ಈ ಶಾಲೆಯ ಪ್ರಿನ್ಸಿಪಾಲರಿಂದ ಹಿಡಿದು ವಿದ್ಯಾರ್ಥಿನಿಯವರೆಗೆ ಎಲ್ಲಾರಿಗೂ ಒಬ್ಬನೇ ಗಂಡ !!

ಇಲ್ಲೊಬ್ಬ ಮಹಾಶಯ ಒಂದಲ್ಲ, ಎರಡಲ್ಲ, ಮೂರು ಕೂಡಾ ಅಲ್ಲ, ಒಟ್ಟು ನಾಲ್ಕ್ ಮದುವೆಯಾಗಿದ್ದಾನೆ. ಇಂತಹ ಹಲವು ಮದುವೆಯಾದ ಸಾಧಕರ (!) ಬಗ್ಗೆ ಆಗಿಂದಾಗ್ಗೆ ನಾವು ಅಲ್ಲಲ್ಲಿ ಓದುತ್ತಲೇ ಇದ್ದೇವೆ. ಆದ್ರೇ ಈತ ಸಾಧನೆಯಲ್ಲೂ ಒಳಸಾಧನೆ ಬರೆದ ಮನುಷ್ಯ !!!

ಸೌದಿ ಅರೇಬಿಯಾದ ವ್ಯಕ್ತಿಯೊಬ್ಬ ನಾಲ್ಕು ಮಹಿಳೆಯರನ್ನು ಮದುವೆಯಾಗಿದ್ದಾನೆ. ವಿಚಿತ್ರವೆಂದ್ರೆ ಎಲ್ಲರೂ ಒಂದೇ ಶಾಲೆಯಲ್ಲಿದ್ದಾರೆ ಎನ್ನುವುದು ಮಾತ್ರ ಸೋಜಿಗದ ವಿಚಾರ.

ಒಂದು ಊರಿನಲ್ಲಿ ಒಂದು ಪತ್ನಿ ಇದ್ದು, ಇನ್ನೊಂದು ಊರಿನಲ್ಲಿ ಇನ್ನೊಂದು ಹೆಂಡತಿ ಮಡಗಿಕೊಂದು, ಮತ್ತೊಂದು ಊರಿನಲ್ಲಿ ಇನ್ನೊಬ್ಬಾಕೆಯನ್ನು ಮೈನ್ ಟೈನ್ ಮಾಡಿಕೊಂಡು, ಇನ್ನೂ ಸಾಕಾಗಲಿಲ್ಲ ಅಂದ್ರೆ ಮಗದೊಂದು ಊರಲ್ಲಿ ಅಡಿಷನಲ್ ಆಗಿ ಸಣ್ಣ ಸಂಸಾರ ಹೊಂದಿದ್ದರೆ ಅದು ಬೇರೆ ಸಂಗತಿ. ಪತ್ನಿಯರಿಗೆ ಮೋಸ ಮಾಡಿ ಈತ ಮದುವೆಯಾಗ್ತಿದ್ದಾನೆ ಎನ್ನಬಹುದು. ಆದ್ರೆ ಈ ಭೂಪ ಒಂದೇ ಶಾಲೆಯಲ್ಲಿರುವ ನಾಲ್ವರಿಗೆ ಗಂಡ. ವಿಶೇಷ ಅಂದರೆ, ಓರ್ವಾಕೆ ಶಾಲೆಯ ವಿದ್ಯಾರ್ಥಿನಿ, ಮತ್ತೋಬ್ಬಾಕೆ ಅದೇ ಶಾಲೆಯ ಶಿಕ್ಷಕಿ, ಇನ್ನೊಬ್ಬಳು ಅಲ್ಲಿನ ಮೇಲ್ವಿಚಾರಕಿ. ಒಂದೇ ಶಾಲೆಯಲ್ಲಿ ಮೂವರನ್ನು ಬುಟ್ಟಿಗೆ ಹಾಕಿಕೊಂಡ ಮೇಲೆ ಪ್ರಾಂಶುಪಾಲೆಯನ್ನು ವಶ ಮಾಡಿಕೊಳ್ಳದೆ ಇದ್ದರೆ ಹೇಗೆ ಅಂತ ಈತ ಪ್ರಿನ್ಸಿಪಾಲ್ ಅನ್ನೂ ಮದುವೆಯಾಗಿದ್ದಾನೆ. ಒಟ್ಟಾರೆ ಇಡೀ ವಿದ್ಯಾಸಂಸ್ಥೆಯ ಎಲ್ಲಾ ಸ್ಥಾನಗಳಲ್ಲೂ ಈತ ಕೈ ಹಾಕಿದ್ದಾನೆ !!

ಕಿರಿಯ ಹೆಂಡತಿ ಇನ್ನೂ ಓದುತ್ತಿದ್ದಾಳೆ : ಮದುವೆಗೆ ಒಂದು ವಯಸ್ಸಿನ ಅಂತರವಿರಬೇಕು. ಆದ್ರೆ ಇಲ್ಲಿ ಬಹಳ ವಿಚಿತ್ರವೆನ್ನಿಸುವ ಸಂಗತಿಯಿದೆ. ವ್ಯಕ್ತಿ, ವಿದ್ಯಾರ್ಥಿನಿಯನ್ನೂ ಬಿಟ್ಟಿಲ್ಲ. ಆತನ ಕಿರಿಯ ಪತ್ನಿ ಇನ್ನೂ ಓದ್ತಿದ್ದಾಳೆ. ಪ್ರಸ್ತುತ ಮಾಧ್ಯಮಿಕ ತರಗತಿಯಲ್ಲಿ ಆಕೆ ವಿದ್ಯಾಭ್ಯಾಸ ಮಾಡ್ತಿದ್ದಾಳೆ. ವಿದ್ಯಾರ್ಥಿನಿಗೆ ವಿದ್ಯಾಭ್ಯಾಸ ಹೇಳುವ ಶಿಕ್ಷಕಿ ಪತಿ ಕೂಡ ವಿದ್ಯಾರ್ಥಿನಿಯ ಗಂಡನೇ. ಇನ್ನು ವಿದ್ಯಾರ್ಥಿನಿ ಹಾಗೂ ಶಿಕ್ಷಕಿ ಗಂಡನೇ ಮೇಲ್ವಿಚಾರಕಿ ಪತಿ ಕೂಡ ಹೌದು. ಬರೀ ಇಷ್ಟಕ್ಕೆ ಆತನ ಸರಣಿ ಮದುವೆ ನಿಂತಿಲ್ಲ. ಈ ಮೂವರ ಪತಿಯೇ ಪ್ರಾಂಶುಪಾಲೆಯ ಪತಿ. 

ಈ ವಿಚಿತ್ರ ಪವಿತ್ರ ಮದುವೆ ನಡೆದಿದ್ದು ಎಲ್ಲಿ ಗೊತ್ತಾ? ಇದು ನಡೆದಿರೋದು ನೈಋತ್ಯ ಸೌದಿ ಅರೇಬಿಯಾದ ಜಿಜಾನ್‌ನಲ್ಲಿ. ಜಿಜಾನ್ ನಲ್ಲಿರುವ ಶಾಲೆಯೊಂದರ ನಾಲ್ವರು ಮಹಿಳೆಯರಿಗೆ ಗಂಡ ಒಬ್ಬನೆ.

ಶಾಲೆಯಲ್ಲಿ ಕೆಲಸ ಮಾಡ್ತಿರುವ ಪ್ರಾಂಶುಪಾಲೆ ಹಾಗೂ ನಾಲ್ಕು ಪತ್ನಿಯರಲ್ಲಿ ಒಬ್ಬರಾಗಿರುವ ಮಹಿಳೆ ಈ ಬಗ್ಗೆ ಮಾತನಾಡಿದ್ದಾರೆ. ನನ್ನ ಪತಿ ಇದೇ ಶಾಲೆಯ ಮೂವರನ್ನು ಮದುವೆಯಾಗಿದ್ದಾನೆ. ಆದ್ರೆ ಈ ಮದುವೆ ನನ್ನ ಹಾಗೂ ಇತರರ ವೃತ್ತಿ ಜೀವನದ ಮೇಲೆ ಯಾವುದೇ ಪ್ರಭಾವ ಬೀರಿಲ್ಲ. ಉಳಿದ ಮೂವರು ಪತ್ನಿಯರು ನನ್ನ ಹುದ್ದೆಗೆ ಧಕ್ಕೆ ತರುವ ಕೆಲಸ ಮಾಡಿಲ್ಲ ಎಂದಿದ್ದಾರೆ.

ವರದಿಗಳ ಪ್ರಕಾರ, ಎಲ್ಲಾ ಹೆಂಡತಿಯರು ಪರಸ್ಪರ ಸಾಮರಸ್ಯದಿಂದ ಬದುಕುತ್ತಿದ್ದಾರಂತೆ. ಶಾಲೆಯಲ್ಲಿ ಹಾಕುವಂತೆ ಪ್ರಿನ್ಸಿ ಶೆಡ್ಯೂಲ್ ಹಾಕ್ತಾರಂತೆ. ಒಬ್ಬೊಬ್ಬರದು ಒಂದೊಂದು ದಿನದ ಏಕಾಂತದ ಶಿಫ್ಟು. ಮನೆಯಲ್ಲಿ ಪ್ರಿನ್ಸಿ-ಮೇಲ್ವಿಚಾರಕಿ-ಸ್ಟೂಡೆಂಟ್ ಅಂತ ಏನೂ ವ್ಯತ್ಯಾಸವಿಲ್ಲ .ಅವರೆಲ್ಲರ ಮೆಚ್ಚಿನ ಗಂಡನ ಮೆಚ್ಚಿಸಿ ಒಳ್ಳೆ ಹೆಂಡತಿಯರಾಗಲು ಅಲ್ಲೇ ಸಣ್ಣ ಸ್ಪರ್ಧೆ ನಡೀತಿದೆಯಂತೆ. ಶಾಲೆ ಆವರಣದಲ್ಲಿ ಇದು ಬಿಸಿಬಿಸಿ ವಿಷ್ಯ ಚರ್ಚೆಗೆ ಗ್ರಾಸವಾಗಿದೆ.

Leave A Reply

Your email address will not be published.