ಈ ಬ್ರ್ಯಾಂಡ್ ಗಳ ಹೆಸರು ವಿದೇಶಿ ಕಂಪನಿಗಳಂತೆ ಕೇಳಿದರೂ, ಆದರೆ ಇವು ನಮ್ಮ ನೆಲದ, ಅಪ್ಪಟ ದೇಶಿ ಬ್ರ್ಯಾಂಡ್ !

ಇವುಗಳು ವಿದೇಶೀ ಕಂಪನಿ ಬ್ರ್ಯಾಂಡ್ ಗಳಾಗಿ ಕಾಣಿಸುತ್ತದೆ. ಹೆಸರು ಮಾತ್ರವಲ್ಲ, ಕ್ವಾಲಿಟಿ ಕೂಡಾ ಹಾಗೆನೇ ಇದೆ. ಆದರೆ ಇದು ನಮ್ಮ ನೆಲದ್ದು, ಅಂದರೆ ಭಾರತ ದೇಶದ ಬ್ರ್ಯಾಂಡ್. ಸಖತ್ ಫೇಮಸ್ ಕೂಡಾ. ಈ ಕಂಪನಿಗಳ ಉತ್ಪನ್ನದ ಗುಣಮಟ್ಟವನ್ನು ದೇಶದೆಲ್ಲೆಡೆ ಫೇಮಸ್. ಬನ್ನಿ ಅವುಗಳು ಯಾವುದು ತಿಳಿಯೋಣ.

ಭಾರತಕ್ಕೆ ಅಂತರಾಷ್ಟ್ರೀಯ ಬ್ರಾಂಡ್ ಗಳು ಕಾಲಿಟ್ಟಿವೆ. ಅವುಗಳಲ್ಲಿ ಪ್ರಪಂಚದಾದ್ಯಂತ ಜನಪ್ರಿಯವಾಗಿರುವ ಕೆಲವು ಭಾರತೀಯ ಬ್ರಾಂಡ್‌ಗಳಿವೆ. ಅವುಗಳು ಯಾವುದು ಬನ್ನಿ ತಿಳಿಯೋಣ !

ಓಲ್ಡ್ ಮಾಂಕ್ : ಇದು ಸಾಂಪ್ರದಾಯಿಕ ಭಾರತೀಯ ಡಾರ್ಕ್ ರಮ್. ಇದನ್ನು 1954 ರಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಮೋಹನ್ ಮೆಕಿನ್ ಲಿಮಿಟೆಡ್ ಪ್ರಾರಂಭಿಸಿತು. 2013 ರ ಹೊತ್ತಿಗೆ, ಇದು ವಿಶ್ವದ ಅತಿದೊಡ್ಡ ಬ್ಲ್ಯಾಕ್ ರಮ್ ಮಾರಾಟದ ಕಂಪನಿಯಾಗಿ ಬೆಳೆದಿದೆ.

ಲಾ ಓಪಾಲಾ : ಈ ಉನ್ನತ-ಮಟ್ಟದ ಟೇಬಲ್‌ವೇರ್ ಬ್ರಾಂಡ್ ಫ್ರೆಂಚ್ ಭಾಷೆ ತರಹ ಇದೆ. ಆದರೆ ವಾಸ್ತವವಾಗಿ ಇದು ಭಾರತೀಯ ಕಂಪನಿ, ಸುಶೀಲ್ ಜುಂಜುನ್‌ವಾಲಾ ಇದನ್ನು 1988 ರಲ್ಲಿ ‘ಲಾ ಒಪೇರಾ’ ಬ್ರಾಂಡ್‌ನ ಅಡಿಯಲ್ಲಿ ಇದನ್ನು ಭಾರತದಲ್ಲಿ ಪರಿಚಯಿಸಿದರು.

ವ್ಯಾನ್ ಹ್ಯುಸೆನ್ : ಅಮೆರಿಕ ಮತ್ತು ಭಾರತದಲ್ಲಿ ಪ್ರಸಿದ್ಧವಾಗಿರುವ ಫ್ಯಾಶನ್ ಬ್ರ್ಯಾಂಡ್. ಇದನ್ನು 18 ನೇ ಶತಮಾನದಲ್ಲಿ ಫಿಲಿಪ್ಸ್ ಕುಟುಂಬ ಸ್ಥಾಪಿಸಿತು. ಈಗ ಇದರ ಮಾಲೀಕತ್ವ ಆದಿತ್ಯ ಬಿರ್ಲಾ ಗ್ರೂಪ್ ಬಳಿ ಇದೆ.

ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಕಾರುಗಳು: ಮುಂಬೈನಲ್ಲಿ ಪ್ರಧಾನ ಕಚೇರಿ ಹೊಂದಿರುವ ಟಾಟಾ ಮೋಟಾರ್ಸ್ ಮತ್ತು ಟಾಟಾ ಸಮೂಹದ ಒಡೆತನದಲ್ಲಿದೆ ಇದು. ಜಾಗ್ವಾರ್ ಕಾರು ಮತ್ತು ಲ್ಯಾಂಡ್ ರೋವರ್ ಎರಡನ್ನೂ ಟಾಟಾ ಮೋಟಾರ್ಸ್ 2008 ರಲ್ಲಿ ಖರೀದಿಸಿದೆ.

ಅಲೆನ್ ಸೋಲಿ : ಇದು ಆದಿತ್ಯ ಬಿರ್ಲಾ ಗ್ರೂಪ್‌ನ ಬಟ್ಟೆ ಬ್ರ್ಯಾಂಡ್ ಆಗಿದೆ. ಇದನ್ನು 1774 ರಲ್ಲಿ ವಿಲಿಯಂ ಹೋಲಿನ್ ಪ್ರಾರಂಭಿಸಿದರು. ಮತ್ತು 1990ರಲ್ಲಿ ಮಧುರಾ ಗಾರ್ಮೆಂಟ್ಸ್ ಖರೀದಿಸಿತು.

ಡಾ ಮಿಲಾನೊ: ಡಾ ಮಿಲಾನೊ ಎಂಬುದು ಭಾರತೀಯ ಬ್ರಾಂಡಿನಂತೆ ತೋರುತ್ತಿಲ್ಲ. ಆದರೆ ಹೌದು. ಮಿಲಾನ್ ಇಟಲಿಯಲ್ಲಿದೆ. ಮಿಲಾನೊ ಎಂಬ ವರ್ಡ್ ಇಟಲಿಯ ಜನ ಬಳಸುತ್ತಾರೆ. ಇಟಾಲಿಯನ್ ಬ್ರ್ಯಾಂಡ್ ತೋರುವ ಇದು, ಭಾರತ ಮತ್ತು ವಿದೇಶಗಳಲ್ಲಿ ಉನ್ನತ ಮಟ್ಟದ ಚರ್ಮದ ವಸ್ತುಗಳು ಮತ್ತು ಗೃಹೋಪಯೋಗಿ ವಸ್ತುಗಳನ್ನು ತಯಾರಿಸುತ್ತಾರೆ. ಈ ಕಂಪನಿಯ ಎಲ್ಲಾ ವಸ್ತುಗಳು ಭಾರತದಲ್ಲಿಯೇ ತಯಾರಾಗುತ್ತವೆ.

ಮಾಂಟೆ ಕಾರ್ಲೊ: ಮಾಂಟೆ ಕಾರ್ಲೋ ಫ್ಯಾಶನ್ ಲಿಮಿಟೆಡ್ ಕಂಪನಿ. ಇದು 1984 ರಲ್ಲಿ ಓಸ್ವಾಲ್ ವೂಲೆನ್ ಮಿಲ್ಸ್ ಲಿಮಿಟೆಡ್‌ನಿಂದ ಸ್ಥಾಪಿಸಲ್ಪಟ್ಟ ಮಾಂಟೆ ಕಾರ್ಲೋ ಎಂಬ ಬ್ಯಾಂಡ್ ಹೆಸರಿನಲ್ಲಿ ತನ್ನ ಉಡುಪು ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಇದು ಪಂಜಾಬ್‌ನ ಲುಧಿಯಾನ ಮೂಲದ ಪೋಷಕ ಕಂಪನಿ ನಹರ್ ಗ್ರೂಪ್‌ನ ಒಡೆತನದಲ್ಲಿದೆ.

ಪೀಟರ್ ಇಂಗ್ಲೆಂಡ್ : 1997 ರಲ್ಲಿ ಪೀಟರ್ ಇಂಗ್ಲೆಂಡ್ ಅನ್ನು ಮಧುರಾ ಫ್ಯಾಶನ್ & ಲೈಫ್‌ಸ್ಟೈಲ್ ಪ್ರಾರಂಭ ಮಾಡಿತು‌ ಈಗ ಈ ಕಂಪನಿಯು ಆದಿತ್ಯ ಬಿರ್ಲಾ ಫ್ಯಾಶನ್ & ಲೈಫ್‌ಸ್ಟೈಲ್ ವಿಭಾಗವಾಗಿದೆ.

ಫ್ಲೈಯಿಂಗ್ ಮೆಷಿನ್ : ಭಾರತದ ಮೊದಲ ಸ್ವದೇಶಿ ಡೆನಿಮ್ ಬ್ರ್ಯಾಂಡ್ ಇದು. ಅರವಿಂದ್ ಲೈಫ್ ಸ್ಟೈಲ್ ಬ್ರ್ಯಾಂಡ್ ಲಿಮಿಟೆಡ್ ಇದನ್ನು 1980ರಲ್ಲಿ ಪ್ರಾರಂಭಿಸಿತು. ಲೂಯಿಸ್ ಫಿಲಿಪ್ ಪುರುಷರಿಗಾಗಿ ಫ್ಯಾಶನ್ ಬಟ್ಟೆಗಳನ್ನು ತಯಾರಿಸುವ ಈ ಕಂಪನಿ.

ದಿ ಕಲೆಕ್ಟಿವ್ : ಈ ಪ್ರಮುಖ ಐಷಾರಾಮಿ ಮತ್ತು ಪ್ರೀಮಿಯಂ ಉಡುಪುಗಳ ಬ್ರ್ಯಾಂಡ್. ಆದಿತ್ಯ ಬಿರ್ಲಾ ಗ್ರೂಪ್‌ನ ಫ್ಯಾಷನ್ ಮತ್ತು ಜೀವನಶೈಲಿ ಆರ್ಮ್ ಮಧುರಾ ಗಾರ್ಮೆಂಟ್ಸ್ ಒಡೆತನದಲ್ಲಿದೆ.

ಹೈಡಿಸೈನ್ : ಈ ಪಾಂಡಿಚೇರಿ ಮೂಲದ ಕಂಪನಿಯು ಚರ್ಮದ ವಸ್ತುಗಳನ್ನು ಉತ್ಪಾದಿಸುತ್ತದೆ ಮತ್ತು ಅದರ ಮೊದಲ ಮಳಿಗೆಯನ್ನು 1990ರಲ್ಲಿ ಪುದುಚೆರಿಯಲ್ಲಿ ಪ್ರಾರಂಭ ಮಾಡಲಾಯಿತು.

ಲ್ಯಾಕ್ಮೆ : ಇದು ಹಿಂದೂಸ್ತಾನ್ ಯೂನಿಲಿವರ್ ಒಡೆತನದ ಭಾರತೀಯ ಸೌಂದರ್ಯವರ್ಧಕ ಬ್ರಾಂಡ್ ಆಗಿದೆ. ಇದು ಜನಪ್ರಿಯ ಫ್ರೆಂಚ್ ಒಪೆರಾ ಲ್ಯಾಕ್ಮೆಯಿಂದ ತನ್ನ ಹೆಸರನ್ನು ಪಡೆದುಕೊಂಡಿದೆ.

ಅಮೃತ್ ಸಿಂಗಲ್ ಮಾಲ್ಟ್ : ವಿಶ್ವದ ಅತ್ಯುತ್ತಮ ಸಿಂಗಲ್ ಮಾಲ್ಟ್ ವಿಸ್ಕಿ ಬ್ರ್ಯಾಂಡ್‌ಗಳಲ್ಲಿ ಒಂದಾದ ಈ ಮದ್ಯವನ್ನು ಬೆಂಗಳೂರಿನ ಅಮೃತ್ ಡಿಸ್ಟಿಲರಿಯಲ್ಲಿ ತಯಾರಿಸಲಾಗುತ್ತದೆ.

ರಾಯಲ್ ಎನ್ಫೀಲ್ಡ್ : ಇದನ್ನು 1893ರಲ್ಲಿ ಸ್ಥಾಪಿಸಲಾಯಿತು. ನಂತರ ಇದು ಎನ್‌ಫೀಲ್ಡ್ ಸೈಕಲ್ ಕಂಪನಿ ಆಯಿತು. 1901ರಲ್ಲಿ ಎನ್‌ಫೀಲ್ಡ್ ಸೈಕಲ್ ತನ್ನ ಮೊದಲ ಮೋಟಾರ್ ಸೈಕಲ್ ಅನ್ನು ತಯಾರಿಸಿತು. ಈ ಬ್ರಿಟಿಷ್ ಕಂಪನಿಯು ಈಗ ಭಾರತೀಯ ಕಂಪನಿ ಐಷರ್ ಮೋಟಾರ್ಸ್ ಒಡೆತನದಲ್ಲಿದೆ. ಐಷರ್ ಮೋಟಾರ್ಸ್ ಇದನ್ನು 1994 ರಲ್ಲಿ ಖರೀದಿಸಿತು ಮತ್ತು ಅಂದಿನಿಂದ ಇದು ರಾಯಲ್ ಎನ್‌ಫೀಲ್ಡ್ ಇಂಡಿಯಾ ಆಗಿದೆ. ಈ ಬೈಕ್ ಅನ್ನು ಭಾರತೀಯ ಸೇನೆ ಮತ್ತು ಪೊಲೀಸರು ಹೆಚ್ಚಾಗಿ ಬಳಸುತ್ತಾರೆ.

Leave A Reply

Your email address will not be published.