಬರೂ ಪರಸ್ಪರ ಪ್ರೀತಿಯನ್ನು ಹೇಳಿಕೊಂಡರು. ಗುರುಹಿರಿಯರ ಸಮ್ಮುಖದಲ್ಲಿ ಮದುವೆಯೂ ಆಯಿತು. ಮದುವೆಯ ನಂತರ ಪದ್ಧತಿಯಂತೆ ಹಲವು ಕಾರ್ಯಕ್ರಮಗಳು ನಡೆದವು. ಹೆಣ್ಣು ಚಿನ್ನ, ಬೆಳ್ಳಿಯ ಆಭರಣಗಳನ್ನು ಧರಿಸಿ ಸಮಾರಂಭದಲ್ಲಿ ಓಡಾಡಿದ್ದನ್ನು ನೋಡಿ ಸಂಬಂಧಿಕರು, ಸ್ನೇಹಿತರೆಲಲ್ಲ ಅಲೋಕ್‌ಗೆ ಸುರ ಸುಂದರಿ ಹುಡುಗಿಯೇ ಸಿಕ್ಕಳು ಎಂದು ಖುಷಿಪಟ್ಟರು.

ಮದುವೆಯ ಹೆಚ್ಚಿನ ಶಾಸ್ತ್ರಗಳು ಮುಗಿದ ನಂತರ ದೂರದಲ್ಲಿರುವ ಸಂಬಂಧಿಕರು ಪಾಲ್ಗೊಳ್ಳಲೆಂದು ಪಕ್ಕದೂರಿನಲ್ಲಿ ಒಂದು ವಿಶೇಷ ಔತಣಕೂಟವನ್ನು ಏರ್ಪಡಿಸಲಾಗಿತ್ತು. ಅಲ್ಲೇ ಬಯಲಾಗಿದ್ದು ವಧುವಿನ ಅಸಲೀಯತ್ತು.

ಹೌದು, ಅಸಲಿಗೆ ಸೀರೆಯುಟ್ಟು ಆಭರಣ ಧರಿಸಿ ವಯ್ಯಾರದಿಂದ ಓಡಾಡುತ್ತಿದ್ದಾಕೆ ಹುಡುಗಿಯೇ ಅಲ್ಲ. ಹುಡುಗ ಎಂದು ಔತಣಕೂಟಕ್ಕೆ ಬಂದ ಮಹಿಳೆಯೊಬ್ಬರು ಹೇಳಿದರು. ಮಾತ್ರವಲ್ಲ ವಧುವಿನ ದಿರಿಸಿನಲ್ಲಿರುವವನು ಹುಟ್ಟಿನಿಂದಲೇ ಹುಡುಗ ಎಂಬುದಾಗಿ ತಿಳಿಸಿದರು. ಅಲ್ಲಿಗೆ ಹುಡುಗ ತಲೆ ಸುತ್ತಿ ಬೆಚ್ಚಿ ಬೀಳುವುದಷ್ಟೇ ಬಾಕಿ.

ಕನಸಿನ ಹುಡುಗಿಯ ಬೆನ್ನಟ್ಟಿ ಹೋದ ಯುವಕ ತಾನು ಮೋಸ ಹೋಗಿದ್ದು ತಿಳಿದು ಆತನೇ ಶಾಕಿಗೊಳಗಾಗಿದ್ದಾನೆ ಎಂಬ ಮಾಹಿತಿ ಇದೆ.

Leave A Reply

Your email address will not be published.