KPSC : ಆಯುಷ್ ನಿರ್ದೇಶನಾಲಯದಲ್ಲಿನ ಗ್ರೂಪ್ ಎ, ಬಿ ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ

ಕರ್ನಾಟಕ ಲೋಕಸೇವಾ ಆಯೋಗವು 2020ನೇ ಸಾಲಿನ ಆಯುಷ್ ನಿರ್ದೇಶನಾಲಯದಲ್ಲಿನ ವಿವಿಧ ಗ್ರೂಪ್ ಎ ಮತ್ತು ಬಿ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಯನ್ನು ಇದೀಗ ಪ್ರಕಟಿಸಿದೆ. ಸದರಿ ಸಾಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ನೇಮಕ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು ಕೆಪಿಎಸ್‌ಸಿ ವೆಬ್‌ಸೈಟ್‌ಗೆ ಭೇಟಿ ನೀಡಿ, ತಾತ್ಕಾಲಿಕ ಆಯ್ಕೆಪಟ್ಟಿಗಳನ್ನು ಚೆಕ್ ಮಾಡಬಹುದು.

ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ
ವೆಬ್‌ಸೈಟ್ ವಿಳಾಸ : https://www.kpsc.kar.nic.in/
ಆಯುಷ್ ನಿರ್ದೇಶನಾಲಯದಲ್ಲಿನ ವಿವಿಧ ಗ್ರೂಪ್ ಎ ಮತ್ತು ಬಿ ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿ ಚೆಕ್ ಮಾಡುವುದು ಹೇಗೆ?

ಕೆಪಿಎಸ್‌ಸಿ ವೆಬ್‌ಸೈಟ್
https://www.kpsc.kar.nic.in/ ಭೇಟಿ ನೀಡಿ,
ತೆರೆದ ಮುಖಪುಟದಲ್ಲಿ ‘ಪಟ್ಟಿಗಳು’ ಎಂಬಲ್ಲಿ ಕ್ಲಿಕ್
ಮಾಡಿ, ನಂತರ ಆಯ್ಕೆಪಟ್ಟಿ, ತಾತ್ಕಾಲಿಕ ಆಯ್ಕೆಪಟ್ಟಿ ಆಯ್ಕೆಗಳನ್ನು ಕ್ಲಿಕ್ ಮಾಡಿದಾಗ,ಇತ್ತೀಚೆಗೆ ಪ್ರಕಟಗೊಂಡ ತಾತ್ಕಾಲಿಕ ಆಯ್ಕೆಪಟ್ಟಿಗಳು ಪ್ರದರ್ಶನವಾಗುತ್ತವೆ.
ಅನಂತರ ಆಯುಷ್ ನಿರ್ದೇಶನಾಲಯದಲ್ಲಿನ ವಿವಿಧ ಗ್ರೂಪ್ ಎ ಮತ್ತು ಬಿ ಹುದ್ದೆಗಳ, ಹುದ್ದೆವಾರು ತಾತ್ಕಾಲಿಕ ಆಯ್ಕೆಪಟ್ಟಿಗಳನ್ನು ಚೆಕ್ ಮಾಡಬಹುದು.

ಆಯುಷ್ ನಿರ್ದೇಶನಾಲಯದಲ್ಲಿ ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆ ಮಾಡಿದ ಹುದ್ದೆಗಳ ಲಿಸ್ಟ್ ಇಲ್ಲಿದೆ.

ಆಯುರ್ವೇದ ಪ್ರಾಧ್ಯಾಪಕರು – ಸಂಹಿತ ಸಿದ್ಧಾಂತ

ಆಯುರ್ವೇದ ಪ್ರಾಧ್ಯಾಪಕರು – ರಸಶಾಸ್ತ್ರ ಮತ್ತು
ಭೈಶಜ್ಯ ಕಲ್ಪನ

ಆಯುರ್ವೇದ ಸಹಾಯಕ ಪ್ರಾಧ್ಯಾಪಕರು – ರಸಶಾಸ್ತ್ರ ಮತ್ತು ಭೈಶಜ್ಯ ಕಲ್ಪನ

ಆಯುರ್ವೇದ ಸಹಾಯಕ ಪ್ರಾಧ್ಯಾಪಕರು –
ಕೌಮರನೃತ್ಯ / ಬಾಲರೋಗ

ಆಯುರ್ವೇದ ಸಹಾಯಕ ಪ್ರಾಧ್ಯಾಪಕರು – ಶಲ್ಯತಂತ್ರ |
ಶಲ್ಯ

ಆಯುರ್ವೇದ ಸಹಾಯಕ ಪ್ರಾಧ್ಯಾಪಕರು – ಶಾಲಕತಂತ್ರ
/ ಶಾಲಾಕ್ಯ

ಆಯುರ್ವೇದ ಸಹಾಯಕ ಪ್ರಾಧ್ಯಾಪಕರು -ಪಂಚಕರ್ಮ

ಆಯುರ್ವೇದ ಸಹಾಯಕ ಪ್ರಾಧ್ಯಾಪಕರು – ಸಂಸ್ಕೃತ

ಆಯುರ್ವೇದ ಸಹಾಯಕ ಪ್ರಾಧ್ಯಾಪಕರು –
ಅನಾಟೊಮಿ (ಹೋಮಿಯೋಪಥಿ)

ಆಯುರ್ವೇದ ಸಹಾಯಕ ಪ್ರಾಧ್ಯಾಪಕರು –
ಪಿಸಿಯೋಲಜಿ, ಬಯೋಕೆಮಿಸ್ಟ್ರಿ (ಹೋಮಿಯೋಪಥಿ)

ಆಯುರ್ವೇದ ಸಹಾಯಕ ಪ್ರಾಧ್ಯಾಪಕರು –
ಹೋಮಿಯೋಪಥಿ ಫಾರ್ಮಸಿ (ಹೋಮಿಯೋಪಥಿ)

ಈ ಮೇಲಿನ ಹುದ್ದೆಗಳಿಗೆ ಪ್ರಸ್ತುತ ತಾತ್ಕಾಲಿಕ ಆಯ್ಕೆಪಟ್ಟಿಗಳನ್ನು ಬಿಡುಗಡೆ ಮಾಡಲಾಗಿದೆ. ಚೆಕ್ ಮಾಡಲು ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ ವೆಬ್‌ಸೈಟ್ https://www.kpsc.kar.nic.in/ ಗೆ ಭೇಟಿ ನೀಡಿ.

ಕೆಪಿಎಸ್‌ಸಿ ಪ್ರಸ್ತುತ ಬಿಡುಗಡೆ ಮಾಡಿದ ಆಯುಷ್ ನಿರ್ದೇಶನಾಲಯದ ವಿವಿಧ ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿಗೆ ಏನಾದರೂ ಆಕ್ಷೇಪಣೆಗಳಿದ್ದಲ್ಲಿ, ಮೇ 31,
2022 ರೊಳಗಾಗಿ ಕೆಳಗಿನ ವಿಳಾಸಕ್ಕೆ ದಾಖಲೆ ಸಹಿತ ಕಳುಹಿಸಲು ತಿಳಿಸಲಾಗಿದೆ.

ಆಕ್ಷೇಪಣೆ ಸಲ್ಲಿಸಬೇಕಾದ ವಿಳಾಸ : ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು-560001

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Leave A Reply

Your email address will not be published.