ಟಾಯ್ಲೆಟ್‌ನಲ್ಲಿ ಕೂತು ವೀಡಿಯೋ ಗೇಮ್ಸ್ ಆಟದಲ್ಲಿ ತಲ್ಲೀನನಾದ ಯುವಕ | ಹಾವು ಬಂದು ಕಚ್ಚಿದ್ದು ಗೊತ್ತಾಗಲಿಲ್ಲ, ಅಷ್ಟಕ್ಕೂ ಹಾವು ಕಚ್ಚಿದ್ದೆಲ್ಲಿಗೆ?

ನೀವು ಗಮನಿಸಿರಬಹುದು, ಹೆಚ್ಚಾಗಿ ಕೆಲವು ಜನರು ಟಾಯ್ಲೆಟ್ ಗೆಂದು ಹೋದಾಗ, ಮೊಬೈಲ್ ತಗೊಂಡು ಹೋಗುತ್ತಾರೆ. ಇದು ಆರೋಗ್ಯಕ್ಕೆ ಒಳ್ಳೆದಲ್ಲ ಎಂದು ಡಾಕ್ಟರ್ ನವರು ಹೇಳುತ್ತಾರೆ. ಆದರೂ ಕೆಲವರು ಈ ಅಭ್ಯಾಸದಿಂದ ಹೊರಬರುವುದಿಲ್ಲ. ಅಂತವರು ಈ ಸುದ್ದಿಯೊಂದನ್ನು ಓದಲೇಬೇಕು.

28 ವರ್ಷದ ಯುವಕನೋರ್ವ ಶೌಚಾಲಯಕ್ಕೆ ಹೋಗಿ ವೀಡಿಯೊ ಗೇಮ್ ಆಡುವ ಅಭ್ಯಾಸ ಬೆಳೆಸಿಕೊಂಡಿದ್ದ. ಒಂದು ದಿನ ಹೀಗೆ ಟಾಯ್ಲಟ್ ಗೆ ಹೋಗಿ ಮೊಬೈಲ್ ಮೂಲಕ ವೀಡಿಯೋ ಗೇಮ್ ಆಡುತ್ತಿದ್ದ ಈ ಯುವಕನಿಗೆ ಹಾವು ಕಚ್ಚಿದೆ. ಆದರೆ ಗೇಮ್ ನಲ್ಲಿ ತಲ್ಲೀಣನಾದವನಿಗೆ ತನ್ನ ಬ್ಯಾಕ್‌ಗೆ ಹಾವು ಕಚ್ಚಿದರೂ ಗೊತ್ತೇ ಆಗಿಲ್ಲ. ಪುಣ್ಯಕ್ಕೆ ಹಾವು ವಿಷಕಾರಿಯಾಗಿರಲಿಲ್ಲ.

ಮಲೇಷಿಯಾದ ವ್ಯಕ್ತಿ ಸಬ್ಸಿ ತಝಾಲಿ ಎಂಬ ಯುವಕನೇ ಟಾಯ್ಲೆಟ್‌ನಲ್ಲಿ ಕುಳಿತು ತನ್ನ ಫೋನ್‌ನಲ್ಲಿ ವಿಡಿಯೋ ಗೇಮ್‌ಗಳನ್ನು ಆಡುತ್ತಿದ್ದಾಗ ಹಾವೊಂದು ಅವರಿಗೆ ಕಚ್ಚಿದೆ. ತನ್ನ ಮನೆಯಲ್ಲಿ ಈ ಘಟನೆ ನಡೆದಿದ್ದು, ಕೂಡಲೇ ಆತ ಹಾವಿನಿಂದ ಬಿಡಿಸಿಕೊಳ್ಳಲು ಯತ್ನಿಸಿದಾಗ, ಹಾವನ್ನು ಎಳೆದಿದ್ದಾನೆ.

ಈತ ಹೇಳುವ ಪ್ರಕಾರ, “ಎರಡು ವಾರಗಳ ನಂತರ, ನಾನು ಗಾಯದ ಪ್ರದೇಶವನ್ನು ಪರಿಶೀಲಿಸಿದೆ, ಹಾವಿನ ಅರ್ಧದಷ್ಟು ಹಲ್ಲುಗಳು ಇನ್ನೂ ಇದ್ದವು. ನಾನು ಹಾವನ್ನು ಬಲವಾಗಿ ಎಳೆದಿದ್ದರಿಂದ ಅದು ಮುರಿದುಹೋಗಿದೆ” ಎಂದು ಈತ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾನೆ. ನಂತರ ಡಾಕ್ಟರ್ ಹತ್ರ ಹೋದ ಯುವಕ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾನೆ‌. ಹಾವು ವಿಷಕಾರಿ ಆಗಿಲ್ಲವಾದರಿಂದ ಆತನಿಗೆ ಏನೂ ಆಗಿಲ್ಲ.

Leave A Reply

Your email address will not be published.