ಬಾಳೆ ಗಿಡದ ನಾರಿನಿಂದ ಸ್ಯಾನಿಟರಿ ಪ್ಯಾಡ್ ತಯಾರಿಕೆ | ಇದನ್ನು 5 ವರ್ಷ ಕಾಲ ಬಳಸಬಹುದು

ಮಹಿಳೆಯರು ಬಾಹ್ಯ ರಕ್ಷಣೆಗಳ ಸ್ಯಾನಿಟರಿ ಪ್ಯಾಡ್‌ಗಳನ್ನು ಧರಿಸುತ್ತಾರೆ. ಮಾರುಕಟ್ಟೆಯಲ್ಲಿ ನಾನಾ ಕಂಪನಿಗಳು ಸ್ಯಾನಿಟರಿ ಪ್ಯಾಡ್ ಬ್ರಾಂಡ್‌ಗಳು ಜನಪ್ರಿಯವಾಗಿದ್ದು, ಹೆಚ್ಚಾಗಿ ಮಹಿಳೆಯರು ಸೂಕ್ತವೆನಿಸುವುದನ್ನು ಆಯ್ಕೆ ಮಾಡಿಕೊಂಡು ಖರೀದಿಸುತ್ತಾರೆ. ಅಂದಹಾಗೆಯೇ ಇದು ಮಹಿಳೆಯರಿಗೆ ನೈರ್ಮಲ್ಯ ಮತ್ತು ರಕ್ಷಣೆಯನ್ನು ಒದಗಿಸುತ್ತದೆ. ಅಂದಹಾಗೆಯೇ, ಕಸದಿಂದ ರಸ ಎಂಬ ಮಾತಿನಂತೆಯೇ ಇದೀಗ ಬಾಳೆಯ ನಾರಿನಿಂದಲೂ ಸ್ಯಾನಿಟರಿ ಪ್ಯಾಡ್ ಸಿದ್ಧಗೊಳ್ಳುತ್ತಿದೆ.

ಕೇರಳದಲ್ಲಿ ಇಂತಹದೊಂದು ಪ್ರಯೋಗ ನಡೆಸಿ, ತಯಾರಿಸಲಾಗುತ್ತಿದೆ. ಇದರ ಬಳಕೆ ಮತ್ತು ಇದರಿಂದ ಸಿಗುವ ಪ್ರಯೋಜನದ ಬಗೆಗಿನ ವಿಡಿಯೋ ವೈರಲ್ ಆಗಿದೆ. ಹೌದು, ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಬಾಳೆಯ ನಾರನ್ನು ಬಳಸಿಕೊಂಡು ಈ ಸ್ಯಾನಿಟರಿ ಪ್ಯಾಡ್ ಅನ್ನು ತಯಾರಿಸಲಾಗುತ್ತದೆ. ಅಂಗಡಿ, ಮಳಿಗೆಯಲ್ಲಿ ಸಿಗುವ ಸ್ಯಾನಿಟರಿ ಪ್ಯಾಡ್‌ಗಿಂತ ಇದು ನೈಸರ್ಗಿಕವಾಗಿ ತಯಾರಿಸಿದ್ದಾಗಿದೆ.

ವೆರೈಟಿ ಮೀಡಿಯಾ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬಾಳೆ ಗಿಡದ ನಾರಿನಿಂದ ತಯಾರಿಸುವ ಸ್ಯಾನಿಟರಿ ಪ್ಯಾಡ್ ವಿಡಿಯೋ ವೈರಲ್ ಆಗಿದೆ. ಅಂದ ಹಾಗೆಯೇ ಅಂಗಡಿಯಲ್ಲಿ ಸಿಗುವ ಸ್ಯಾನಿಟರಿ ಪ್ಯಾಡ್ ಅಲ್ಪ ಸಮಯದವರೆಗೆ ಬಳಸಬಹುದಾಗಿದ್ದರೆ, ಈ ಬಾಳೆ ನಾರಿನಿಂದ ತಯಾರಾದ ಸ್ಯಾನಿಟರಿ ಪ್ಯಾಡ್‌ನ್ನು 5 ವರ್ಷಗಳ ಕಾಲ ಬಳಸಬಹುದಾಗಿದೆ.

https://www.instagram.com/reel/Cd52CtYJ2BI/?utm_source=ig_web_copy_link
Leave A Reply

Your email address will not be published.