ಹೆಂಡತಿ ಮನೆಯಲ್ಲಿರದಾಗ ಗಂಡಸರು ಹೀಗೆಲ್ಲಾ ಮಾಡ್ತಾರಾ? ಪುರುಷರು ಯಾವ ಕೆಲಸ ಮಾಡಿ ಎಂಜಾಯ್ ಮಾಡ್ತಾರೆ?

ಗಂಡ ಹೆಂಡತಿಯರು ಇಬ್ಬರೂ ಜೊತೆಗೇ ಇದ್ದಾಗ ಕೆಲವೊಂದು ವಿಷಯದಲ್ಲಿ ಗಂಭೀರವಾಗಿಯೇ ಇರುತ್ತಾರೆ. ಆದರೆ ನಿಮಗೆ ಗೊತ್ತೇ ? ಇಬ್ಬರಲ್ಲಿ ಒಬ್ಬರು ಯಾರಾದರೂ ಮನೆಯಲ್ಲಿ ಇರದಾಗ ಏನೆಲ್ಲಾ ಮಾಡುತ್ತಾರೆಂದು ? ಈ ಬಗ್ಗೆ ಇಲ್ಲಿ ನಾವು ಇವತ್ತು ಪುರುಷ ಸಂಗಾತಿ ಬಗ್ಗೆ ಅವರ ವರ್ತನೆ ಬಗ್ಗೆ ಒಂದಿಷ್ಟು ಕುತೂಹಲ ಮಾಹಿತಿ ನೀಡಲಿದ್ದೇವೆ.

ಸಾಮಾನ್ಯವಾಗಿ ಪುರುಷರು ಮಹಿಳೆಯರ ಮುಂದೆ ಸಾಕಷ್ಟು ಸಭ್ಯ ಮತ್ತು ಉತ್ತಮರಂತೆ ವರ್ತಿಸುತ್ತಾರೆ. ಪ್ರತಿಯೊಂದು ಕೆಲಸದಲ್ಲಿ ಅವರು ತಮ್ಮ ಸಂಗಾತಿಗೆ ಅಭಿಪ್ರಾಯವನ್ನು ನೀಡುತ್ತಾರೆ ಮತ್ತು ಅದೇ ಸಮಯದಲ್ಲಿ ಸಂಗಾತಿಗೆ ಹಲವಾರು ಕೆಲಸಗಳಲ್ಲಿ ಸಹಾಯ ಮಾಡುತ್ತಾರೆ. ಆದರೆ ಹೆಂಡತಿ ಅಥವಾ ಗೆಳತಿ ಹತ್ತಿರ ಇಲ್ಲದೇ ಇದ್ದಾಗ, ಅವರು ಏನು ಮಾಡುತ್ತಾರೆ ಅನ್ನೋದನ್ನು ನೀವು ಊಹಿಸಲು ಸಹ ಸಾಧ್ಯವಿಲ್ಲ ಗೊತ್ತಾ? ತಮ್ಮ ಸಂಗಾತಿ ಇಲ್ಲದಿದ್ದಾಗ ಪುರುಷರು ಯಾವ ಕೆಲಸಗಳನ್ನೆಲ್ಲಾ ಮಾಡಿ ಎಂಜಾಯ್ ಮಾಡ್ತಾರೆ ಅನ್ನೋದನ್ನು ತಿಳಿಯಿರಿ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಇದು ನಿಮಗೆ ವಿಚಿತ್ರ ಅನಿಸಬಹುದು ಆದರೆ ಪುರುಷರು ತಮ್ಮ ದೇಹದ ಸ್ಮೆಲ್ ನೋಡುತ್ತಾರೆ. ಅವರು ತಮ್ಮ ಕಂಕುಳನ್ನು ಅಥವಾ ತಮ್ಮ ಒಳಉಡುಪನ್ನು ಮೂಸಿ ನೋಡುತ್ತಾರೆ. ಇದು ಯಾರೂ ಇಲ್ಲದಾಗ ಕೆಲವು ಪುರುಷರು ಮಾಡ್ತಾರೆ. ಬೇಕಿದ್ರೆ ಕೇಳಿ ನೋಡಿ…

ಹೆಚ್ಚಿನ ಪುರುಷರು ಶೌಚಾಲಯದಲ್ಲಿ ಹೆಚ್ಚು ಸಮಯ ಕುಳಿತುಕೊಳ್ಳೋ ಅಭ್ಯಾಸ ಹೊಂದಿದ್ದಾರೆ. ತಮ್ಮ ಸಂಗಾತಿ ಹತ್ತಿರ ಇಲ್ಲದೇ ಇದ್ದಾಗ, ಅವರು ಅದರ ಲಾಭವನ್ನು ಪಡೆಯುತ್ತಾರೆ ಮತ್ತು ಮೊಬೈಲ್ ಫೋನ್ ನೊಂದಿಗೆ ಟಾಯ್ಲೆಟ್ ನಲ್ಲಿ ಗಂಟೆ ಗಟ್ಟಲೆ ಕುಳಿತುಕೊಳ್ಳುತ್ತಾರೆ.

ನೀವು ಮನೆಯಲ್ಲಿ ಇಲ್ಲ ಎಂದಾಕ್ಷಣ ಹೊರಬಂದ ತಕ್ಷಣ, ನಿಮ್ಮ ಸಂಗಾತಿ ಮನೆಯಲ್ಲಿ ಏಕಾಂಗಿಯಾಗಿ ಇರುವ ಎಲ್ಲಾ ಪ್ರಯೋಜನಗಳನ್ನು ಪಡೆಯುತ್ತಾರೆ. ಈ ಟೈಮ್ ನಲ್ಲಿ ಅವರು ರೂಮಲ್ಲಿ ಏಕಾಂಗಿಯಾಗಿ ಕುಳಿತು, ಏಕಾಂತದ ಆನಂದ ಪಡೆಯುತ್ತಾರೆ. ಹೆಚ್ಚಿನ ಪುರುಷರು ಅಶ್ಲೀಲ ಚಿತ್ರಗಳನ್ನೋ ಅಥವಾ ತಮಗೆ ಬೇಕೆನಿಸಿದ ಯಾವ್ಯಾವುದೋ ಸೀರಿಸ್ ಗಳನ್ನು ನೋಡಿ ಎಂಜಾಯ್ ಮಾಡ್ತಾರೆ.

ಸಾಧಾರಣವಾಗಿ ಗಂಡಸರು ಅಳಲ್ಲ‌. ಆದರೆ ಅಪರೂಪಕ್ಕೆ ಎಂಬಂತೆ ಅವರು ಅಳುತ್ತಾರೆ. ಆದರೆ ನಿಜವಾಗಿ ಪುರುಷರು ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ತಮ್ಮ ಪ್ರಸ್ಟೇಷನ್, ಸ್ಟ್ರೆಸ್ ಎಲ್ಲವನ್ನೂ ದೂರ ಮಾಡಲು ಜೋರಾಗಿ ಅಳುತ್ತಾರೆ.

ಹೆಚ್ಚಾಗಿ ಪುರುಷರು ತಮ್ಮ ಸಂಗಾತಿಯ ಮೇಕಪ್ ಐಟಂಗಳನ್ನು ಅವರು ಚೆಕ್ ಮಾಡ್ತಾರೆ. ನಿಮ್ಮ ಮೇಕಪ್ ಬಾಕ್ಸ್ ನಲ್ಲಿ ಯಾವ ಐಟಂಗಳಿವೆ ಎಂದು ತಿಳಿಯಲು ನಿಮ್ಮ ಸಂಗಾತಿಗಳು ಸಾಕಷ್ಟು ಕುತೂಹಲ ಹೊಂದಿರುತ್ತಾರೆ. ನೀವು ಅವರ ಜೊತೆ ಇಲ್ಲದಿದ್ದಾಗ ಅವರು ಇದೆಲ್ಲವನ್ನೂ ಪರಿಶೀಲಿಸುತ್ತಾರೆ.

ನೀವು ಮನೆಯಲ್ಲಿದ್ದಾಗ ಒಳ್ಳೊಳ್ಳೆ ಆಹಾರ ಮಾಡಿದಾಗ
ಸಂಗಾತಿ ಅದನ್ನು ಇಷ್ಟಪಟ್ಟು ಸೇವಿಸುತ್ತಾರೆ. ಆದರೆ ನೀವು ಇಲ್ಲದೇ ಇದ್ದಾಗ ಅವರು ಉಳಿದ ಆಹಾರಗಳ ಯಾವುದೇ ಕಾಂಬಿನೇಶನ್ ನ್ನು ಟ್ರೈ ಮಾಡಿ ಸೇವಿಸುತ್ತಾರೆ. ಅದನ್ನು ನೀವು ಯೋಚಿಸಲು ಸಹ ಸಾಧ್ಯವಿಲ್ಲ. ನೀವು ಅದನ್ನು ಕಂಡರೆ ಛೀ ಎನ್ನುವಿರಿ. ಆದರೆ ಅವರು ಅದನ್ನೇ ನಳಪಾಕ ಅಂತ ಸಂಭ್ರಮಿಸುತ್ತಾರೆ.

Leave a Reply

error: Content is protected !!
Scroll to Top
%d bloggers like this: