ಮತ್ತೆ ಗುಟುರು ಹಾಕಲಿದೆ ಒಂದು ಕಾಲದ ರಸ್ತೆಯ ರಾಜ ಅಂಬಾಸಿಡರ್ | ಜನತೆಯ ಜೀವನಾಡಿಯಾಗಿದ್ದ ಆ್ಯಂಬಿ ವರ್ಶನ್ 2.0 ಬರ್ತ್ತಾವ್ನೆ ಸೈಡ್ ಪ್ಲೀಸ್

ಅಣ್ಣ ಮತ್ತೆ ಬತ್ತಾವ್ನೆ. ತನ್ನ ಗಟ್ಟಿ ದೇಹದಿಂದ, ರಸ್ತೆಯ ಆಳ ಅಗಲಗಳ ಹಳೆಯ ಅನುಭವಗಳಿಂದ ಕಾರು ಮಾರುಕಟ್ಟೆಯಲ್ಲಿ ಕೆಲವು ದಶಕಗಳ ಕಾಲ ಆಳಿ ಈಗ ಮರೆಗೆ ಸರಿದಿರುವ ಅಂಬಾಸಡರ್‌ ಕಾರು ಮತ್ತೆ ಹೊಸ ರೂಪದಲ್ಲಿ ಬರಲಿದೆ. ವರ್ಷನ್-2.0 ರಸ್ತೆಗೆ ಇಳಿಯಲು ಸಜ್ಜಾಗಿದೆ.

ಮುಂದಿನ ಎರಡು ವರ್ಷಗಳಲ್ಲಿ ಈ ಕಾರು ರಸ್ತೆಗೆ ಇಳಿಯಲಿದೆ ಎನ್ನಲಾಗಿದೆ. ಹಿಂಡ್‌ ಮೋಟಾರ್‌ ಫೈನಾನ್ಶಿಯಲ್‌ ಕಾರ್ಪೊರೇಶನ್‌ ಆಫ್ ಇಂಡಿಯಾ (ಎಚ್‌ಎಂಎಫ್ಸಿಐ) ಮತ್ತು ಫ್ರೆಂಚ್‌ ಕಾರು ಕಂಪೆನಿ ಪಝೋಟ್‌ “ಆ್ಯಂಬಿ’ಯ ಹೊಸ ನೂತನ ವಿನ್ಯಾಸ ಮತ್ತು ಎಂಜಿನ್‌ಗಾಗಿ ಸಹಯೋಗ ಸ್ಥಾಪಿಸಿಕೊಂಡಿದ್ದು, ಹೊಸ ಅವತಾರದಲ್ಲಿ ಅನಾವರಣಗೊಳಿಸಲಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಹಿಂದೂಸ್ತಾನ್‌ ಮೋಟಾರ್‌ ಚೆನ್ನೈ ಘಟಕದಲ್ಲಿ ಈ ಕಾರನ್ನು ಉತ್ಪಾದಿಸಲಾಗುತ್ತದೆ ಎಂದು ವರದಿಯಾಗಿದೆ.

ದೇಶದ ಅತ್ಯಂತ ಹಳೆಯ ಕಾರು ತಯಾರಕ ಕಂಪನಿ ಹಿಂದುಸ್ತಾನ್‌ ಮೋಟಾರ್ಸ್‌ 2014ರಲ್ಲಿ ಅಂಬಾಸಿಡರ್‌ ತಯಾರಿಕೆಯನ್ನು ಸ್ಥಗಿತಗೊಳಿಸಿತ್ತು. ಭಾರೀ ಪ್ರಮಾಣದ ಸಾಲ ಹಾಗೂ ಬೇಡಿಕೆಯ ಕೊರತೆಯಿಂದಾಗಿ ಈ ನಿರ್ಧಾರ ಕೈಗೊಂಡಿತ್ತು.

ತಂತ್ರಜ್ಞಾನ ಹಾಗೂ ಆರಾಮದಾಯಕತೆಯಲ್ಲಿ ಬೇರೆ ಕಾರುಗಳೊಂದಿಗೆ ಪೈಪೋಟಿ ನೀಡಲು ಸಾಧ್ಯವಾಗದ ಕಾರಣ ಅಂಬಾಸಿಡರ್‌ ಇತಿಹಾಸದ ಪುಟ ಸೇರಿತ್ತು. 2017ರಲ್ಲಿ ಈ ಕಂಪನಿಯ ಮಾಲೀಕ ಸಿಕೆ ಬಿರ್ಲಾ ಗ್ರೂಪ್‌, ಈ ಕಾರಿನ ಬ್ರ್ಯಾಂಡ್‌ ಅನ್ನು ಫ್ರಾನ್ಸ್‌ನ ಕಂಪನಿಗೆ 80 ಕೋಟಿ ರೂ.ಗಳಿಗೆ ಮಾರಾಟ ಮಾಡಿತ್ತು.

Leave A Reply

Your email address will not be published.