Day: May 26, 2022

ಎಲ್ಲಾ ಚಿನ್ನದ ಮೇಲೆ ಜೂನ್ 1 ರಿಂದ ಹಾಲ್‌ಮಾರ್ಕ್‌ ಕಡ್ಡಾಯ | ಚಿನ್ನದ ಪರಿಶುದ್ಧತೆ, ಗುಣಮಟ್ಟ ದೃಢೀಕರಿಸಲು ಹಾಲ್ ಮಾರ್ಕ್ ಅತ್ಯವಶ್ಯಕ!

ಜೂನ್ 1, 2022 ರಿಂದ, ಆಭರಣಕಾರರು ಅದರ ಶುದ್ಧತೆಯನ್ನು ಪರಿಗಣನೆಗೆ ತೆಗೆದುಕೊಳ್ಳದೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ಆಭರಣಗಳನ್ನು ಮಾತ್ರ ಮಾರಾಟ ಮಾಡಬಹುದು. ಅಂದರೆ ಪ್ರತಿಯೊಂದು ಚಿನ್ನದ ಆಭರಣದ ಮೇಲೆ ಅದರ ಶುದ್ಧತೆಯ ಹಾಲ್‌ಮಾರ್ಕಿಂಗ್ ಕಡ್ಡಾಯವಾಗಿದೆ. ಏಪ್ರಿಲ್ 4, 2022 ರ ಅಧಿಸೂಚನೆಯ ಮೂಲಕ ಬಿಐಎಸ್ ಈ ಘೋಷಣೆಯನ್ನು ಮಾಡಿದೆ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ (ಬಿಐಎಸ್) ಪ್ರಕಾರ ಪ್ರಸ್ತುತ 6 ಶುದ್ಧತೆಯ ವರ್ಗಗಳಲ್ಲಿ ಚಿನ್ನದ ಹಾಲ್‌ಮಾರ್ಕಿಂಗ್ ಮಾಡಲಾಗುತ್ತದೆ. 14KT, 18KT, 20KT, 22KT, 23KT ಮತ್ತು 24KT …

ಎಲ್ಲಾ ಚಿನ್ನದ ಮೇಲೆ ಜೂನ್ 1 ರಿಂದ ಹಾಲ್‌ಮಾರ್ಕ್‌ ಕಡ್ಡಾಯ | ಚಿನ್ನದ ಪರಿಶುದ್ಧತೆ, ಗುಣಮಟ್ಟ ದೃಢೀಕರಿಸಲು ಹಾಲ್ ಮಾರ್ಕ್ ಅತ್ಯವಶ್ಯಕ! Read More »

ಪುತ್ತೂರು : ನಗರಸಭಾ ವ್ಯಾಪ್ತಿಯಲ್ಲಿ 13 ಜನರಿಗೆ ಹುಚ್ಚು ನಾಯಿ ಕಡಿತ

ಗುರುವಾರ ಹುಚ್ಚುನಾಯಿಯೊಂದು ಸುಮಾರು 13 ಜನರಿಗೆ ಕಚ್ಚಿದ ಘಟನೆ ಸಂಭವಿಸಿದೆ. ನೆಹರೂನಗರ, ಬನ್ನೂರು, ಬೊಳುವಾರು, ಬಲಮುರಿ ಮೊದಲಾದ ಪ್ರದೇಶದಲ್ಲಿ ಈ ಹುಚ್ಚುನಾಯಿ ಮೂವರು ಬಾಲಕರು ಸೇರಿದಂತೆ 13 ಜನರಿಗೆ ಕಚ್ಚಿದೆ ನಗರಸಭಾ ಅಧ್ಯಕ್ಷ ಜೀವಂಧರ ಜೈನ್ ಅವರು ಅಧಿಕಾರಿಗಳಿಗೆ ತುರ್ತು ಆದೇಶ ನೀಡಿ ಕಾರ್ಯಾಚರಣೆಗೆ ಸೂಚಿಸಿದ್ದಾರೆ. ಬಳಿಕ ಕಾರ್ಯಾಚರಣೆ ನಡೆಸಿ ನಾಯಿಯನ್ನು ಸೆರೆ ಹಿಡಿಯಲಾಯಿತು ನಗರಸಭೆ ಸದಸ್ಯ ಶಿವರಾಮ ಸಫಲ್ಯ ಮತ್ತಿತರರ ಸಹಕಾರದೊಂದಿಗೆ ನಾಯಿ ಕಡಿತಕ್ಕೆ ಒಳಗಾದವರೆಲ್ಲ ಸರಕಾರಿ ಆಸ್ಪತ್ರೆಗೆ ಬಂದು ರ‍್ಯಾಬಿಸ್ ನಿರೋಧಕ ಚುಚ್ಚುಮದ್ದು ಪಡೆದುಕೊಂಡಿದ್ದಾರೆ.

ಬಂಟ್ವಾಳ ರಸ್ತೆ ಅಪಘಾತ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಸಾವು

ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೋರ್ವಳಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ತಲಪಾಡಿಯಲ್ಲಿ ನಡೆದಿದ್ದು, ಘಟನೆಯಿಂದ ಮಹಿಳೆ ಮೃತಪಟ್ಟಿದ್ದಾರೆ. ಕೈಕಂಬ ಸಮೀಪದ ತಲಪಾಡಿ ಎಂಬಲ್ಲಿ ಮೇ.26 ರಂದು ಇಂದು ಬೆಳಿಗ್ಗೆ ಸುಮಾರು 11 ಗಂಟೆ ವೇಳೆ ನಡೆದುಕೊಂಡು ಹೆದ್ದಾರಿ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕೂಲಿ ಕಾರ್ಮಿಕೆಯೊರ್ವಳಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಮಹಿಳೆಯನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.

ಸ್ಟೈಲಿಶ್ ಲುಕ್ ನೊಂದಿಗೆ ಕಂಗೊಳಿಸಲಿದೆ ಬೈಕ್ ಪ್ರಿಯರ ನೆಚ್ಚಿನ ಸಂಗಾತಿ !! | ಬ್ಲೂಟೂತ್, ಚಾರ್ಜರ್ ಮತ್ತು ಹೈಟೆಕ್ ವೈಶಿಷ್ಟ್ಯಗಳೊಂದಿಗೆ ಬಂದಿದೆ ಸ್ಪ್ಲೆಂಡರ್ ಬೈಕ್

ಹೀರೋ ಸ್ಪ್ಲೆಂಡರ್ ದಶಕಗಳಿಂದ ಗ್ರಾಹಕರ ನೆಚ್ಚಿನ ಬೈಕ್. ಅದೆಷ್ಟೋ ಜನರಿಗೆ ಇದು ಜೀವನ ಸಂಗಾತಿಗಿಂತ ಹೆಚ್ಚು. ಇದೀಗ ಕಂಪನಿಯು ಗ್ರಾಹಕರಿಗೆ ಬೇಕಾದ ರೀತಿಯಲ್ಲಿ ಹೊಸ ಅವತಾರದೊಂದಿಗೆ ಸ್ಪ್ಲೆಂಡರ್ ಬೈಕ್ ಅನ್ನು ಬಿಡುಗಡೆ ಮಾಡಿದೆ. ಹೊಸ Hero MotoCorp ಹೊಸ ಸ್ಪ್ಲೆಂಡರ್ + XTEC ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದನ್ನು ದೆಹಲಿಯಲ್ಲಿ 72,900 ರೂ.ಗಳ ಆರಂಭಿಕ ಎಕ್ಸ್ ಶೋ ರೂಂ ಬೆಲೆಯಲ್ಲಿ ಪರಿಚಯಿಸಿದೆ. ದೈನಂದಿನ ಬಳಕೆಗಾಗಿ ಈ 100 ಸಿಸಿ ಮೋಟಾರ್ ಸೈಕಲ್ ಅನ್ನು ಈಗ ಹೊಸ …

ಸ್ಟೈಲಿಶ್ ಲುಕ್ ನೊಂದಿಗೆ ಕಂಗೊಳಿಸಲಿದೆ ಬೈಕ್ ಪ್ರಿಯರ ನೆಚ್ಚಿನ ಸಂಗಾತಿ !! | ಬ್ಲೂಟೂತ್, ಚಾರ್ಜರ್ ಮತ್ತು ಹೈಟೆಕ್ ವೈಶಿಷ್ಟ್ಯಗಳೊಂದಿಗೆ ಬಂದಿದೆ ಸ್ಪ್ಲೆಂಡರ್ ಬೈಕ್ Read More »

500 ಪ್ರಕರಣಗಳಲ್ಲಿ ಬೇಕಾಗಿದ್ದ ಮಾವೋವಾದಿ ಸಂಘಟನೆಯ ನಾಯಕ ಶವವಾಗಿ ಪತ್ತೆ!

27 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಾವೋವಾದಿ ನಾಯಕ ಸಂದೀಪ್ ಯಾದವ್ (55) ಮೃತದೇಹ ಬಿಹಾರ ರಾಜ್ಯದ ಗಯಾ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ನಿನ್ನೆ ಪತ್ತೆಯಾಗಿದೆ. ನಿನ್ನೆ (ಬುಧವಾರ) ಸಂಜೆ ಗಯಾದ ಲುಡ್ವಾ ಅರಣ್ಯದಲ್ಲಿ ಸಂದೀಪ್ ಅಲಿಯಾಸ್ ವಿಜಯ್ ಯಾದವ್ ಶವವಾಗಿ ಪತ್ತೆಯಾಗಿದೆ. ನಿನ್ನೆ ಈ ಶವವನ್ನು ಸಿಆರ್‌ಪಿಎಫ್ ತಂಡ ಪತ್ತೆ ಮಾಡಿದೆ. 1990 ರ ದಶಕದಿಂದ ಮಾವೋವಾದಿಗಳ ಕೇಂದ್ರ ವಲಯದ ಉಸ್ತುವಾರಿ ವಹಿಸಿದ್ದ, ಈತನ ವಿರುದ್ಧ ಇಪ್ಪತ್ತಕ್ಕೂ ಹೆಚ್ಚು ಪ್ರಕರಣಗಳಿವೆ. ಬಿಹಾರ, ಜಾರ್ಖಂಡ್, ಚತ್ತೀಸ್ ಗಢ, ಪಶ್ಚಿಮ ಬಂಗಾಳ, ಆಂಧ್ರ …

500 ಪ್ರಕರಣಗಳಲ್ಲಿ ಬೇಕಾಗಿದ್ದ ಮಾವೋವಾದಿ ಸಂಘಟನೆಯ ನಾಯಕ ಶವವಾಗಿ ಪತ್ತೆ! Read More »

ಕುಂದಾಪುರ : ಕಟ್ಟೆ ಭೋಜಣ್ಣ ಆತ್ಮಹತ್ಯೆ ಪ್ರಕರಣ : ಡೆತ್ ನೋಟ್ ನಲ್ಲಿ ಕಾರಣ ಬಹಿರಂಗ

ಕುಂದಾಪುರದ ಖ್ಯಾತ ಉದ್ಯಮಿ, ಚಿನ್ಮಯಿ ಆಸ್ಪತ್ರೆ ಮಾಲೀಕ ಕಟ್ಟೆ ಭೋಜಣ್ಣ (80) ಅವರು ಗುರುವಾರ ಬೆಳಿಗ್ಗೆ ಆತ್ಮಹತ್ಯೆಗೆ ಶರಣಾಗಿರುವ ದುರದೃಷ್ಟಕರ ಘಟನೆಯೊಂದು ನಡೆದಿತ್ತು. ಈಗ ಈ ಘಟನೆಗೆ ಸಂಬಂಧಿಸಿದಂತೆ ಸೂಸೈಡ್ ಡೆತ್ ನೋಟ್ ಲಭ್ಯವಾಗಿದೆ. ಸುಸೈಡ್ ಮಾಡಿಕೊಳ್ಳಲು 9 ಕೋಟಿ ಸಾಲವೇ ಕಾರಣ ಎನ್ನಲಾಗಿದೆ. ಭೋಜಣ್ಣ ಬರೆದ ಡೆತ್ ನೋಟಿನಲ್ಲಿ ಮೊಳಹಳ್ಳಿ ಗಣೇಶ್ ಶೆಟ್ಟಿ ಮತ್ತು ಮಂಗಳೂರು ಇಸ್ಮಾಯಿಲ್ ಹೆಸರು ಪ್ರಸ್ತಾಪವಾಗಿದ್ದು, ಇಬ್ಬರು ಸೇರಿ 3ಕೋಟಿ 34 ಲಕ್ಷ ನಗದು, 5 ಕೆಜಿ ಬಂಗಾರ ವಂಚಿಸಿದ್ದಾರೆ ಎಂದು …

ಕುಂದಾಪುರ : ಕಟ್ಟೆ ಭೋಜಣ್ಣ ಆತ್ಮಹತ್ಯೆ ಪ್ರಕರಣ : ಡೆತ್ ನೋಟ್ ನಲ್ಲಿ ಕಾರಣ ಬಹಿರಂಗ Read More »

ಬೆಳ್ತಂಗಡಿ: ದೇವಾಲಯಕ್ಕೆ ಬಂದಿದ್ದ ಹಿಂದೂ ಯುವತಿಯೊಂದಿಗೆ ಪ್ರೀತಿ-ಬೆಂಗಳೂರಿನಲ್ಲಿ ಮದುವೆ!!

ಬೆಳ್ತಂಗಡಿ: ತಾಲೂಕಿನ ಕೊಕ್ಕಡದ ಮುಸ್ಲಿಂ ಆಟೋ ಡ್ರೈವರ್ ಒಬ್ಬ, ಈ ಹಿಂದೆ ಕೊಕ್ಕಡದ ಸೌತಡ್ಕ ದೇವಾಲಯಕ್ಕೆ ಬಂದಿದ್ದ ಬೆಂಗಳೂರು ಮೂಲದ ಹಿಂದೂ ಯುವತಿಯೊಬ್ಬಳನ್ನು ಪರಿಚಯಿಸಿಕೊಂಡು,ಪ್ರೀತಿಸಿ ಮದುವೆಯಾದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಘಟನೆ ಬೆಳಕಿಗೆ ಬರುತ್ತಿದ್ದಂತೆ ಹಿಂದೂ ಸಂಘಟನೆಗಳು ಕಿಡಿಕಾರಿವೆ. ಹೌದು, ಕೊಕ್ಕಡದಲ್ಲಿ ಆಟೋ ಚಾಲಕನಾಗಿದ್ದ ಮುಸ್ಲಿಂ ಯುವಕ ಸಮೀರ್(27) ಎಂಬಾತ ಬೆಂಗಳೂರಿನ ಹಿಂದೂ ಯುವತಿ ಬಸಮ್ಮ ರಕ್ಕಸಗಿ(22) ಎಂಬಾಕೆಯನ್ನು ಮೇ ತಿಂಗಳಿನಲ್ಲಿ ರಿಜಿಸ್ಟರ್ ಮದುವೆಯಾದ ಪ್ರತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಕಳೆದೆರಡು ದಿನಗಳಿಂದ ಹರಿದಾಡಿದ್ದು, ಇದೊಂದು ಲವ್ …

ಬೆಳ್ತಂಗಡಿ: ದೇವಾಲಯಕ್ಕೆ ಬಂದಿದ್ದ ಹಿಂದೂ ಯುವತಿಯೊಂದಿಗೆ ಪ್ರೀತಿ-ಬೆಂಗಳೂರಿನಲ್ಲಿ ಮದುವೆ!! Read More »

ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿ

ಧಾರವಾಡ: ಶಿಕ್ಷಕರ ಮನೆಬಾಗಿಲಿಗೆ ತೆರಳಿ ಇಂದಿನ ನೈಜ ಪರಿಸ್ಥಿತಿಯನ್ನು ವಿವರಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು. ಆಮೂಲಕ ಪಕ್ಷದ ಅಭ್ಯರ್ಥಿ ಬಸವರಾಜ ಗುರಿಕಾರ ಅವರ ಗೆಲುವಿಗೆ ಶ್ರಮಿಸಬೇಕು ಎಂದು ಶಾಸಕ ಎಚ್.ಕೆ.ಪಾಟೀಲ ಹೇಳಿದರು. ನಗರದ ನೌಕರರ ಭವನದಲ್ಲಿ ಬುಧವಾರ ನಡೆದ ಪಕ್ಷದ ಕಾರ್ಯಕರ್ತರ ಬಹಿರಂಗ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, 40 ವರ್ಷಗಳಿಂದ ಶಿಕ್ಷಕರ ಪರವಾಗಿ ಹೋರಾಟ ನಡೆಸುತ್ತಿರುವ ಬಸವರಾಜ ಗುರಿಕಾರ ಅವರು ಶಿಕ್ಷಕರ ಪ್ರತಿಯೊಂದು ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಶಿಕ್ಷಕರ ಪರವಾಗಿ ಕೆಲಸ ಮಾಡಿದ್ದಾರೆ. ಸರ್ಕಾರಗಳು ಶಿಕ್ಷಕರಿಗೆ …

ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿ Read More »

ಸನ್ನಡತೆ ಆಧಾರದ ಮೇಲೆ ಐವರು ಕೈದಿಗಳಿಗೆ ಬಿಡುಗಡೆ ಭಾಗ್ಯ

ಧಾರವಾಡ: ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾದ ಐವರು ಕೈದಿಗಳಿಗೆ ಗುರುವಾರ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಯಿತು. ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ಹುಬ್ಬಳ್ಳಿಯ ಪರಶುರಾಮ ನವಲಗುಂದ, ಹುಬ್ಬಳ್ಳಿ ತಾಲೂಕಿನ ಮಂಟೂರು ಗ್ರಾಮದ ಹನಮಂತಪ್ಪ ದೊಡ್ಡಮನಿ, ಶಿವಮೊಗ್ಗದವರಾದ ನಯಾಜುಲ್ಲಾ ಮೌಲಾಸಾಬ್, ಸೈಯದಖಾದರ್ ಮೊಯಿದ್ದೀನ್, ಕಲಘಟಗಿ ತಾಲೂಕಿನ ಶಂಕರಪ್ಪ ದೊಡ್ಡಮನಿ ಸನ್ನಡತೆ ಆಧಾರದ ಮೇಲೆ ಬಿಡುಗಡೆಗೊಂಡಿದ್ದಾರೆ. ರಾಜ್ಯದಾದ್ಯಂತ 96 ಕೈದಿಗಳನ್ನು ಬಿಡುಗಡೆ ಮಾಡಲಾಗಿದ್ದು, ಧಾರವಾಡ ಕೇಂದ್ರ ಕಾರಾಗೃಹದಿಂದ ಐವರು ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ.

ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿ

ಧಾರವಾಡ: ಶಿಕ್ಷಕರ ಮನೆಬಾಗಿಲಿಗೆ ತೆರಳಿ ಇಂದಿನ ನೈಜ ಪರಿಸ್ಥಿತಿಯನ್ನು ವಿವರಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು. ಆಮೂಲಕ ಪಕ್ಷದ ಅಭ್ಯರ್ಥಿ ಬಸವರಾಜ ಗುರಿಕಾರ ಅವರ ಗೆಲುವಿಗೆ ಶ್ರಮಿಸಬೇಕು ಎಂದು ಶಾಸಕ ಎಚ್.ಕೆ.ಪಾಟೀಲ ಹೇಳಿದರು. ನಗರದ ನೌಕರರ ಭವನದಲ್ಲಿ ಬುಧವಾರ ನಡೆದ ಪಕ್ಷದ ಕಾರ್ಯಕರ್ತರ ಬಹಿರಂಗ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, 40 ವರ್ಷಗಳಿಂದ ಶಿಕ್ಷಕರ ಪರವಾಗಿ ಹೋರಾಟ ನಡೆಸುತ್ತಿರುವ ಬಸವರಾಜ ಗುರಿಕಾರ ಅವರು ಶಿಕ್ಷಕರ ಪ್ರತಿಯೊಂದು ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಶಿಕ್ಷಕರ ಪರವಾಗಿ ಕೆಲಸ ಮಾಡಿದ್ದಾರೆ. ಸರ್ಕಾರಗಳು ಶಿಕ್ಷಕರಿಗೆ …

ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿ Read More »

error: Content is protected !!
Scroll to Top