ಬೆಳ್ತಂಗಡಿ: ತಾಲೂಕಿನ ಮೊಗ್ರು ಗ್ರಾಮದ ಮುಗೇರಡ್ಕ ಸಮೀಪದ ಮನೆಯೊಂದರ ಬಚ್ಚಲು ಕೋಣೆಯಲ್ಲಿ ಆಶ್ರಯ ಪಡೆದಿದ್ದ ಸುಮಾರು ಎಂಟು ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನು ರಕ್ಷಿಸಿದ ಘಟನೆಯೊಂದು ಮೇ 28ರಂದು ನಡೆದಿದ್ದು, ಸ್ಥಳೀಯರಿಗೆ ಇದೇ ಮೊದಲ ಬಾರಿಗೆ ಕಾಳಿಂಗ ಸರ್ಪ ನೋಡಿಲು ಸಿಕ್ಕಂತಾಗಿದೆ.
ಮುಗೇರಡ್ಕ ಬತ್ತನಕೋಡಿ ನಿವಾಸಿ ಲೀಲಾವತಿ ಎಂಬವರ ಮನೆಯಲ್ಲಿ ಸಿಕ್ಕಿದ ಸರ್ಪವನ್ನು ಪುತ್ತೂರಿನ ಯುವ ಉರಗ ತಜ್ಞರಾದ ತೇಜಸ್ ಹಾಗೂ ಪುನೀತ್ ಅವರು ರಕ್ಷಿಸಿದ್ದು , ಸುಮಾರು ಎಂಟು ಅಡಿಗಿಂತಲೂ ಹೆಚ್ಚು ಉದ್ದವಿದ್ದ ಬೃಹತ್ ಕಾಳಿಂಗವನ್ನು ಸುರಕ್ಷಿತವಾಗಿ ರಕ್ಷಿಸಿ ಸೂಕ್ತ ಸ್ಥಳಕ್ಕೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.