20 ಲಕ್ಷ ದೋಚಿ, ಮನೆ ಪರದೆಯ ಮೇಲೆ ಮಾಲೀಕನಿಗೆ ” ಐ ಲವ್ ಯೂ” ಎಂದು ಸಂದೇಶ ಬರೆದ ಕಳ್ಳರು!!!

ಜಗತ್ತಿನಲ್ಲಿ ಎಂತೆಂತ ಕಳ್ಳರಿರುತ್ತಾರೆ ಎಂದರೆ ನಂಬೋಕೆ ಅಸಾಧ್ಯ. ಎಂತೆಂತ ವಿಚಿತ್ರ ಕಳ್ಳರ ಬಗ್ಗೆ ನಾವು ಓದಿದ್ದೇವೆ. ಇತ್ತೀಚೆಗಷ್ಟೇ ಅಂಗನವಾಡಿಯೊಂದಕ್ಕೆ ಕನ್ನ ಹಾಕಿದ್ದ ವ್ಯಕ್ತಿಯೊಬ್ಬ, ಅಲ್ಲಿ ಅಡುಗೆ ಮಾಡಿ ತಿಂದು, ಕವನ ಬರೆದಿಟ್ಟ ಘಟನೆ ಮಂಡ್ಯದಲ್ಲಿ ನಡೆದಿತ್ತು. ವಿಗ್ರಹ ಕದ್ದ ಕಳ್ಳರಿಗೆ ಕೆಟ್ಟ ಕನಸುಗಳು ಬಿತ್ತೆಂದು ಭಯಗೊಂಡು ಕಳವು ಮಾಡಿದ್ದ ವಿಗ್ರಹಗಳನ್ನು ದೇವಸ್ಥಾನಕ್ಕೆ ಮರಳಿಸಿದ್ದರು. ಆದರೆ ಇಲ್ಲೊಬ್ಬ ಕಳ್ಳ, ಮನೆ ಪೂರ್ತಿ ದೋಚಿ ನಂತರ ಮಾಲೀಕನಿಗೆ ಸಂದೇಶವೊಂದನ್ನು ಬಿಟ್ಟು ಹೋಗಿದ್ದಾನೆ!

ಈ ಘಟನೆ ಗೋವಾದಲ್ಲಿ ನಡೆದಿದೆ. ದಕ್ಷಿಣ ಗೋವಾದ ಮಾರ್ಗೋವಾ ಪಟ್ಟಣದಲ್ಲಿನ ಬೃಹತ್ ಬಂಗಲೆಯೊಂದಕ್ಕೆ ಅಪರಿಚಿತ ವ್ಯಕ್ತಿಗಳು ಕನ್ನ ಹಾಕಿದ್ದಾರೆ. ಸುಮಾರು 20 ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಮೌಲ್ಯದ ನಗದು, ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಹೋಗುವಾಗ ಮನೆ ಮಾಲೀಕನಿಗೆ ‘ಐ ಲವ್ ಯೂ’ ಎಂಬ ಸಂದೇಶವನ್ನು ಬಿಟ್ಟು ಹೋಗಿದ್ದಾನೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಎರಡು ದಿನಗಳ ಕಾಲ ಸಹೋದರ ಮದುವೆಗೆಂದು ಮನೆಗೆ ಬೀಗ ಹಾಕಿ ತೆರಳಿದ್ದ ಮಾಲೀಕ ಆಸಿಫ್ ಶೇಖ್ ಕುಟುಂಬ ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮನೆಗೆ ಮರಳಿತ್ತು. ಆಗ ಅವರು ಮನೆಯ ಒಳಗಿನ ಸ್ಥಿತಿ ಕಂಡು ಕಂಗಾಲಾಗಿದ್ದಾರೆ. ಮನೆಯಲ್ಲಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಹರಡಿದ್ದವು. ಬೆಲೆ ಬಾಳುವ ವಸ್ತುಗಳನ್ನು ಕಳ್ಳರು ಕದ್ದೊಯ್ದಿರುವುದು ಅವರಿಗೆ ಗೊತ್ತಾಗಿತ್ತು. ಜೊತೆಗೆ “ಮನೆಯಲ್ಲಿನ ಟಿವಿ ಪರದೆಯ ಮೇಲೆ ಮಾರ್ಕರ್ ಬಳಸಿ ‘ಐ ಲವ್ ಯೂ’ ಎಂದು ಕಳ್ಳರು ಬರೆದು ಹೋಗಿದ್ದಾರೆ.

ತಕ್ಷಣವೇ ಆಸಿಫ್ ಅವರು ಮಾರ್ಗೋವಾ ಪೊಲೀಸರಿಗೆ ದೂರು ನೀಡಿದ್ದರು. ಕಳ್ಳರು ಸುಮಾರು 20 ಲಕ್ಷ ರೂ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳು ಮತ್ತು 1.5 ಲಕ್ಷ ರೂ ನಗದು ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: