ಕರ್ನಾಟಕದ ಹುಡುಗನಿಗೆ ಮನಸ್ಸು ನೀಡಿದ ರಾಖಿ ಸಾವಂತ್ ಲವ್ ಲೈಫ್ ನಲ್ಲಿ ‘ಮೂರನೇ ಹುಡುಗಿ’ ಎಂಟ್ರಿ | ರಾಖಿಗೆ ಧಮ್ಕಿ ಹಾಕಿದ ಮೈಸೂರಿನ ಹುಡುಗಿ

ವಿವಾದಗಳ ಮೂಲಕ ತನ್ನನ್ನು ತಾನು ಲೈಮ್ ಲೈಟ್ ನಲ್ಲಿಡಲು ಸದಾ ಸುದ್ದಿಯಲ್ಲಿರಲು ಬಯಸುವ ವ್ಯಕ್ತಿ ಎಂದರೆ ಅದು ಲ ನಟಿ ರಾಖಿ ಸಾವಂತ್. ಒಂದಿಲ್ಲೊಂದು ವಿಚಾರಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ರಾಖಿ ಪ್ರೀತಿ ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ. ಪ್ರೀತಿ,ಮದುವೆ, ಬ್ರೇಕಪ್ ಇದೆಲ್ಲಾ ರಾಖಿ ಸಾವಂತ್ ಗೆ ಹೊಸದೇನಲ್ಲ. ಈಗಾಗಲೇ ಪ್ರೀತಿ ಎಂಬ ಹೆಸರಿನಲ್ಲಿ ಯಾರ್ಯಾರನ್ನೋ ಮದುವೆಯಾಗ್ತೀನಿ ಎಂದು ಹೇಳಿ, ನಂತರ ಬೇಡ ಎಂದು‌ ಹೊರ ಬಂದ ಘಟನೆ ತುಂಬಾ ಇದೆ. ಈ ಬಗ್ಗೆ ರಾಖಿ ಸಾವಂತ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿ ಬಾವುರಾಗಿದ್ದರು. ಅಲ್ಲದೇ ಪಾಪರಾಜಿಗಳ ಮುಂದೆಯೂ ವಿಷಯ ಪ್ರಸ್ತಾಪಿಸಿ ಕಣ್ಣೀರಾಕಿದ್ದರು.

ಆದರೆ ಈಗ ಆ ಎಲ್ಲಾ ಕಹಿ ಘಟನೆಯಿಂದ ತುಂಬಾ ಮುಂದೆ ಬಂದಿರುವ ರಾಖಿ ಮತ್ತೋರ್ವ ವ್ಯಕ್ತಿಯ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಹೌದು, ರಾಖಿ ಸಾವಂತ್ ಜೊತೆ ಪ್ರೀತಿಯಲ್ಲಿ ಮುಳುಗಿರುವ ವ್ಯಕ್ತಿ ಆದಿಲ್ ಖಾನ್ ದುರಾನಿ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ರಾಖಿ ತನ್ನ ಹೊಸ ಬಾಯ್ ಫ್ರೆಂಡ್ ಎಂದು ಕರ್ನಾಟಕದ ಮೈಸೂರು ಮೂಲದ ಹುಡುಗ ಆದಿಲ್ ಖಾನ್ ದುರಾನಿ ಎಂಬಾತನನ್ನು ಪರಿಚಯಿಸಿದ್ದರು. ಈ ಸುದ್ದಿ ಬಾರಿ ವೈರಲ್ ಕೂಡ ಆಗಿತ್ತು. ಆದರೆ, ಈಗ ರಾಖಿ ಸಾವಂತ್ ಗೆ ಮೈಸೂರಿನ ರೋಶಿನಾ ಡೆಲ್ವಾರಿ ಎಂಬ ಯುವತಿ ಕರೆ ಮಾಡಿ, ಆದಿಲ್ ನನ್ನ ಹುಡುಗ. ಆತನೊಂದಿಗೆ ನಾನು ಕಳೆದ ನಾಲ್ಕು ವರ್ಷಗಳಿಂದ ಸುತ್ತಾಡುತಿದ್ದೇನೆ. ಆದ್ದರಿಂದ ಆದಿಲ್ ನಿಂದ ದೂರ ಇರುವಂತೆ ಹೇಳಿದ್ದಾಳಂತೆ. ಈ ವಿಚಾರ ಇದೀಗ ರಾಖಿಯನ್ನು ಮತ್ತೊಮ್ಮೆ ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಮುಂದೆ ಈ ತ್ರಿಕೋನ ಲವ್ ಸ್ಟೋರಿ ಎಲ್ಲಿ ತಲುಪುತ್ತದೆ ಎಂದು ಕಾದು ನೋಡಬೇಕಿದೆ.

Leave a Reply

error: Content is protected !!
Scroll to Top
%d bloggers like this: