ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನ ಮುಂದಿನ ಕಂತು ಸಿಗಬೇಕಿದ್ದರೆ ekYC ಕಡ್ಡಾಯ | ಇನ್ನು ಉಳಿದಿರುವುದು ಕೇವಲ 2 ದಿನ, ಕೊನೆಯ ದಿನಾಂಕ ಗಮನಿಸಿ

ದೇಶದ ರೈತರ ಆದಾಯವನ್ನು ದ್ವಿಗುಣಗೊಳಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು 2018 ರಲ್ಲಿ ಪಿಎಂ ಕಿಸಾನ್ ಯೋಜನೆಯನ್ನು ಪ್ರಾರಂಭಿಸಿದರು. ಈ ಯೋಜನೆಯಡಿ, ನೋಂದಾಯಿತ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಾಗಿ ವಾರ್ಷಿಕ 6,000 ರೂ. ಮೊತ್ತವನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ.

ಈ ಬಾರಿಯ ಪಿಎಂ ಕಿಸಾನ್‌ನ 11 ನೇ ಕಂತನ್ನು ಇದೇ ತಿಂಗಳ ಕೊನೆಯಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಇತ್ತೀಚಿಗೆ ಹೇಳಿದ್ದಾರೆ. ಆದರೆ ಈ ಕಂತು ನಿಮ್ಮ ಖಾತೆಗೆ ಸೇರಬೇಕಾದರೆ ನೀವೂ ಮಾಡಲೇ ಬೇಕಾದ ಕೆಲಸವೆಂದರೆ eKYC ಅನ್ನು ಪೂರ್ಣಗೊಳಿಸುವುದು. ನಿಮಗೆ ಇನ್ನು ಕೇವಲ ಎರಡೇ ದಿನ ಬಾಕಿ ಇದ್ದು, ಆದಷ್ಟು ಬೇಗ ಈ ಕಾರ್ಯನ ಪೂರ್ಣಗೊಳಿಸಿಕೊಳ್ಳಿ. ಇಲ್ಲವಾದಲ್ಲಿ 11ನೇ ಕಂತಿನ ಹಣ ನಿಮ್ಮ ಖಾತೆಗೆ ಜಮೆ ಆಗುವುದಿಲ್ಲ.

ಹೌದು. ಪಿಎಂ ಕಿಸಾನ್‌ನ ಫಲಾನುಭವಿಗಳೇ, ಈ ವರ್ಷ ಮೇ 31 PM ಕಿಸಾನ್ eKYC ಅನ್ನು ಪೂರ್ಣಗೊಳಿಸಲು ಕೊನೆಯ ದಿನಾಂಕವಾಗಿದ್ದು, ಕಳೆದ ವರ್ಷ ಈ ಪ್ರಕ್ರಿಯೆ ಕಡ್ಡಾಯವಾಗಿರಲಿಲ್ಲ. ಈ ಬಾರಿ ಕಡ್ಡಾಯವಾಗಿ ಇರುವುದರಿಂದ ನೀವು ಇಕೆವೈಸಿಯನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಿ. ಇದು ಯಾವುದೇ ದೋಷಗಳಿಲ್ಲದೆ ಪೂರ್ಣಗೊಂಡಿದ್ದರೆ 11 ನೇ ಕಂತು ನೇರವಾಗಿ ಬ್ಯಾಂಕ್ ಖಾತೆಗೆ ಬಂದು ತಲುಪುತ್ತದೆ. PM ಕಿಸಾನ್ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, PMKISAN ನೋಂದಾಯಿತ ರೈತರಿಗೆ eKYC ಕಡ್ಡಾಯವಾಗಿದೆ ಮತ್ತು ಇದಕ್ಕಾಗಿ ನೀವು ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ನಿಮ್ಮ ಹತ್ತಿರದ CSC ಕೇಂದ್ರಗಳನ್ನು ಸಂಪರ್ಕಿಸಬೇಕು.

ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಷರತ್ತುಗಳನ್ನು ಪೂರೈಸದ ಅನೇಕ ರೈತರನ್ನು ಯೋಜನೆಯಿಂದ ಹೊರಗಿಡಲು ಕೇಂದ್ರ ಸರ್ಕಾರ ಇತ್ತೀಚೆಗೆ ನಿರ್ಧರಿಸಿದೆ. ಹೀಗಾಗಿ ಕಂತಿನ ಹಣ ವರ್ಗಾವಣೆಯಾಗದ ರೈತರು ಅನರ್ಹ ರೈತರ ವ್ಯಾಪ್ತಿಗೆ ಬರುವ ಸಾಧ್ಯತೆಯೂ ಇದೆ. ಇತ್ತೀಚೆಗೆ ಆದಾಯ ತೆರಿಗೆ ಪಾವತಿಸಿದ ಅಥವಾ ಅವರ ಆದಾಯವು ಯೋಜನೆಗೆ ನಿಗದಿಪಡಿಸಿದ ಆದಾಯ ಮಿತಿಗಿಂತ ಹೆಚ್ಚಿದ್ದರೆ ಅಂತಹ ರೈತರನ್ನು ಯೋಜನೆಯಿಂದ ಹೊರಗಿಡಲಾಗಿದೆ. ವಂಚಕರು ಮತ್ತು ಅನರ್ಹರು ಈ ಯೋಜನೆಯ ಲಾಭವನ್ನು ಪಡೆಯುವುದನ್ನು ತಡೆಯಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಅಸ್ತಿತ್ವದಲ್ಲಿರುವ ಮತ್ತು ಹೊಸ ರೈತರು 31 ಮೇ 2022 ರ ಮೊದಲು eKYC ಅನ್ನು ಭರ್ತಿ ಮಾಡಬೇಕು.

ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್ : https://pmkisan.gov.in

Leave A Reply

Your email address will not be published.