‘ಬ್ಯಾಂಕ್ ಲಾಕರ್’ ಬಗ್ಗೆ ನಿಮಗೆ ತಿಳಿಯದ ಮುಖ್ಯವಾದ ಮಾಹಿತಿ | ಬ್ಯಾಂಕ್ ಲಾಕರ್ ಓಪನ್ ಮಾಡುವ ಯೋಚನೆಯಲ್ಲಿದ್ರೆ ಇದನ್ನೊಮ್ಮೆ ಓದಲೇಬೇಕು

ಬ್ಯಾಂಕ್ ನಮ್ಮ‌ಜೀವನದ ಒಂದು ಅವಿಭಾಜ್ಯ ಅಂಗ ಅಂತಾನೇ ಹೇಳಬಹುದು. ಬ್ಯಾಂಕ್ ನಲ್ಲಿ ದುಡ್ಡಿದೆ ಅಂದರೆ ನಾವು ಸ್ವಲ್ಪ ನಿರಾಳತೆ ಮತ್ತು ಸೇಫ್ಟಿ ಫೀಲ್ ಮಾಡ್ಕೋತೀವಿ.  ಹಾಗೆನೇ ಬ್ಯಾಂಕ್ ಲಾಕರ್ ಕೂಡಾ ದೊಡ್ಡ ಮಟ್ಟದ ಪಾತ್ರ ವಹಿಸುತ್ತದೆ. ಹಾಗಾಗಿ ಇವತ್ತು ನಾವು ಬ್ಯಾಂಕ್ ಲಾಕರ್ ಬಗ್ಗೆ ಕೆಲವೊಂದು ಮಾಹಿತಿ ತಿಳಿಸಿಕೊಡುತ್ತೇವೆ.

ನೀವೇನಾದ್ರೂ ಬ್ಯಾಂಕ್ ಲಾಕರ್ ತೆಗೆದುಕೊಳ್ಳುವ ಯೋಚನೆಯಲ್ಲಿದ್ರೆ ಇದನ್ನೊಮ್ಮೆ ಓದಲೇಬೇಕು. ಬ್ಯಾಂಕ್ ಲಾಕರ್ ತೆಗೆದುಕೊಳ್ಳಲು ಬಹಳ ಖರ್ಚಾಗುತ್ತದೆ ಅನ್ನೋ ಭಾವನೆ ಬಹುತೇಕರಲ್ಲಿದೆ. ಆದರೆ ವಾಸ್ತವ ಸ್ಥಿತಿಯೇ ಬೇರೆ. ಲಾಕರ್‌ಗೆ ಬ್ಯಾಂಕ್‌ಗಳು ವಿಧಿಸುವ ವೆಚ್ಚ ಅವುಗಳ ಗಾತ್ರವನ್ನು ಅವಲಂಬಿಸಿರುತ್ತದೆ.

ಚಿನ್ನಾಭರಣ, ಬೆಲೆಬಾಳುವ ವಸ್ತುಗಳು ಮತ್ತು ಅಗತ್ಯ ದಾಖಲೆಗಳನ್ನು ಭದ್ರತೆಯ ದೃಷ್ಟಿಯಿಂದ ಬ್ಯಾಂಕ್ ಲಾಕರ್‌ನಲ್ಲಿ ತುಂಬಾ ಜನ ಇಡುತ್ತಾರೆ. ಇವುಗಳ ಸೇವೆಗಾಗಿ ಬ್ಯಾಂಕ್ ಲಾಕರ್ ಗಾತ್ರಕ್ಕೆ ಅನುಗುಣವಾಗಿ ಶುಲ್ಕ ವಿಧಿಸುತ್ತವೆ. ಕೆಲವು ಬ್ಯಾಂಕ್‌ಗಳು ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತದ ಆಧಾರದ ಮೇಲೆ ಗ್ರಾಹಕರಿಗೆ ಲಾಕರ್‌ಗಳನ್ನು ನೀಡುತ್ತವೆ.

ಎಲ್ಲಾ ಬ್ಯಾಂಕ್ ನಲ್ಲಿ ಒಂದೇ ತೆರನಾದ ಶುಲ್ಕ ಇರುವುದಿಲ್ಲ. ಗಾತ್ರ ಮತ್ತು ನಗರವನ್ನು ಇದು ಅವಲಂಬಿಸಿರುತ್ತದೆ. ಎಸ್.ಬಿ.ಐ. ಲಾಕರ್‌ಗಳು 500 ರೂಪಾಯಿಯಿಂದ ಆರಂಭವಾಗಿ 3,000 ರೂಪಾಯಿವರೆಗೆ ಲಭ್ಯವಿವೆ. ಸಣ್ಣ ಮಧ್ಯಮ ಗಾತ್ರದ ಮತ್ತು ದೊಡ್ಡ ಗಾತ್ರದ ಲಾಕರ್‌ಗಳಿಗೆ ಮೆಟ್ರೋ ಮತ್ತು ನಗರ ಪ್ರದೇಶಗಳಲ್ಲಿ ಕ್ರಮವಾಗಿ 2 ಸಾವಿರ, 4 ಸಾವಿರ, 8 ಸಾವಿರ ಮತ್ತು 12 ಸಾವಿರ ಶುಲ್ಕ ವಿಧಿಸಲಾಗುತ್ತದೆ.

ಗ್ರಾಮೀಣ ಪ್ರದೇಶದಲ್ಲಿ ಲಾಕರ್‌ನ ವಾರ್ಷಿಕ ಬಾಡಿಗೆ 1250 ರೂಪಾಯಿಯಿಂದ 10,000 ರೂಪಾಯಿವರೆಗೂ ಇದೆ. ನಗರ ಮತ್ತು ಮೆಟ್ರೋ ನಗರಗಳಿಗೆ ಈ ಶುಲ್ಕ 2 ಸಾವಿರದಿಂದ 10 ಸಾವಿರ ರೂಪಾಯಿವರೆಗೂ ಇರುತ್ತದೆ. ನೀವು ಆಕ್ಸಿಸ್ ಬ್ಯಾಂಕ್‌ನಲ್ಲಿ ಒಂದು ತಿಂಗಳಲ್ಲಿ ಮೂರು ಬಾರಿ ಉಚಿತ ಭೇಟಿ ಮಾಡಬಹುದು. ಲಾಕರ್ ಶುಲ್ಕಗಳು ಮೆಟ್ರೋ ಅಥವಾ ನಗರ ಪ್ರದೇಶದ ಶಾಖೆಯಲ್ಲಿ 2,700 ರೂಪಾಯಿಯಿಂದ ಪ್ರಾರಂಭವಾಗುತ್ತವೆ. ಮಧ್ಯಮ ಗಾತ್ರದ ಲಾಕರ್‌ಗೆ ಶುಲ್ಕ 6,000 ರೂಪಾಯಿ ಇದ್ದು ದೊಡ್ಡ ಗಾತ್ರದ ಲಾಖರ್‌ಗೆ 10,800 ರಿಂದ 12,960 ರೂಪಾಯಿ ವಿಧಿಸಲಾಗುತ್ತದೆ.

ಅರೆ-ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ಮಧ್ಯಮ ಗಾತ್ರದ, ದೊಡ್ಡ ಮತ್ತು ಹೆಚ್ಚುವರಿ ದೊಡ್ಡ ಲಾಕರ್‌ಗಳಿಗೆ ಬ್ಯಾಂಕ್ ಕ್ರಮವಾಗಿ 1500, 3000 6000 ಮತ್ತು 9000 ರೂಪಾಯಿ ಶುಲ್ಕ ವಿಧಿಸುತ್ತದೆ. ಐಸಿಐಸಿಐ ಬ್ಯಾಂಕ್ ಒಂದು ವರ್ಷ ಮುಂಚಿತವಾಗಿ ಲಾಕರ್ ಬಾಡಿಗೆಯನ್ನು ವಿಧಿಸುತ್ತದೆ. ICICI ನಲ್ಲಿ ಲಾಕರ್ ತೆರೆಯಲು, ನೀವು ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.

ಬ್ಯಾಂಕಿನಲ್ಲಿ ಸಣ್ಣ ಗಾತ್ರದ ಲಾಕರ್‌ಗೆ 1,200 ರಿಂದ 5,000 ರೂಪಾಯಿ ಇದೆ. ದೊಡ್ಡ ಲಾಕರ್‌ಗೆ 10 ಸಾವಿರದಿಂದ 22 ಸಾವಿರ ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಜೊತೆಗೆ ಜಿಎಸ್‌ಟಿಯನ್ನು ಕೂಡ ಗ್ರಾಹಕರು ಪ್ರತ್ಯೇಕವಾಗಿ ಪಾವತಿಸಬೇಕು. ನೀವು PNBನಲ್ಲಿ ಲಾಕರ್ ತೆಗೆದುಕೊಂಡರೆ ವರ್ಷದಲ್ಲಿ 12 ಬಾರಿ ಉಚಿತವಾಗಿ ಭೇಟಿ ಮಾಡಬಹುದು. ಹೆಚ್ಚುವರಿ ಭೇಟಿಗಳಿಗಾಗಿ ನೀವು 100 ರೂಪಾಯಿ ಪಾವತಿಸಬೇಕಾಗುತ್ತದೆ.

Leave A Reply

Your email address will not be published.