ವಯಸ್ಸಾದ ಪುರುಷರು ಹದಿಹರೆಯದ ಯುವತಿಯರ ಪ್ರೀತಿಯಲ್ಲಿ ಬೀಳಲು ಕಾರಣವೇನು ?

ಇತ್ತೀಚಿನ ದಿನಗಳಲ್ಲಿ ಪ್ರೀತಿಸಿ ಮದುವೆಯಾಗುವ ಕೆಲವೊಂದು ಜೋಡಿಗಳಲ್ಲಿ ವಯಸ್ಸಿನ ಅಂತರ ತುಂಬಾ ಇರುತ್ತದೆ. ನೀವು ಗಮನಿಸಿರಬಹುದು, ವಯಸ್ಸಾದ ಪುರುಷರು ತಮಗಿಂತ ಸಣ್ಣ ವಯಸ್ಸಿನ ಹುಡುಗಿಯರನ್ನು ಪ್ರೀತಿ ಮಾಡುತ್ತಾರೆ. ಈ ರೀತಿ ಮಾಡಿದರೆ ತಾವು ಮತ್ತೆ ತಮ್ಮ ಯೌವನದ ಸಿಹಿ ಸಮಯ ವನ್ನು ಮರುಕಳಿಸಬಹುದೆಂಬ ಭಾವನೆ.


Ad Widget

Ad Widget

ಇಲ್ಲೊಂದು ನಾವು ಗಮನಿಸಬಹುದಾದ ಮುಖ್ಯವಾದ ಸಂಗತಿ ಏನೆಂದರೆ, ಗಂಡು ಹೆಣ್ಣು ಪರಸ್ಪರ ಒಪ್ಪಿದರೆ ಮಾತ್ರ ಈ ಪ್ರೀತಿ, ಪ್ರೇಮ ವಯಸ್ಸಿನ ಅಂತರವಿದ್ದರೂ ನಡೆಯುತ್ತೆ. ಇಲ್ಲಿ ಇಷ್ಟ ಎನ್ನುವುದು ವಯಸ್ಸಾದ ಪುರುಷರು ಸಣ್ಣ ವಯಸ್ಸಿನ ಹುಡುಗಿಯರನ್ನು ಇಷ್ಟಪಡುವುದೋ ಅಥವಾ ಹುಡುಗಿಯರು ವಯಸ್ಸಾದವರನ್ನು ಇಷ್ಟಪಡುವುದೋ ಇದು ಹೇಳಲಿಕ್ಕೆ ಆಗುವುದಿಲ್ಲ. ಆದರೂ ಹೀಗೆ ಒಲವು ಅಥವಾ ಆಕರ್ಷಣೆಗೊಳಗಾಗಲು ಕೆಲವೊಂದು ಕಾರಣಗಳು ಇವೆ.


Ad Widget

ಎಲ್ಲಾ ಮನುಷ್ಯ ತಾನು ವಯಸ್ಸಾದಂತೆ ತನ್ನ ಬಾಲ್ಯದ ಜೀವನಕ್ಕೆ ಹೋಗಬೇಕೆಂಬ ಆಸೆ ಖಂಡಿತಾ ಬಯಸುತ್ತಾರೆ. ಇದಕ್ಕೆ ಅವರವರ ಆರೋಗ್ಯ, ವಯಸ್ಸು ಖಂಡಿತ ಗಮನಕ್ಕೆ ತಗೋಬೇಕು. ವಯಸ್ಸಾದಂತೆ ಎಲ್ಲರೂ ಇನ್ನೂ ಸಣ್ಣ ಯುವಕರಂತೆ ಎಂಜಾಯ್ ಮಾಡಲು, ಜೀವನವನ್ನು ಸಾಗಿಸಲು ಬಯಸುತ್ತಾರೆ. ಆದ್ದರಿಂದ, ವಯಸ್ಸಾದ ಪುರುಷರು ಯುವತಿಯರೊಂದಿಗೆ ಇರಲು ಇಷ್ಟಪಡುತ್ತಾರೆ. ಮತ್ತೆ ಅದೇ ಹಳೇ ವಯಸ್ಸಿನ ತುಡಿತವನ್ನು ಆಸ್ವಾದಿಸ ಬಹುದೆಂಬ ಭಾವನೆ ಅವರದ್ದು.

ಕಿರಿಯ ವಯಸ್ಸಿನ ಮಹಿಳೆ ಅಥವಾ ಯುವತಿ ಜೀವನದ ಬಗ್ಗೆ ಪಾಸಿಟಿವ್, ಹಾಗೂ ಮುಂದೆ ಏನಾದರೂ ಮಾಡಬೇಕು ಎಂಬ ಮನೋಭಾವವನ್ನು ಹೊಂದಿರುವ ಸಾಧ್ಯತೆ ಹೆಚ್ಚಿರುವುದರಿಂದ ಅದು ಪುರುಷರಿಗೆ ಕಡಿಮೆ ಒತ್ತಡ ಅಥವಾ ಆತಂಕವನ್ನು ದೂರ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಏಕೆಂದರೆ ಪುರುಷರು ವಯಸ್ಸಾದಂತೆ, ಅವರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಮತ್ತು ಜೀವನದ ಉತ್ಸಾಹ ಕಳೆದುಕೊಳ್ಳುತ್ತಾರೆ. ಈ ರೀತಿಯ ಯೌವನದ ಯುವತಿಯ ಜೊತೆಯ ಸಾಂಗತ್ಯ ಜೀವದಲ್ಲಿ ಅದಮ್ಯ ಉತ್ಸಾಹ ನೀಡುತ್ತೆ.

Ad Widget

Ad Widget

Ad Widget

ಸಣ್ಣ ವಯಸ್ಸಿನ ಯುವತಿಯರು ಲೈಂಗಿಕತೆಯಲ್ಲಿ ಅದ್ಭುತವಾಗಿರುತ್ತಾರೆ ಎಂದು ಪುರುಷರು ಅಂದುಕೊಂಡಿರುವುದಿಂದ ಅವರ ಸಾಂಗತ್ಯ ಖುಷಿ ನೀಡುತ್ತೆ ಎಂದು ಭಾವಿಸುತ್ತಾರೆ.

ವಯಸ್ಸಾದ ಪುರುಷರು ಹೆಚ್ಚು ಜವಾಬ್ದಾರಿಯಿಂದ ವರ್ತಿಸುತ್ತಾರೆ. ಅದೇ ರೀತಿ ಮಹಿಳೆಯರು ಎಲ್ಲಾ ಕೆಲಸಗಳನ್ನು ಮಾಡುವುದರಲ್ಲಿ ಸುಸ್ತಾದಾಗ ತಮ್ಮನ್ನು ನೋಡಿಕೊಳ್ಳುವ ಜವಾಬ್ದಾರಿಯುತ ಯಾರನ್ನಾದರೂ ಹುಡುಕುತ್ತಾರೆ. ವಯಸ್ಸಾದ ಪುರುಷರು ತಮ್ಮ ಪ್ರಬುದ್ಧತೆಯ ಕಾರಣದಿಂದಾಗಿ ತಮ್ಮ ಸಮಸ್ಯೆಗಳನ್ನು ಇನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಮಹಿಳೆಯರು ಭಾವಿಸುತ್ತಾರೆ.

ವಯಸ್ಸಾದ ಪುರುಷರು ಭದ್ರತೆಯ ಭಾವವನ್ನು ಒದಗಿಸುತ್ತಾರೆ. ಇದು ಉತ್ತಮ ಸಂಬಂಧಕ್ಕೆ ಅತ್ಯಗತ್ಯ ಮಾನದಂಡವಾಗಿದೆ. ತಮಗಿಂತ ಹೆಚ್ಚಿನ ವಯಸ್ಸಿನ ಪುರುಷರು ಜೀವನದಲ್ಲಿ ಹೆಚ್ಚು ಸಾಧಿಸಿರುತ್ತಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ಸೆಟಲ್ ಆಗಿರುತ್ತಾರೆ. ಇದು ಮಹಿಳೆಯರನ್ನು ಸೆಳೆಯಲು ಪ್ರಮುಖ ಕಾರಣ ಎನ್ನಬಹುದು.

ವಯಸ್ಸಾದ ಪುರುಷರು ಸಣ್ಣ ವಯಸ್ಸಿನ ಮಹಿಳೆಯರನ್ನು ನಿಭಾಯಿಸುವಲ್ಲಿ ಹೆಚ್ಚು ಅನುಭವಿಗಳಾಗಿರುತ್ತಾರೆ.
ಮಹಿಳೆಯರನ್ನು ಅರ್ಥ ಮಾಡಿಕೊಳ್ಳುತ್ತಾರೆ.
ಅವರು ಮಹಿಳೆಯ ಮನಸ್ಥಿತಿಯ ಬದಲಾವಣೆಗಳನ್ನು ಉತ್ತಮಗೊಳಿಸುವಷ್ಟು ಪ್ರಬುದ್ಧತೆಯನ್ನು ತೋರಿಸುತ್ತಾರೆ. ವಯಸ್ಸಾದ ಪುರುಷರು ಅವರನ್ನು ಭಾವನಾತ್ಮಕವಾಗಿ ಸುರಕ್ಷಿತವಾಗಿರಿಸುತ್ತಾರೆ ಎಂಬ ಭಾವನೆ ಮಹಿಳೆಯರದ್ದು.

error: Content is protected !!
Scroll to Top
%d bloggers like this: