ಇ-ಸೈಕಲ್ ಖರೀದಿದಾರರಿಗೆ ಗುಡ್ ನ್ಯೂಸ್ !! | ಸರ್ಕಾರದಿಂದ 5,500 ರೂ. ಸಬ್ಸಿಡಿ ಘೋಷಣೆ

ಆಧಾರ್ ಕಾರ್ಡ್ ಬಳಕೆದಾರರು ಇ-ಸೈಕಲ್ ಖರೀದಿಸಲು ಯೋಜಿಸುತ್ತಿದ್ದರೆ, ಅಂತಹವರಿಗೆ ದೆಹಲಿ ಸರ್ಕಾರ ಗುಡ್ ನ್ಯೂಸ್ ನೀಡಿದೆ. ದೆಹಲಿಯಲ್ಲಿ ಇ-ಸೈಕಲ್ ಖರೀದಿಸುವವರಿಗೆ ಸರ್ಕಾರ ಶೀಘ್ರದಲ್ಲೇ ಸಬ್ಸಿಡಿ ನೀಡಲಿದ್ದು, ಇದಕ್ಕಾಗಿ ದೆಹಲಿ ಸರ್ಕಾರ ಶೀಘ್ರದಲ್ಲೇ ಮಾರ್ಗಸೂಚಿಯನ್ನು ಹೊರಡಿಸಲಿದೆ. ಕಳೆದ ತಿಂಗಳು ರಾಜ್ಯ ಸರ್ಕಾರ ಇ-ಸೈಕಲ್ ಖರೀದಿಸುವವರಿಗೆ ಸಬ್ಸಿಡಿ ಘೋಷಿಸಿತ್ತು.

ಇ-ಸೈಕಲ್‌ಗಳ ಬಳಕೆಯನ್ನು ಉತ್ತೇಜಿಸಲು ಸರ್ಕಾರವು ಕಳೆದ ತಿಂಗಳು ಸಬ್ಸಿಡಿಯನ್ನು ಘೋಷಿಸಿತ್ತು. ಆದರೆ ಅರ್ಹರಿಗೆ ಸಹಾಯಧನ ನೀಡಲು ಕಾರ್ಯಾಚರಣೆಯ ಮಾರ್ಗಸೂಚಿಗಳನ್ನು ನಿರೀಕ್ಷಿಸಲಾಗಿದೆ. “ಇ-ಸೈಕಲ್‌ಗಳ ಖರೀದಿಯ ಮೇಲಿನ ಸಬ್ಸಿಡಿ ಪಾವತಿಯ ಕಾರ್ಯಾಚರಣೆಯ ಮಾರ್ಗಸೂಚಿಗಳನ್ನು ಮುಂದಿನ ವಾರ ಬಿಡುಗಡೆ ಮಾಡಲಾಗುವುದು” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಆರಂಭದಲ್ಲಿ 10 ಸಾವಿರ ಸೈಕಲ್‌ಗಳ ಸಬ್ಸಿಡಿ ಲಾಭವನ್ನು ರಾಜ್ಯ ಸರ್ಕಾರ ನೀಡಲಿದೆ. ಈ ನಿಟ್ಟಿನಲ್ಲಿ ಶೀಘ್ರವೇ ಸರಕಾರದಿಂದ ವಿವರವಾದ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ಪ್ರಕಾರ, ಇ-ಸೈಕಲ್‌ಗಳ ಮೊದಲ 1,000 ಖರೀದಿದಾರರಿಗೆ ದೆಹಲಿ ಎಲೆಕ್ಟ್ರಿಕ್ ವೆಹಿಕಲ್ (ಇವಿ) ನೀತಿಯಡಿಯಲ್ಲಿ ರೂ. 2,000 ಹೆಚ್ಚುವರಿ ಸಬ್ಸಿಡಿ ನೀಡಲಾಗುತ್ತದೆ. ಅಂದರೆ, ಆರಂಭಿಕ 1,000 ಖರೀದಿದಾರರಿಗೆ 7500 ರೂ ಸಬ್ಸಿಡಿ ಸಿಗುತ್ತದೆ. ವಾಣಿಜ್ಯ ಬಳಕೆಗಾಗಿ ಕಾರ್ಗೋ ಇ-ಸೈಕಲ್ ಮತ್ತು ಇ-ಕಾರ್ಟ್‌ಗಳ ಮೊದಲ 5,000 ಖರೀದಿದಾರರಿಗೆ 15,000 ರೂಪಾಯಿಗಳ ಸಹಾಯಧನವನ್ನು ಸರ್ಕಾರ ಅನುಮೋದಿಸಿದೆ.

ಈ ಹಿಂದೆ ಇ-ಕಾರ್ಟ್‌ಗಳ ಖರೀದಿದಾರರಿಗೆ ಸಬ್ಸಿಡಿ ನೀಡಲಾಗುತ್ತಿತ್ತು. ಆದರೆ ಈಗ ಈ ವಾಹನಗಳನ್ನು ಖರೀದಿಸುವ ಕಂಪನಿ ಅಥವಾ ಕಾರ್ಪೊರೇಟ್ ಸಂಸ್ಥೆಗೆ 30,000 ರೂ.ಗಳ ಸಬ್ಸಿಡಿ ನೀಡಲಾಗುತ್ತದೆ. ದೆಹಲಿ ಸರ್ಕಾರವು ಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡಲು ಇ-ಸೈಕಲ್‌ಗಳನ್ನು ಉತ್ತೇಜಿಸಲು ಯೋಜಿಸಿದೆ. ಈ ಸಬ್ಸಿಡಿಯನ್ನು ಆಧಾರ್ ಕಾರ್ಡ್ ಹೊಂದಿರುವ ದೆಹಲಿ ನಿವಾಸಿಗಳಿಗೆ ಪಾವತಿಸಲಾಗುತ್ತದೆ. ಮಾರ್ಗಸೂಚಿಯ ಪ್ರಕಾರ, ಉತ್ತಮ ಗುಣಮಟ್ಟದ ಇ-ಸೈಕಲ್‌ನ ಬೆಲೆ 25 ಸಾವಿರದಿಂದ 30 ಸಾವಿರ ರೂಪಾಯಿಗಳವರೆಗೆ ಎಂದು ನಿರೀಕ್ಷಿಸಲಾಗಿದೆ.

ಅಧಿಕಾರಿಗಳ ಪ್ರಕಾರ ಕಾರ್ಗೋ ಇ-ಸೈಕಲ್ ಬೆಲೆ 40 ಸಾವಿರದಿಂದ 45 ಸಾವಿರ ರೂ. ಇರುತ್ತದೆ. ಅದೇ ಸಮಯದಲ್ಲಿ, ಇ-ಕಾರ್ಟ್‌ನ ವಿವಿಧ ಮಾದರಿಗಳು 90 ಸಾವಿರದಿಂದ 3 ಲಕ್ಷ ರೂಪಾಯಿವರೆಗೆ ಲಭ್ಯವಿದೆ. ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವುದರ ಜೊತೆಗೆ, ಚಾರ್ಜಿಂಗ್ ಸ್ಟೇಷನ್‌ಗಳ ಅಳವಡಿಕೆಗೂ ಸರ್ಕಾರ ಗಮನ ಹರಿಸುತ್ತಿದೆ ಎಂದು ತಿಳಿದುಬಂದಿದೆ.

Leave a Reply

error: Content is protected !!
Scroll to Top
%d bloggers like this: