ಉಡುಪಿ : ಬಾರ್ ಗೆ ಕುಡಿಯಲು ಬರುವ ಜನರಿಗೆ ತೊಂದರೆ ನೆಪ, ಬಹುವರ್ಷದ ಮರ ಕಡಿದ ದುಷ್ಕರ್ಮಿಗಳು | ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ

ಕಾಪು: ಬಾರ್ ಗೆ ಕುಡಿಯಲು ಬರುವವರಿಗೆ ತೊಂದರೆ ಆಗುತ್ತೆ ಅಂತ ಬಹುವರ್ಷದ ಮರವೊಂದನ್ನು ಕಡಿದು ಹಾಕಿದ ಘಟನೆಯೊಂದು ಕಾಪು ಪೇಟೆಯ ಒಳಭಾಗದ ಕಾರ್ಪೊರೇಷನ್ ಬ್ಯಾಂಕಿನ ಮುಂಭಾಗದ ಸುವರ್ಣ ಬಾರ್ ಬಳಿಯಲ್ಲಿ ನಡೆದಿದೆ. ಸಾವಿರಾರು ಹಕ್ಕಿಗಳು ವಾಸವಾಗಿದ್ದ ಈ ಮರವನ್ನು ನಿನ್ನೆ ಕಡಿದು ಹಾಕಿದ್ದಾರೆ.

ಈ ಮರದಲ್ಲಿ ಸಾವಿರಾರು ಹಕ್ಕಿಗಳು ವಾಸವಾಗಿದ್ದು ಹಕ್ಕಿಗಳ ಪಿಕ್ಕೆಗಳು ನೆಲಕ್ಕೆ ಬಿದ್ದು ಬಾರ್ ಗೆ ಬರುವ ಗಿರಾಕಿಗಳಿಗೆ ತೊಂದರೆಯಾಗುವ ದೃಷ್ಟಿಯಿಂದ ಮರವನ್ನು ಕಡಿಯಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಬಾರ್ ನಿರ್ಮಾಣವಾಗುವ ಮುನ್ನವೇ ಇದ್ದ ಈ ಮರವು ಸದ್ಯ ಸಾವಿರಾರು ಹಕ್ಕಿಗಳಿಗೆ ವಾಸಸ್ಥಾನವಾಗಿತ್ತು. ಜೊತೆಗೆ ಅದರಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಹೊರಬರುವ ಮೊಟ್ಟೆಯೊಳಗಿನ ಮರಿಗಳಿದ್ದವು. ಆದರೇ ಬಾರ್ ಗೆ ಬರುವ ಗಿರಾಕಿಗಳಿಗೆ ತೊಂದರೆಯಾಗುತ್ತೆಂಬ ದೃಷ್ಟಿಯಿಂದ ಈ ಮರವನ್ನು ಕಡಿದು ಹಾಕಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸಾರ್ವಜನಿಕರೂ ಕೂಡಾ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

1 Comment
  1. camilastore.top says

    Wow, fantastic weblog format! How lengthy have you
    been running a blog for? you make blogging look easy.
    The whole look of your site is wonderful, let alone the content!

    You can see similar here sklep online

Leave A Reply

Your email address will not be published.