ಕೆಲಸ ನಿರ್ವಹಿಸುವಾಗ ಬ್ರೇಕ್ ವೈಫಲ್ಯ!! ಹಿಮ್ಮುಖವಾಗಿ ಚಲಿಸಿದ ಜೆಸಿಬಿ ಯಂತ್ರದಡಿಗೆ ಸಿಲುಕಿ ಓರ್ವ ಮೃತ್ಯು

ಜೆಸಿಬಿಯೊಂದರ ಬ್ರೇಕ್ ವಿಫಲಗೊಂಡು ಹಿಮ್ಮುಖವಾಗಿ ಚಲಿಸಿ ಓರ್ವ ಮೃತಪಟ್ಟ ಘಟನೆಯೊಂದು ಮಡಿಕೇರಿ ಸಮೀಪದ ಕೂಟುಹೊಳೆ ಎಂಬಲ್ಲಿ ನಡೆದಿದೆ.

ಮೃತ ಯುವಕನನ್ನು ಹಾಸನ ಮೂಲದ ಸಂತೋಷ್(22) ಎಂದು ಗುರುತಿಸಲಾಗಿದ್ದು, ಈತ ಅಲ್ಲೇ ಕಾರ್ಮಿಕನಾಗಿದ್ದ.

ಘಟನೆ ವಿವರ: ಕೂಟುಹೊಳೆ ಸಮೀಪ ಜೆಸಿಬಿ ಯಂತ್ರವೊಂದು ಇಳಿಜಾರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಹಠಾತ್ ಬ್ರೇಕ್ ವಿಫಲಗೊಂಡು ಹಿಂದಕ್ಕೆ ಚಲಿಸಿದೆ. ಈ ಸಂದರ್ಭ ಅಲ್ಲೇ ಪಕ್ಕದಲ್ಲಿ ಕೆಲಸ ಮಾಡುತ್ತಿದ್ದ ಸಂತೋಷ್ ಜೆಸಿಬಿಯ ಅಡಿಗೆ ಬಿದ್ದು ದಾರುಣವಾಗಿ ಮೃತಪಟ್ಟಿದ್ದಾನೆ.

ಘಟನೆಯ ತೀವ್ರತೆಗೆ ಮೃತನ ಕಾಲು ದೇಹದಿಂದ ಬೇರ್ಪಟ್ಟಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave A Reply

Your email address will not be published.