ಭಾರತೀಯ ವಾಯು ಸೇನೆಯಲ್ಲಿ ಖಾಲಿ ಇರುವ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸಲು ಕೊನೆಯ ದಿನ ಜೂನ್ 20

ಭಾರತೀಯ ವಾಯು ಸೇನೆಯಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ, ಖಾಲಿ ಇರುವ ಲೋವರ್​ ಡಿವಿಷನ್​ ಕ್ಲರ್ಕ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆಯ ಹೆಸರು : ಇಂಡಿಯನ್ ಏರ್ ಫೋರ್ಸ್ (IAF)
ಹುದ್ದೆಗಳ ಸಂಖ್ಯೆ : 4
ಉದ್ಯೋಗ ಸ್ಥಳ : ದೇಶಾದ್ಯಂತ
ಹುದ್ದೆ ಹೆಸರು : ಲೋವರ್ ಡಿವಿಷನ್ ಕ್ಲರ್ಕ್ (LDC)

ವಿದ್ಯಾರ್ಹತೆ : ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 12 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.

ವಯಸ್ಸಿನ ಮಿತಿ: ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 28 ನವೆಂಬರ್​ 2021ಕ್ಕೆ ಕನಿಷ್ಠ 18 ವರ್ಷಗಳು ಪೂರೈಸಿರಬೇಕು. ಗರಿಷ್ಠ 25 ವರ್ಷಗಳನ್ನು ಮೀರಿರಬಾರದು.

ವಯೋಮಿತಿ ಸಡಿಲಿಕೆ:
ಹಿಂದುಳಿದ ಅಭ್ಯರ್ಥಿಗಳು: 03 ವರ್ಷಗಳು
ಪರಿಶಿಷ್ಟ ಜಾತಿ ಮತ್ತು ಪಂಗಡ ಅಭ್ಯರ್ಥಿಗಳು: 05 ವರ್ಷಗಳು
ವಿಕಲಚೇತನ ಅಭ್ಯರ್ಥಿಗಳು: 10 ವರ್ಷಗಳು
ವಿಕಲಚೇತನ (ಪ. ಜಾ/ ಪ. ಪಂ) ಅಭ್ಯರ್ಥಿಗಳು: 15 ವರ್ಷಗಳು
ವಿಕಲಚೇತನ (ಹಿಂದುಳಿದ ವರ್ಗ) ಅಭ್ಯರ್ಥಿಗಳು: 13 ವರ್ಷಗಳು
ವಿಭಾಗೀಯ (ನಗರ) ಅಭ್ಯರ್ಥಿಗಳು: 15 ವರ್ಷಗಳು

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ, ದೈಹಿಕ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನ ಆಯ್ಕೆ ಪ್ರಕ್ರಿಯೆ

ಅರ್ಜಿ ಸಲ್ಲಿಕೆ ವಿಧಾನ:
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಈ ವಿಳಾಸಕ್ಕೆ ಕಳುಹಿಸಬೇಕು.

ಪ್ರಿಸೈಡಿಂಗ್ ಆಫೀಸರ್, ಸಿವಿಲಿಯನ್ ನೇಮಕಾತಿ ಮಂಡಳಿ, ಏರ್ ಫೋರ್ಸ್ ರೆಕಾರ್ಡ್ ಆಫೀಸ್, ಸುಬ್ರೊಟೊ ಪಾರ್ಕ್, ನವದೆಹಲಿ-110010.

ಪ್ರಮುಖ ದಿನಾಂಕಗಳು:
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಮೇ 21, 2022
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 ಜೂನ್ 2022

ಅಧಿಕೃತ ವೆಬ್‌ಸೈಟ್: indianairforce.nic.in

ಪ್ರಮುಖ ಸೂಚನೆ:

  • ಅಧಿಸೂಚನೆಯಲ್ಲಿ ನೀಡಲಾದ ಫಾರ್ಮ್ಯಾಟ್‌ನ ಪ್ರಕಾರ ಈ ಕೆಳಗಿನ ದಾಖಲೆಗಳೊಂದಿಗೆ ಸರಿಯಾದ ಮಾಹಿತಿ ತುಂಬಿ, ಪೋಸ್ಟ್ ಮೂಲಕ ಮೇಲ್ಕಂಡ ವಿಳಾಸಕ್ಕೆ ಕಳುಹಿಸಬೇಕು.
  • ಅರ್ಜಿಯ ಜೊತೆಗೆ ಶಿಕ್ಷಣ ಅರ್ಹತೆ, ವಯಸ್ಸು, ತಾಂತ್ರಿಕ ಅರ್ಹತೆ, ದೈಹಿಕವಾಗಿ ಅಂಗವಿಕಲರು, ಅನುಭವ ಪ್ರಮಾಣಪತ್ರ, ಇ ಪ್ರಡಬ್ಲ್ಯೂಎಸ್​ ಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳು ಇರಬೇಕು.
  • ಜೊತೆಗೆ ಸ್ವಯಂ ದೃಢೀಕೃತ ಜಾತಿ ಪ್ರಮಾಣ ಪತ್ರ ಇರಬೇಕು
  • ಇತ್ತೀಚಿನ ಛಾಯಾಚಿತ್ರದೊಂದಿಗೆ (ಪಾಸ್‌ಪೋರ್ಟ್ ಗಾತ್ರ) ಸರಿಯಾಗಿ ಸ್ವಯಂ ದೃಢೀಕರಿಸಿದ ಅರ್ಜಿ ನಮೂನೆಯಲ್ಲಿ ಲಗತ್ತಿಸಬೇಕು.
    -ಈ ಅರ್ಜಿಯನ್ನು ಮೇಲ್ಕಂಡ ವಿಳಾಸಕ್ಕೆ 10 ರೂ ಸ್ಟಾಂಪ್​ನಲ್ಲಿ ಪ್ರತಿ ಹುದ್ದೆಗೆ ಪ್ರತ್ಯೇಕ ಅರ್ಜಿಯನ್ನು ರವಾನಿಸಬೇಕು.
    -ಅರ್ಜಿದಾರರು ಲಕೋಟೆಯ ಮೇಲೆ ಸ್ಪಷ್ಟವಾಗಿ ನಮೂದಿಸಲು “ಯಾವ ಹುದ್ದೆಗೆ ಅರ್ಜಿ ಮತ್ತು ಯಾವ ವರ್ಗ ಎಂಬುದನ್ನು ನಮೂದಿಸಬೇಕು.
Leave A Reply

Your email address will not be published.