ಕುರಿಗಾಹಿಗಳಿಗೆ ಸಿಗಲಿದೆ ಐದು ಲಕ್ಷ ರೂ.ವಿಮಾ ಸೌಲಭ್ಯ!

ಅವಲಂಬಿತ ಕುಟುಂಬವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ದೃಷ್ಟಿಯಿಂದ, ಕುರಿಗಾಹಿಗಳಿಗೆ ಐದು ಲಕ್ಷ ರೂ.ವಿಮಾ ಸೌಲಭ್ಯವನ್ನು ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆಯು ನೀಡಿದೆ.

2022-23ನೇ ಸಾಲಿನಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಕುರಿ/ಮೇಕೆ ಸಾಕಾಣಿಕೆದಾರರು/, ವಲಸೆ ಕುರಿಗಾರರು ಆಕಸ್ಮಿಕ ಮರಣ ಹೊಂದಿದಲ್ಲಿ ಕುರಿಗಾಹಿಗಳಿಗೆ ಐದು ಲಕ್ಷ ರೂ.ವಿಮೆ ನೀಡಲಿದೆ.

ಫಲಾನುಭವಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು, ಆಧಾರ ಕಾರ್ಡ್ ನಲ್ಲಿರುವ ಖಾಯಂ ವಿಳಾಸದ ವ್ಯಾಪ್ತಿಯಲ್ಲಿ ಸ್ವೀಕರಿಸಿ ಅದೇ ಜಿಲ್ಲೆಯಲ್ಲಿ ವಿಮೆ ಮಾಡಿಸಲಾಗುವುದು. ರೇಷನ್ ಕಾರ್ಡ್ ನಲ್ಲಿರುವ ಕುಟುಂಬದ ಸದಸ್ಯರ ಪಟ್ಟಿ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅರ್ಜಿದಾರರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರದ ಪ್ರತಿ, ಪಶುವೈದ್ಯಾಧಿಕಾರಿಗಳಿಂದ ಕನಿಷ್ಟ 30 ಕುರಿ / ಮೇಕೆಗಳು ಹೊಂದಿರುವ ಬಗ್ಗೆ ದೃಢೀಕೃತ ಪ್ರಮಾಣ ಪತ್ರ, ನಾಮ ನಿರ್ದೇಶಿತ ವಿವರಣಾ ಪ್ರಮಾಣ ಪತ್ರ ಒದಗಿಸಬೇಕಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ:
ಸಹಾಯಕ ನಿರ್ದೇಶಕರು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ದಾವಣಗೆರೆ.
ದೂರವಾಣಿ ಸಂಖ್ಯೆ: 9353567572 ಡಾ:ಶಿವಕುಮಾರ್ ಜಿ.ಎಸ್. ಇವರನ್ನು ಸಂಪರ್ಕಿಸಬಹುದು ಎಂದು ದಾವಣಗೆರೆ ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.