ಇಂದು ಕುಸ್ತಿ ದಂತಕತೆ ದ ಗ್ರೇಟ್ ಗಾಮಾ ಜನ್ಮದಿನ | ಕುಂಗ್ ಫೂ ಕಿಂಗ್ ಬ್ರೂಸ್ ಲೀ ಕೂಡಾ ಆತನ ಅಭಿಮಾನಿಯಾಗಿದ್ದರು ಗೊತ್ತಾ ?

ಇಂದು ದಿ ಗ್ರೇಟ್ ಗಾಮಾ ಅವರ 144 ನೇ ಜನ್ಮದಿನ. ಆತ ಭಾರತೀಯ ದಿಗ್ಗಜ ಕುಸ್ತಿಪಟು. ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದುದ್ದಕ್ಕೂ ಅಜೇಯರಾಗಿ ಉಳಿದ ಶಕ್ತಿವಂತ.  ಹೀಗಾಗಿ ‘ದಿ ಗ್ರೇಟ್ ಗಾಮಾ’ ಎಂದು ಆತನನ್ನು ಹೆಸರಿಸಲಾಯಿತು. ಅವರು ಸಾರ್ವಕಾಲಿಕ ಅತ್ಯುತ್ತಮ ಕುಸ್ತಿಪಟುಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟವರು.
ಅದೇ ಕಾರಣಕ್ಕೆ ಆತನನ್ನು ಇಂದು ಗೂಗಲ್ ಕೂಡಾ ಡೂಡಲ್ ಮಾಡಿ ಗೌರವಿಸಿದೆ.

ಏನಿತ್ತು ಗಾಮಾ ಪೆಹೆಲ್ವಾನ್ ಅವರ ಅಂತಹ ಸಾಧನೆಗಳು ?

ಗ್ರೇಟ್ ಗಾಮಾ, ಅವರ ನಿಜವಾದ ಹೆಸರು ಗುಲಾಮ್ ಮೊಹಮ್ಮದ್ ಬಕ್ಷ್ ಭಟ್, ಅಸಾಧಾರಣ ಮತ್ತು ಅಜೇಯ ಭಾರತೀಯ ಕುಸ್ತಿಪಟು. ಅನೇಕರು ಅವನನ್ನು ಭೂಮಿಯ ಮೇಲೆ ನಡೆದಾಡಿದ ಶ್ರೇಷ್ಠ ಕ್ಯಾಚ್-ಕ್ಯಾನ್ ಕುಸ್ತಿಪಟು ಎಂದು ಪರಿಗಣಿಸುತ್ತಾರೆ. ಗ್ರೇಟ್ ಗಾಮಾ ತನ್ನ ಅದ್ಭುತ ತಾಂತ್ರಿಕ ಕುಸ್ತಿ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದಾನೆ.

ಆತನಿಗಿದ್ದರು ಪ್ರಪಂಚದಾದ್ಯಂತ ಅನುಯಾಯಿಗಳು. ಕುಂಗ್ ಫು ದಂತಕತೆ, ಕೋಲ್ಮಿಂಚು ಬ್ರೂಸ್ ಲೀ ಅವತ್ತಿನಿಂದ ಇವತ್ತಿನವರೆಗೂ ವಿಶ್ವದ ಕೋಟ್ಯಂತರ ಪರಿಶ್ರನಿಕರ ಪಾಲಿನ ಹೀರೋ. ಆತನಿಗೆ, ಆತನ ನೆನಪಿಗೆ ಮುಪ್ಪೇ ಇಲ್ಲ. ಆಂತಃ ಬ್ರೂಸ್ ಲೀ ಕೂಡಾ ಒಬ್ಬಾತನನ್ನು ತನ್ನ ಹೀರೋ ಎಂದು ಪರಿಗಣಿಸಿದ್ದ. ಬ್ರೂಸ್ ಲೀ ಗಾಮಾ ಅವರ ಬಗ್ಗೆ ತೀವ್ರವಾದ ಒಲವನ್ನು ಇಟ್ಟುಕೊಂಡಿದ್ದ. ಗಾಮಾ ಪಡೆಯುತ್ತಿರುವ ತರಬೇತಿಯ ಬಗ್ಗೆ, ಅವರ ದಿನಚರಿಯ ಬಗ್ಗೆ ಲೇಖನಗಳನ್ನು ಓದಿ ತನ್ನ ದೇಹವನ್ನು ಕಲ್ಲಾಗಿ ಇಟ್ಟುಕೊಳ್ಳುವುದು ಹೇಗೆ ಎಂಬ ಬಗ್ಗೆ ಅಧ್ಯಯನ ನಡೆಸುತ್ತಿದ್ದರು ಬ್ರೂಸ್ ಲೀ. ಮತ್ತು ಲೀ ತ್ವರಿತವಾಗಿ ಅವುಗಳನ್ನು ತನ್ನ ಸ್ವಂತ ದಿನಚರಿಯಲ್ಲಿ ಸೇರಿಸಿಕೊಂಡನು. ಲೀ ಬಳಸಿದ, ಗಾಮಾನಿಂದ ಕಲಿತ ತರಬೇತಿಗಳಲ್ಲಿ  “ದಿ ಕ್ಯಾಟ್ ಸ್ಟ್ರೆಚ್” ಮತ್ತು ‘ಸ್ಕ್ವಾಟ್’ ಸೇರಿದೆ. ಇಂದು, 100 ಕೆಜಿ ತೂಕದ ಹಸ್ಲಿ ಎಂಬ ಡೋನಟ್-ಆಕಾರದ ವ್ಯಾಯಾಮದ ಡಿಸ್ಕ್ ಅನ್ನು ಅವರು ಸ್ಕ್ವಾಟ್‌ಗಳು ಮತ್ತು ಪುಷ್‌ಅಪ್‌ಗಳಿಗಾಗಿ ಬಳಸುತ್ತಿದ್ದರು. ( ಈಗ ಇದನ್ನು ಭಾರತದ ಪಟಿಯಾಲದಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ (ಎನ್‌ಐಎಸ್) ಮ್ಯೂಸಿಯಂನಲ್ಲಿ ಇರಿಸಲಾಗಿದೆ.)

ಗ್ರೇಟ್ ಗಾಮಾ ಅದ್ಭುತ ಬಾಲ ಪ್ರತಿಭೆ. ತನ್ನ ಕೇವಲ
ಹತ್ತನೇ ವಯಸ್ಸಿನಲ್ಲಿ, ಅವರು ತಮ್ಮ ಮೊದಲ ಸ್ಟ್ರಾಂಗ್‌ಮ್ಯಾನ್ ಸ್ಪರ್ಧೆಗೆ ಪ್ರವೇಶಿಸಿದರು ಮತ್ತು ಅಂದಿನಿಂದಲೆ ಮನ್ನಣೆಯನ್ನು ಪಡೆದರು. ಅಂದು 400 ಕ್ಕೂ ಹೆಚ್ಚು ಕುಸ್ತಿಪಟುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕುಸ್ತಿ ಪಂದ್ಯದಲ್ಲಿ ತನ್ನ ಹತ್ತನೆಯ ವಯಸ್ಸಿನಲ್ಲಿ ಭಾಗವಹಿಸಿದ ಗಾಮಾ ಟಾಪ್ 15 ರಲ್ಲಿ ಸ್ಥಾನ ಪಡೆಯುವಲ್ಲಿ ಸಫಲನಾಗಿದ್ದ. ಗಾಮಾನ ಆಟ ನೋಡಿದ್ದ ಜೋಧ್‌ಪುರದ ಮಹಾರಾಜರ ತಮ್ಮ ಈ ಚಿಕ್ಕ ವಯಸ್ಸಿನ ಸಾಧನೆಯಿಂದ ಪ್ರಭಾವಿತರಾದರು ಮತ್ತು ಅವರು ಅವರನ್ನು ಸ್ಪರ್ಧೆಯ ವಿಜೇತ ಎಂದು ಹೆಸರಿಸಿದರು.
ಅಲ್ಲೇ ರಾಜಾಶ್ರಯದಲ್ಲಿ ಅತ್ಯುತ್ತಮ ಕುಸ್ತಿಯ ಪಟ್ಟುಗಳನ್ನು ಕಲಿತ ನಂತರ, ಗ್ರೇಟ್ ಗಾಮಾ 17 ನೇ ವಯಸ್ಸಿನಲ್ಲಿ ಖ್ಯಾತಿಗೆ ಏರಿದ. ಆಗ ಆತನಲ್ಲಿ ಶಕ್ತಿ, ಆದರ ಜತೆಗೆ ಯುಕ್ತಿ, ಒಟ್ಟೊಟ್ಟಿಗೆ ಆತ್ಮವಿಶ್ವಾಸ ತುಂಬಿ ತುಳುಕುತ್ತಿತ್ತು. ಆತ ತನ್ನ ಸಾಮರ್ಥ್ಯದಲ್ಲಿ ವಿಶ್ವಾಸ ಹೊಂದಿದ್ದ. ಮತ್ತು ಅದೇ ಕಾನ್ಫಿಡೆನ್ಸ್ ನಿಂದ ಆತ, ಅಂದಿನ ಭಾರತೀಯ ಕುಸ್ತಿ ಚಾಂಪಿಯನ್ ರಹೀಮ್ ಬಕ್ಷ್ ಸುಲ್ತಾನಿ ವಾಲಾ ಅವರನ್ನು ಪಂದ್ಯಕ್ಕೆ ಸವಾಲು ಹಾಕಿದ್ದ.

ವಾಲಾ ಒಬ್ಬ ಅಸಾಧಾರಣ ಮೈಕಟ್ಟಿನ ವ್ಯಕ್ತಿ. ಗ್ರೇಟ್ ಗಾಮಾ 5 ಅಡಿ 8 ಎತ್ತರ ಇದ್ದು ಮತ್ತು 95 ಕೆಜಿ ತೂಕವಿದ್ದರೆ, ವಾಲಾ (ರಹೀಮ್ ಬಕ್ಷ್) 7 ಅಡಿಯ ಅಜಾನುಬಾಹು ಮತ್ತು ಆತ ಬರೋಬ್ಬರಿ 136 ಕೆಜಿಗಳಷ್ಟು ತೂಕವಿದ್ದ. ಇಬ್ಬರ ನಡುವೆ ಒಂದು ಅಡಿ ಎತ್ತರದ  ಮತ್ತು 45 ಕೆಜಿ ತೂಕದಲ್ಲಿ ವ್ಯತ್ಯಾಸವಿತ್ತು. ಇಬ್ಬರೂ ಪೈಲ್ವಾನ ರಾಗಿದ್ದರು. ಅದಾಗಲೇ ರಹೀಮ್ ಅಲಿಯಾಸ್ ವಾಲಾ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು. ಕುಸ್ತಿ ಪಂಡಿತರ ಎಲ್ಲ ಲೆಕ್ಕಾಚಾರದ ಪ್ರಕಾರ ಕೆಲವೇ ಸೆಕೆಂಡುಗಳಲ್ಲಿ ವಾಲಾ ಗೆಲ್ಲುತ್ತಾರೆ ಎಂದು ಹಲವರು ನಿರೀಕ್ಷಿಸಿದ್ದರು. ಜಗತ್ತು ಕಂಡ ಶ್ರೇಷ್ಠ ಕುಸ್ತಿ ಪಂದ್ಯಗಳಲ್ಲಿ ಇಬ್ಬರೂ ಒಂದು ಗಂಟೆಗೂ ಹೆಚ್ಚು ಕಾಲ ಸ್ಪರ್ಧಿಸಿದರು. ವಿಸ್ಮಯಕಾರಿಯಾಗಿ, ಎಲ್ಲಿಂದಲೋ ಬಂದ ಈ ಯುವಕ ಸ್ವತಃ ಡ್ರಾ ಗಳಿಸಲು ಸಾಧ್ಯವಾಯಿತು. ತನ್ನ ಚೊಚ್ಚಲ ಪಂದ್ಯದಲ್ಲಿ, ಅವರು ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಅನ್ನು ಕಟ್ಟಿಹಾಕಿದ್ದ ದಿ ಗ್ರೇಟ್ ಗಾಮಾ. ಅಂದಿನಿಂದ ಕುಸ್ತಿಯ ನಕ್ಷೆಯಲ್ಲಿ ತನ್ನ  ಹೆಜ್ಜೆಗುರುತುಗಳನ್ನು ಬಲವಾಗಿ ತೋರಿಸಲು ಪ್ರಾರಂಭಿಸಿದ್ದ. ಗಾಮಾ ಈಗ ನಕ್ಷೆಯಲ್ಲಿ ದೃಢವಾಗಿ ಇತ್ತು.

ಕೆಲವು ತಿಂಗಳುಗಳ ನಂತರ ಇಬ್ಬರೂ ಮತ್ತೆ ಸ್ಪರ್ಧಿಸಿದರು, ಈ ಬಾರಿ ಎರಡು ಗಂಟೆಗಳ ಕಾಲ ಹರಸಾಹಸಪಟ್ಟರು ಮತ್ತು ಮತ್ತೆ, ಪಂದ್ಯವು ಕೂಡಾ ಡ್ರಾದಲ್ಲಿ ಕೊನೆಗೊಂಡಿತು. ಅವರು ಮೂರನೇ ಬಾರಿ ಸ್ಪರ್ಧಿಸಿದರು, ಮತ್ತು ಮತ್ತೆ, ಪಂದ್ಯ ಡ್ರಾ ಆಗಿತ್ತು. ಮೂರು ಬಾರಿ ಪಂದ್ಯ ನಡೆದರು ಯಾರೂ ಗೆಲ್ಲಲಿಲ್ಲ, ಯಾರೂ ಸೋಲು ಒಪ್ಪಿಕೊಳ್ಳಲಿಲ್ಲ. ಅದು1910 ರ ಸಮಯ. ಗಾಮಾ ಪ್ರಪಂಚದಾದ್ಯಂತದ ಕೆಲವು ಗೌರವಾನ್ವಿತ ಕುಸ್ತಿಪಟುಗಳನ್ನು ಸೋಲಿಸಿದ. ಆದರೂ ಆತನಿಗೆ ಸಮಾಧಾನ ಇರಲಿಲ್ಲ. ಕಾರಣ ಇನ್ನೂ ಅಗಾಧವಾದ ವಾಲಾವನ್ನು ಅಖಾಡದಲ್ಲಿ ಉರುಳಿಸಿ ಆತನಿಗೆ ಮೋಣಕಟ್ಟಿನ ಗಾತ್ರದ ದಪ್ಪ ಮೀಸೆಯನ್ನು ತಿರುವಬೇಕಿತ್ತು.
ಅಂತಿಮವಾಗಿ ಇಬ್ಬರು ಪ್ರಸಿದ್ಧ ಕುಸ್ತಿಪಟುಗಳು ತಮ್ಮ ನಾಲ್ಕನೇ ಮುಖಾಮುಖಿಯನ್ನು ಹೊಂದಿದ್ದರು. ಇಬ್ಬರೂ ರಕ್ತಕ್ಕಾಗಿ ಹೊರಬಂದರು. ಗಾಮಾ ಆಕ್ರಮಣಕಾರಿಯಾಗಿ ಹೋದರು ಮತ್ತು ಹೆಚ್ಚು ಆಕ್ರಮಣಕಾರಿ ಶೈಲಿಯನ್ನು ಅಳವಡಿಸಿಕೊಂಡರು. ಇಬ್ಬರು ಪುರುಷರು ಮೂರು ಗಂಟೆಗಳ ಕಾಲ ಹೋಲ್ಡ್‌ಗಳು, ಥ್ರೋಗಳು, ಟೇಕ್‌ಡೌನ್‌ಗಳು ಮತ್ತು ಪಿನ್ ಪ್ರಯತ್ನಗಳನ್ನು ನಿರಂತರವಾಗಿ ಸಾಗಿದವು. ಅಭಿಮಾನಿಗಳು ಉಸಿರುಬಿಗಿಹಿಡಿದು ಪಂದ್ಯ ವೀಕ್ಷಿಸಿದ್ದರು. ಪಂದ್ಯವು ತುಂಬಾ ಆಕ್ರಮಣಕಾರಿಯಾಗಿತ್ತು, ಕೊನೆಗೆ ಆಟ ಯಾವ ಮಟ್ಟಕ್ಕೆ ಬಂದಿತ್ತೆಂದರೆ ವಾಲಾ ಪಕ್ಕೆಲುಬು ಮುರಿದು ಬಲವಂತವಾಗಿ ಒಪ್ಪಿಕೊಳ್ಳಬೇಕಾಯಿತು. ಗ್ರೇಟ್ ಗಾಮಾ ಅಂತಿಮವಾಗಿ ಚಾಂಪಿಯನ್ ಅನ್ನು ಉರುಳಿಸಿದ್ದರು. ಗಾಮ ಈಗ ಬೆಟ್ಟದ ರಾಜನಾಗಿದ್ದನು. ಆತನ  ಹೆಸರು ಏಷ್ಯಾದಾದ್ಯಂತ ಹಬ್ಬಿತು. ಆತ ಅತ್ಯಂತ ಭಯಭೀತ ಪೈಲ್ವಾನ್ ಎನಿಸಿಕೊಂಡಿದ್ದ.

ಪಂದ್ಯಾವಳಿಯ ಕುಸ್ತಿ
ಈಗ ಗ್ರೇಟ್ ಗಾಮಾ ಹೀಗೆ ಏಷ್ಯಾ ಖಂಡದಲ್ಲಿ ಪ್ರಚಾರ ಮತ್ತು ಪ್ರಸಿದ್ಧಿಯನ್ನು ಗಳಿಸಿಕೊಂಡ ನಂತರ ಆತ ವಿರೋಧಿಗಳನ್ನು ಹುಡುಕಿಕೊಂಡು ಹೊರಟ. ಪ್ರಪಂಚದಾದ್ಯಂತ ಪ್ರಯಾಣಿಸಿದ.
ಲಂಡನ್‌ನಲ್ಲಿ ಅದಾಗಲೇ ಬಲಿಷ್ಠ ಕುಸ್ತಿಪಟುಗಳು ಇದ್ದರು. ಅಲ್ಲಿನ ಕೆಲವು ಹೆವಿವೇಯ್ಟ್‌ಗಳಿಗೆ ಹೋಲಿಸಿದರೆ ಗಾಮಾ ನ “ಸಣ್ಣ” ಗಾತ್ರದ ಕಾರಣದಿಂದಾಗಿ ಅಲ್ಲಿ ಗಾಮಾನಿಗೆ ಆರಂಭದಲ್ಲಿ ಪಂದ್ಯಾವಳಿಗೆ ಪ್ರವೇಶವನ್ನು ನಿರಾಕರಿಸಲಾಯಿತು. ಆಗ ರಾಮನಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಆಗ ಗಾಮ ಚಾಲೆಂಜ್ ಹಾಕಿದ್ದ. ಕೇವಲ ಮೂವತ್ತು ನಿಮಿಷಗಳೊಳಗೆ ಯಾವುದೇ ಮೂರು ಹೆವಿವೇಯ್ಟ್ ಕುಸ್ತಿಪಟುಗಳನ್ನು ಎಸೆಯಬಲ್ಲೆ ಎಂದು ಹೇಳುವ ಮೂಲಕ ಮುಕ್ತ ಸವಾಲನ್ನು ಹಾಕಿದ್ದ ಗಾಮಾ. ಒಂದು ವೇಳೆ ತಾನು ವಿಫಲನಾದರೆ, ಗಾಮಾ ಅವರಿಗೆ ಸ್ಪರ್ಧೆಯ ಬಹುಮಾನದ ಹಣವನ್ನು ಪಾವತಿಸಿ ನಾಚಿಕೆಯಿಂದ ಮನೆಗೆ ಹೋಗುತ್ತೇನೆ ಎಂಬ ಆಹ್ವಾನ ಗಮನ ಕಡೆಯಿಂದ ಹೋಗಿತ್ತು. ಆಗ ಅಲ್ಲಿನ ಪೈಲ್ವಾನ ಗಳು ಕಣಕ್ಕಿಳಿದಿದ್ದರು.

ಮೊದಲ ದಿನ, ಒಬ್ಬ ಕುಸ್ತಿಪಟು ಮಾತ್ರ ಮುಂದೆ ಹೆಜ್ಜೆ ಹಾಕಿದ. ಆತ ಬೆಂಜಮಿನ್ ರೋಲರ್ ಎಂಬ US ಕುಸ್ತಿಪಟು. ಗಾಮಾ ಅವರನ್ನು ಕೇವಲ 100 ಸೆಕೆಂಡುಗಳಲ್ಲಿ ಪಿನ್ ಮಾಡಿದ್ದ. ಮತ್ತೆ ಒಬ್ಬೊಬ್ಬರಾಗಿ ಕೆಲವರು ಕಣಕ್ಕಿಳಿದರು. ಗಾಮಾ ಮತ್ತೆ ಅವನನ್ನು ಪಿನ್ ಮಾಡಿದರು, ಈ ಬಾರಿ 9 ನಿಮಿಷ ಮತ್ತು 10 ಸೆಕೆಂಡುಗಳಲ್ಲಿ. ಆ ದಿನ ಬೇರೆ ಯಾರೂ ಮುಂದೆ ಹೋಗಲಿಲ್ಲ. ಮರುದಿನ, ಗಾಮಾ ಒಟ್ಟು 12 ಕುಸ್ತಿಪಟುಗಳನ್ನು ಸೋಲಿಸಿದರು ಮತ್ತು ಪಂದ್ಯಾವಳಿಗೆ ಅಧಿಕೃತ ಪ್ರವೇಶವನ್ನು ಪಡೆದರು. ವರ್ಷಗಳು ಕಳೆದಂತೆ, ಅವರು ಪ್ರಪಂಚದಾದ್ಯಂತದ ಕೆಲವು ಅತ್ಯುತ್ತಮ ಕುಸ್ತಿಪಟುಗಳನ್ನು ಸೋಲಿಸುವುದನ್ನು ಮುಂದುವರೆಸಿದರು. ಗಾಮಾ ಅವರು ಕುಸ್ತಿಗಳಲ್ಲಿ ಸ್ಪರ್ಧಿಸುತ್ತಲೇ ತಮ್ಮ ಸ್ಥಿತಿಯನ್ನು ದಿನದಿಂದ ದಿನಕ್ಕೆ ಸುಧಾರಿಸಿಕೊಳ್ಳುತ್ತಿದ್ದರು. ಅದರ ಫಲವಾಗಿ ಗಾಮ
ತನ್ನ ಕುಸ್ತಿ ವೃತ್ತಿಜೀವನದಲ್ಲಿ,1910 ರಲ್ಲಿ ಗಾಮಾ ವಿಶ್ವ ಹೆವಿವೇಟ್ ಚಾಂಪಿಯನ್‌ಶಿಪ್ ಮತ್ತು 1927 ರಲ್ಲಿ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ ಗೆದ್ದು ಕೊಂಡರು. ನಂತರ
1927 ರಲ್ಲಿಯೇ WWC ಗೆದ್ದ ನಂತರ ಅವರನ್ನು ಪಂದ್ಯಾವಳಿಯ ‘ಟೈಗರ್’ ಎಂದು ಹೆಸರಿಸಲಾಯಿತು. ವೇಲ್ಸ್ ರಾಜಕುಮಾರನಿಂದ ಈ ಕುಸ್ತಿಪಟು ಬೆಳ್ಳಿ ಗದೆಯನ್ನು ಸಹ ಪಡೆದರು. ದಿ ಗ್ರೇಟ್ ಗಾಮಾ ತನ್ನ ವೃತ್ತಿ ಜೀವನದುದ್ದಕ್ಕೂ ಸೋಲಿಲ್ಲದ ಸರದಾರನಾಗಿ ಚಕ್ರವರ್ತಿಯಂತೆ ಕುಸ್ತಿ ಅಖಾಡದಲ್ಲಿ ಮೆರೆದವನು.

ದೈನಂದಿನ ತರಬೇತಿ, ದಿನಚರಿ ಮತ್ತು ಆಹಾರ ಹೇಗಿತ್ತು ಗೊತ್ತಾ ?
ಗಾಮಾ ಅವರ ದೈನಂದಿನ ತರಬೇತಿಯು ಅಖಾಡಾದಲ್ಲಿ (ಕೋರ್ಟ್) ನಲವತ್ತು ಸಹ ಕುಸ್ತಿಪಟುಗಳೊಂದಿಗೆ ಸೆಣಸಾಡುವುದನ್ನು ಒಳಗೊಂಡಿತ್ತು. ಅವರು ಒಂದು ದಿನದಲ್ಲಿ ಕನಿಷ್ಠ ಐದು ಸಾವಿರ ಬೈಠಕ್‌ಗಳು (ಸ್ಕ್ವಾಟ್‌ಗಳು) ಮತ್ತು ಮೂರು ಸಾವಿರ ಡ್ಯಾಂಡ್‌ಗಳನ್ನು (ಪುಷ್‌ಅಪ್‌ಗಳ ಭಾರತೀಯ ಪದ) ಮಾಡಿದರು ಮತ್ತು ಕೆಲವೊಮ್ಮೆ 1 ಕ್ವಿಂಟಾಲ್‌ನ ಹಸ್ಲಿ ಎಂದು ಕರೆಯಲ್ಪಡುವ ಡೋನಟ್-ಆಕಾರದ ಕುಸ್ತಿ ಉಪಕರಣವನ್ನು  30 ರಿಂದ 45 ನಿಮಿಷಗಳಿಗಿಂತಲೂ ಹೆಚ್ಚು ಸಮಯ ಹೊತ್ತು ಕೊಂಡು ವ್ಯಾಯಾಮ ಮಾಡುತ್ತಿದ್ದರು.

ಆತನದು 118 ಕೆಜಿ ತೂಕದ, ಕೇವಲ ಮಾಂಸಖಂಡಗಳು ತುಂಬಿದ ಬಲಿಷ್ಠ ದೇಹ. ಈ ದಂಡಿಸುವ ದೇಹಕ್ಕೆ ಸಮಗ್ರ ಪೋಷಣೆ ಅಗತ್ಯವಿತ್ತು. ಇಂದಿನ ದೇಹ ದಂಡಕರು ಬಳಸುವ ಪ್ರೊಟೀನ್ಯುಕ್ತ ಮತ್ತು ಕೊಬ್ಬುರಹಿತ ಆಹಾರ ಪದ್ಧತಿಯನ್ನು ಗಾಮ ಮಾಡುತ್ತಿರಲಿಲ್ಲ. ಯಾಕೆಂದರೆ ಆತ ಗ್ರೇಟ್ ಗಾಮಾ !
ಆತನ ಡಯಟ್ ಭಿನ್ನವಾಗಿತ್ತು. ಆತ ದಿನಕ್ಕೆ ಹತ್ತು ಲೀಟರ್ ಹಾಲು ಕುಡಿಯುತ್ತಿದ್ದ. ಹೆಚ್ಚುಕಮ್ಮಿ 680 ಗ್ರಾಮ್ ಬಾದಾಮಿ ಜಗಿಯುತಿದ್ದ. ದಿನಕ್ಕೆ ಅರ್ಧ ಲೀಟರ್ ತುಪ್ಪ, ಎರಡು ಮುಕ್ಕಾಲು ಕೆಜಿ ಬೆಣ್ಣೆ, ತರಾವರಿಯ ಹಣ್ಣಿನ ರಸಗಳು, 6 ಕೋಳಿಗಳು, 2 ಮಟನ್ ಲೆಗ್ ಪೀಸ್ – ಇದು ಆತನ ದಿನಚರಿಯ ಆಹಾರವಾಗಿತ್ತು. 

ಇವತ್ತಿಗೆ ಗ್ರೇಟ್ ಗಾಮಾ ಬಗ್ಗೆ ಕೇಳಿಬರುತ್ತಿರುವ ವಿಷಯಗಳೆಲ್ಲಾ ಒಂದು ಅಚ್ಚರಿಯ ಕಥೆಯಂತಿದೆ. ಆತ ಒಂದು ಸಲ ಬರೋಡಾದ ಅಂದರೆ ಇಂದಿನ ವಡೋದರಾದ ಮೈದಾನ ಒಂದರಲ್ಲಿ 1200 ಕೆಜಿ ತೂಕದ  ಕಲ್ಲನ್ನು ಭೂಮಿಯಿಂದ ಮೇಲಕ್ಕೆ ಎತ್ತಿದ್ದನಂತೆ. ಅದು ಗಾಮಾನ ಶಕ್ತಿ. ಇವತ್ತಿಗೂ ಆ ಕಲ್ಲನ್ನು ಬರೋಡಾದ ಮ್ಯೂಸಿಯಮ್ಮಿನಲ್ಲಿ ಸುರಕ್ಷಿತವಾಗಿ ಇಟ್ಟಿದ್ದಾರೆ.

Leave A Reply

Your email address will not be published.