ಮುರುಳ್ಯದಿಂದ ನಾಪತ್ತೆಯಾದ ಮಹಿಳೆಯನ್ನು ತಮಿಳುನಾಡಿನಲ್ಲಿ ಪತ್ತೆ ಮಾಡಿದ ಬೆಳ್ಳಾರೆ ಪೊಲೀಸರು

ಬೆಳ್ಳಾರೆ: ಇಲ್ಲಿನ ಮುರುಳ್ಯ ಗ್ರಾಮದ ನಿಂತಿಕಲ್ಲಿನಲ್ಲಿ ಮಹಿಳೆಯೋರ್ವರು ಕಾಣೆಯಾಗಿದ್ದು ತಮಿಳುನಾಡಿನಲ್ಲಿ ಪತ್ತೆಯಾದ ಘಟನೆ ನಡೆದಿದೆ.

ಮುರುಳ್ಯ ಗ್ರಾಮದ ವಿಜಯಂಬಲ್ (48) ಎಂಬವರು ಮೇ.9 ರಂದು ಮದ್ಯಾಹ್ನ ಮನೆಯಿಂದ ಹೇಳದೆ ನಿಂತಿಕಲ್ಲು ಕಡೆಗೆ ಹೋದವರು ಮರಳಿ ಮನೆಗೆ ಬಾರದೆ ಇದ್ದುದರಿಂದ ಇವರ ಪತಿ ಶಿವಲಿಂಗ ಎಂಬವರು ಬೆಳ್ಳಾರೆ ಠಾಣೆಯಲ್ಲಿ ಪೊಲೀಸು ದೂರು ನೀಡಿದ್ದರು.

ದೂರು ದಾಖಲಿಸಿಕೊಂಡ ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದು ತಮಿಳುನಾಡು ರಾಜ್ಯದ ನೀಲಗಿರಿ ಜಿಲ್ಲೆಯ ದೇವಲ ಎಂಬಲ್ಲಿಂದ ಪತ್ತೆಹಚ್ಚಿ ಠಾಣೆಗೆ ಕರೆದುಕೊಂಡು ಬಂದಿರುವುದಾಗಿ ತಿಳಿದುಬಂದಿದೆ.

ಪೊಲೀಸರಾದ ಕೃಷ್ಣಪ್ಪ ಮತ್ತು ಚಂದ್ರಶೇಖರ್ ರವರು ಠಾಣೆಯ ಎಸ್.ಐ.ರುಕ್ಮ ನಾಯ್ಕ್ ಮಾರ್ಗದರ್ಶನದಲ್ಲಿ ಪತ್ತೆ ಕಾರ್ಯ ನಡೆಸಿದ್ದಾರೆ.

Leave A Reply

Your email address will not be published.