ಈ ಸ್ಮಾರ್ಟ್ ಫೋನ್ ಗಳಲ್ಲಿ ಅಕ್ಟೋಬರ್ 24 ರಿಂದ ವಾಟ್ಸಪ್ ಸ್ಥಗಿತ!

ಹಲವಾರು ಹಳೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಅಕ್ಟೋಬರ್ 24 ರಿಂದ ವಾಟ್ಸಪ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಹೀಗಾಗಿ ವಾಟ್ಸಪ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವ ಮೊದಲು, ಫೋನ್‌ನಲ್ಲಿರುವ ಸಾಫ್ಟ್‌ವೇರ್ ಆವೃತ್ತಿಯು ಇನ್‌ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನ್ ನಿಗದಿಪಡಿಸಿದ ಅವಶ್ಯಕತೆಗಳನ್ನು ಪೂರೈಸುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕಾಗಿದೆ.

ಆದರೆ ವಾಟ್ಸಪ್ ಈ ವಿಚಾರವನ್ನು ಇನ್ನೂ ಖಚಿತಪಡಿಸಿಲ್ಲ. ಒಂದು ವೇಳೆ ವರದಿಗಳು ನಿಜವಾಗಿದ್ದರೆ, ವಾಟ್ಸಪ್ ನಿಂದ ನಿರ್ಬಂಧಿಸಲ್ಪಡುತ್ತದೆ ಮತ್ತು ಹಳೆಯ ಫೋನ್‌ಗಳಲ್ಲಿ ಸಂದೇಶಗಳು, ಫೋಟೋಗಳು ಅಥವಾ ವೀಡಿಯೊಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಸುರಕ್ಷತಾ ಕಾರಣಗಳಿಗಾಗಿ ಮತ್ತು ಬಳಕೆದಾರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ವಾಟ್ಸಪ್ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಆಪಲ್​​ ಜನಪ್ರಿಯ ಬ್ರಾಂಡ್ ಆಗಿದ್ದು, ಐಫೋನ್ ಅನ್ನು ಉತ್ಪಾದಿಸುತ್ತಾ ಬಂದಿದೆ. ಆದರೀಗ ಐಫೋನ್ ಬಳಕೆದಾರರಿಗೊಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಹಳತಾದ iOS ಆವೃತ್ತಿಗಳನ್ನು ಬಳಸುವ ಐಫೋನ್ ಬಳಕೆದಾರರಿಗೆ ಹಲವಾರು ವಾಟ್ಸಾಪ್ ಇನ್-ಆಪ್ ವೈಶಿಷ್ಟ್ಯಗಳು ಇನ್ನು ಮುಂದೆ ಲಭ್ಯವಿರುವುದಿಲ್ಲ. ಐಫೋನ್ ಹಳೆಯ ಸಾಫ್ಟ್​ವೇರ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಅದನ್ನು ತಕ್ಷಣವೇ ಅಪ್​​ಗ್ರೇಡ್ ಮಾಡಿ ಅಥವಾ ಪರಿಣಾಮ ಬೀರುವ ಅಪಾಯವಿದೆ ಎಂದು ತಿಳಿಸಿದೆ.

ಐಫೋನ್ 5, ಐಫೋನ್ 5ಸಿ, iOS 10 ಮತ್ತು iOS 11ಗಳಲ್ಲಿ ಮುಂಬರುವ ದಿನಗಳಲ್ಲಿ ವಾಟ್ಸಾಪ್ ​ ಕಾರ್ಯ ನಿರ್ವಹಿಸದೇ ಇರಬಹುದು. ಇವುಗಳಲ್ಲಿ ಹಳೆಯ ಸಾಫ್ಟ್​ವೇರ್​​ ಆಗಿರುವುದರಿಂದ, ಇತ್ತೀಚಿನ ಐಫೋನ್ಸಾ ಧನಗಳು ಇತ್ತೀಚಿನ ಸಾಫ್ಟ್​ವೇರ್​ಗೆ ನವೀಕರಣವನ್ನು ಸ್ವೀಕರಿಸುತ್ತವೆ. ಐಫೋನ್ ಹೊಂದಿದ್ದರೆ, ನಿಮ್ಮ ಫೋನ್​ಗಳಲ್ಲಿರುವ ಸಾಫ್ಟ್​ವೇರ್ ನವೀಕೃತವಾಗಿದೆಯೇ ಎಂದು ಮೊದಲು ಖಚಿತಪಡಿಸಿಕೊಳ್ಳಿ. ನಿಮ್ಮ ಐಫೋನ್ ಇತ್ತೀಚಿನ ಸಾಫ್ಟ್​ವೇರ್​ ಅನ್ನು ಚಾಲನೆ ಮಾಡುತ್ತಿದೆಯೇ ಎಂದು ನೋಡಲು ಸೆಟ್ಟಿಂಗ್​ಗಳ ಮೆನು > ಕುರಿತು > ಸಾಫ್ಟ್​​ವೇರ್ ನವೀಕರಣಕ್ಕೆ ಹೋಗಿ.

ಅಡೆತಡೆಯಿಲ್ಲದೆ ವಾಟ್ಸಪ್​ ಬಳಸುವುದನ್ನು ಮುಂದುವರಿಸಲು ಮತ್ತು ಇತ್ತೀಚಿನ ಭದ್ರತಾ ಪ್ಯಾಚ್ ಮತ್ತು ವೈಶಿಷ್ಟ್ಯಗಳನ್ನು ಸ್ವೀಕರಿಸಲು ಐಫೋನ್ ಅನ್ನು ಇತ್ತೀಚಿನ ಸಾಫ್ಟ್​ವೇರ್​​ ಆವೃತ್ತಿಗೆ ನವೀಕರಿಸುವುದು ಒಳ್ಳೆಯದು. ಐಫೋನ್ ಅನ್ನು ನವೀಕರಿಸುವ ಮೊದಲು, ಅದು ವೈಫೈ ನೆಟ್​ವರ್ಕ್​ಗೆ ಸಂಪರ್ಕಗೊಂಡಿದೆಯೇ ಮತ್ತು ನಿಮ್ಮ ಎಲ್ಲಾ ವೈಯಕ್ತಿಕ ಮತ್ತು ವೃತ್ತಿಪರ ಮಾಹಿತಿಯನ್ನು ಬ್ಯಾಕಪ್ ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.

ಈ ಸ್ಯಾಮ್ ಸಂಗ್ ಫೋನ್‌ಗಳಲ್ಲಿ ವಾಟ್ಸಪ್ ಕಾರ್ಯ ನಿರ್ವಹಿಸುವುದಿಲ್ಲ:

Samsung Galaxy Trend Lite, Galaxy Trend II, Galaxy S2, Galaxy S3 Mini, Galaxy Xcover, Galaxy Core, Galaxy Ace 2

ಆರ್ಕೋಸ್ 53 ಪ್ಲಾಟಿನಮ್, ಕ್ಯಾಟರ್ಪಿಲ್ಲರ್ ಕ್ಯಾಟ್ B15, HTC ಡಿಸೈರ್ 500, Lenovo A820, Vivo sync five, Vivo Dark knight, THL W8

Leave A Reply

Your email address will not be published.