Samsung ನಿಂದ ದಿಟ್ಟ ನಿರ್ಧಾರ | ಈ ಫೋನ್ ಗಳು ಮಾರುಕಟ್ಟೆಯಿಂದ ನಿರ್ಗಮನ

ಸ್ಯಾಮ್ ಸಾಂಗ್ ಉತ್ತಮವಾದ ಫೀಚರ್ ಗಳಿರುವ ಫೋನ್ ಗಳನ್ನು ಗ್ರಾಹಕರಿಗೆ ತಲುಪಿಸುತ್ತಾ ದಕ್ಷಿಣ ಕೊರಿಯಾದ ಜನಪ್ರಿಯ ಕಂಪನಿ ಎಂದೇ ಹೆಸರುವಾಸಿಯಾಗಿದೆ. ಆದರೆ ಈ ಎಲೆಕ್ಟ್ರಾನಿಕ್ಸ್ ದೈತ್ಯ ಸ್ಯಾಮ್​ಸಂಗ್ ಇದೀಗ ಭಾರತದಲ್ಲಿ ಫೀಚರ್ ಫೋನ್ ಮಾರುಕಟ್ಟೆಯಿಂದ ನಿರ್ಗಮಿಸಲು ಯೋಜಿಸುತ್ತಿದೆ ಎಂದು ತಿಳಿದುಬಂದಿದೆ.

ಸ್ಯಾಮ್​ಸಂಗ್​ ಕೊನೆಯ ಬ್ಯಾಚ್ ಫೀಚರ್ ಫೋನ್​ಗಳನ್ನು ಈ ವರ್ಷದ ಡಿಸೆಂಬರ್ ನಲ್ಲಿ ತಯಾರಿಸಲಿದ್ದು, ಅದರ ನಂತರ, ಕಂಪನಿಯು ಭಾರತದಲ್ಲಿ ಇನ್ನು ಮುಂದೆ ಯಾವುದೇ ಫೀಚರ್ ಫೋನ್​ಗಳನ್ನು ತಯಾರಿಸುವುದಿಲ್ಲ ಎಂದು ತಿಳಿಸಿದೆ. ಸ್ಯಾಮ್​ಸಂಗ್ ಈ ಬಗ್ಗೆ ನಿಖರವಾಗಿ ಚಿಂತಿಸುತ್ತಿದ್ದು, ತನ್ನ ಗಮನವನ್ನು ಹೆಚ್ಚಿನ ಬೆಲೆ ಶ್ರೇಣಿಗಳಿಗೆ ಬದಲಾಯಿಸಲಿದೆ ಎಂದು ಹೇಳಲಾಗುತ್ತಿದೆ. ಸ್ಯಾಮ್​ಸಂಗ್ ಸ್ಮಾರ್ಟ್​ಫೋನ್​ಗಳನ್ನು ಹೆಚ್ಚಾಗಿ 15,000 ಬೆಲೆಯ ಬ್ರಾಕೆಟ್ ಅನ್ನು ಹೆಚ್ಚಿಸುವ ಬಗ್ಗೆ ತಿಳಿಸುತ್ತದೆ.

ಸರ್ಕಾರದ ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆಗೆ ಕೊಡುಗೆ ನೀಡುವ ಎರಡು ಪ್ರಮುಖ ಎಮ್ ನ್ ಸಿ ಗಳಲ್ಲಿ ಸ್ಯಾಮ್ ಸಂಗ್ ಕೂಡ ಸೇರಿದೆ. ಸ್ಯಾಮ್​​ಸಂಗ್, ಇಟಿ ಪ್ರಕಾರ, ರೂ. 15,000 ಫ್ಯಾಕ್ಟರ್ ಬೆಲೆಗಿಂತ ಹೆಚ್ಚು ಮೌಲ್ಯದ ಹ್ಯಾಂಡ್​​ಸೆಟ್​ಗಳ ಉತ್ಪಾದನೆಯಲ್ಲಿ ಮಾತ್ರ ಸೋಪ್ಗಳನ್ನು ಪಡೆಯುವುದು ಕಡ್ಡಾಯವಾಗಿದೆ.

ಒಂದು ಕಾಲದಲ್ಲಿ ಭಾರತದಲ್ಲಿ ಫೀಚರ್ ಫೋನ್ಗಳು ಜನಪ್ರಿಯತೆ ಪಡೆದಿದ್ದವು. ಆದರೀಗ ಆ ಸ್ಥಾನವನ್ನು ಆಂಡ್ರಾಯ್ಡ್ ಸ್ಮಾರ್ಟ್​​ಫೋನ್​ಗಳು ಆವರಿಸಿಕೊಂಡಿದೆ. ಮಾತ್ರವಲ್ಲದೆ ಫೀಚರ್ ಫೋನ್​ಗಳ ಬಳಕೆ ಮತ್ತು ಬೇಡಿಕೆ ಕಡಿಮೆಯಾಗುತ್ತಾ ಬಂದಿದೆ. 2022 ರಲ್ಲಿ ಕಂಪನಿಯು ಎರಡಂಕಿಗಳಲ್ಲಿ ಬೆಳೆಯುವ ನಿರೀಕ್ಷೆಯಿದೆ ಎಂದು ಸ್ಯಾಮ್ ಸಂಗ್ ಕಾರ್ಯನಿರ್ವಾಹಕರು ಹೇಳಿದ್ದಾರೆ.

Leave A Reply

Your email address will not be published.