ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ‘ಬೊಂಬೆಯಾಟ’ ಸಿನಿಮಾ ನಿರ್ದೇಶಕ, ವನ್ಯಜೀವಿ ಛಾಯಾಗ್ರಾಹಕ ಇನ್ನಿಲ್ಲ!!

ಅಂತಾರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕ, ನಿರ್ದೇಶಕ ಕಿರುತೆರೆಯ ನಿರೂಪಕ ಕೆ ಎನ್ ಮೋಹನ್ ಕುಮಾರ್ (56) ಹೃದಯಾಘಾತದಿಂದ ಸೋಮವಾರ ನಿಧನರಾದರು.

ಮೊದಲಿಗೆ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾದ ‘ಜಾನಪದ’ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಪ್ರವೇಶ ಪಡೆದ ಮೋಹನ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ರಂಗಭೂಮಿ, ಪತ್ರಿಕೋದ್ಯಮ, ಪ್ರಕಾಶನ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದ ಇವರು ‘ಬೊಂಬೆಯಾಟ’ ಎನ್ನುವ ಮಕ್ಕಳ ಸಿನಿಮಾವನ್ನು ನಿರ್ದೇಶಸಿದ್ದರು.


Ad Widget

Ad Widget

Ad Widget

Ad Widget

Ad Widget

Ad Widget

2016ರಲ್ಲಿ ತೆರೆ ಕಂಡ ಈ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡಿದ್ದು, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಭಾರತದ ಏಕೈಕ ಸಿನಿಮಾ ಎಂಬ ಹೆಗ್ಗಳಿಗೆಗೂ ಪಾತ್ರವಾಯಿತು. ಮೃತರು ತಾಯಿ,ಪತ್ನಿ, ಹಾಗೂ ಪುತ್ರಿಯನ್ನು ಅಗಲಿದ್ದು, ಸಾವಿಗೆ ಅಪಾರ ಹಿತೈಷಿಗಳು ಕಂಬನಿ ಮಿಡಿದಿದ್ದಾರೆ.

error: Content is protected !!
Scroll to Top
%d bloggers like this: