ರೈಲಿನ ಹಾರ್ನ್ ಬಗ್ಗೆ ನಿಮಗೆ ಗೊತ್ತಿರದ ಸಂಗತಿ | 11 ಬಗೆಯ ಹಾರ್ನ್‌ಗಳು – ಒಂದೊಂದು ಹಾರ್ನ್ ಗಿದೆ ಒಂದೊಂದು ಅರ್ಥ| ಅವು ಯಾವುದು ಬನ್ನಿ ತಿಳಿಯೋಣ!

ರೈಲು ಹೆಚ್ಚಾಗಿ ಭಾರತದಲ್ಲಿ ಬಹುತೇಕ ಜನರು ಪ್ರಯಾಣಿಸಲು ಉಪಯೋಗ ಮಾಡುತ್ತಾರೆ. ಬಸ್, ವಿಮಾನ ಪ್ರಯಾಣಕ್ಕಿಂತ ರೈಲು ಉತ್ತಮ ಹಾಗೂ ಅಗ್ಗ.
ಅಂದಹಾಗೆಯೇ ನೀವು ರೈಲಿನ ಹಾರ್ನ್ ಕೇಳಿದ್ದೀರಾ? ಸಾಮಾನ್ಯವಾಗಿ ಒಂದೇ ರೀತಿಯ ಹಾರ್ನ್ ಕೇಳಿರುತ್ತೀರಾ. ಆದರೆ ಬಹುತೇಕರಿಗೆ ತಿಳಿದಿಲ್ಲ ರೈಲುಗಳಲ್ಲಿ ಒಟ್ಟು 11 ಬಗೆಯ ಹಾರ್ನ್‌ಗಳಿವೆ.
ಒಂದೊಂದು ಹಾರ್ನ್ ಒಂದೊಂದು ಅರ್ಥಗಳನ್ನು ಹೊಂದಿವೆ. ಈ 11 ರೀತಿಯ ಹಾರ್ನ್ ಯಾವುದು ಬನ್ನಿ ತಿಳಿಯೋಣ.

ಒಮ್ಮೆ ಸಣ್ಣ ಶಬ್ದದ ಹಾರ್ನ್

ರೈಲು ಒಂದು ಸಣ್ಣ ಹಾರ್ನ್ ಮಾಡಿದರೆ, ರೈಲು ಸ್ವಚ್ಛಗೊಳಿಸಲು ಅಥವಾ ನಿರ್ವಹಣೆಗಾಗಿ ಎಂದರ್ಥ. ಅಂಗಳಕ್ಕೆ ಕೊಂಡೊಯ್ದ ನಂತರ, ಮತ್ತೊಂದು ಪ್ರಯಾಣಕ್ಕೆ ರೈಲನ್ನು ಸಿದ್ಧಪಡಿಸಲಾಗುತ್ತದೆ.

ಎರಡು ಸಣ್ಣ ಶಬ್ದದ ಹಾರ್ನ್

ಚಾಲಕ ಎರಡು ಬಾರಿ ಶಾರ್ಟ್ ಹಾರ್ನ್ ಮಾಡಿದರೆ ರೈಲು ಪ್ಲಾಟ್ ಫಾರ್ಮ್ ನಿಂದ ಹೊರಡಲು ಸಿದ್ಧವಾಗಿದೆ ಎಂದರ್ಥ. ಈ ವೇಳೆ ಚಾಲಕ ಹಸಿರು ನಿಶಾನೆ ತೋರುವ ಮೂಲಕ ರೈಲನ್ನು ಆರಂಭಿಸುವಂತೆ ಸಿಬ್ಬಂದಿಗೆ ಸೂಚಿಸುತ್ತಾರೆ.

ಮೂರು ಬಾರಿ ಸಣ್ಣದಾಗಿ ಹಾರ್ನ್

ನೀವು ರೈಲಿನಲ್ಲಿ ಪ್ರಯಾಣಿಸುವವರಾಗಿದ್ದರೆ, ಮೂರು ಬಾರಿ ಸಣ್ಣದಾಗಿ ಹಾರ್ನ್ ಮಾಡುವುದನ್ನು ಕೇಳಿರುವುದಿಲ್ಲ. ಏಕೆಂದರೆ ಇಂತಹ ಹಾರ್ನ್‌ಗಳನ್ನು ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸಲಾಗುತ್ತದೆ. ಕಡಿಮೆ ಅಂತರದಲ್ಲಿ ಮೂರು ಬಾರಿ ಹಾರ್ನ್ ಬಾರಿಸಿದರೆ ಚಾಲಕ ರೈಲಿನ ನಿಯಂತ್ರಣ ಕಳೆದುಕೊಂಡಿದ್ದಾನೆ ಮತ್ತು ಗಾರ್ಡ್ ರೈಲಿನ ವ್ಯಾಕ್ಯೂಮ್ ಬ್ರೇಕ್ ಹಾಕಬೇಕು ಎಂದರ್ಥ.

ನಾಲ್ಕು ಬಾರ್ ಸಣ್ಣದಾಗಿ ಹಾರ್ನ್

ಪ್ರಯಾಣದ ವೇಳೆ ರೈಲಿನಲ್ಲಿ ತಾಂತ್ರಿಕ ದೋಷ ಉಂಟಾದರೆ ಚಾಲಕ ನಾಲ್ಕು ಬಾರಿ ಸಣ್ಣದಾಗಿ ಹಾರ್ನ್ ಮಾಡುತ್ತಾನೆ. ಇದರ್ಥ ರೈಲು ಮುಂದೆ ಹೋಗಲು ಸಿದ್ಧವಾಗಿಲ್ಲ ಮತ್ತು ದುರಸ್ತಿ ಮಾಡಬೇಕಾಗಿದೆ ಎಂದು ಸಿಬ್ಬಂದಿಗೆ ಸಿಗ್ನಲ್ ನೀಡುತ್ತಾನೆ.

ನಿರಂತರ ದೊಡ್ಡ ಹಾರ್ನ್

ರೈಲು ಉದ್ದವಾದ ಹಾರ್ನ್ ಮಾಡಿಕೊಂಡು ಬರುತ್ತಿದ್ದರೆ, ರೈಲು ನಿಲ್ದಾಣದಲ್ಲಿ ನಿಲ್ಲುವುದಿಲ್ಲ ಎಂದು ಅರ್ಥಮಾಡಿಕೊಳ್ಳಿ. ಈ ಮೂಲಕ ಪ್ಲಾಟ್‌ಫಾರ್ಮ್‌ನಲ್ಲಿ ರೈಲಿಗಾಗಿ ಕಾಯುತ್ತಿರುವ ಪ್ರಯಾಣಿಕರಿಗೆ ಚಾಲಕ ಹಾರ್ನ್ ಬಾರಿಸುವ ಮೂಲಕ ಎಚ್ಚರಿಕೆ ನೀಡುತ್ತಾನೆ.

ಒಂದು ಲಾಂಗ್ ಮತ್ತು ಒಂದು ಶಾರ್ಟ್ ಹಾರ್ನ್

ಎಂಜಿನ್ ಅನ್ನು ಪ್ರಾರಂಭಿಸುವ ಮೊದಲು ಬ್ರೇಕ್ ಪೈಪ್ ಸಿಸ್ಟಮ್ ಅನ್ನು ಹೊಂದಿಸಲು ಗಾರ್ಡ್ ಅನ್ನು ಎಚ್ಚರಿಸಲು ಚಾಲಕನಿಂದ ಈ ಹಾರ್ನ್ ಅನ್ನು ಬಳಸಲಾಗುತ್ತದೆ.

ಎರಡು ಲಾಂಗ್ ಮತ್ತು ಎರಡು ಶಾರ್ಟ್ ಹಾರ್ನ್

ಚಾಲಕ ಎರಡು ಉದ್ದ ಮತ್ತು ಎರಡು ಸಣ್ಣ ಹಾರ್ನ್‌ಗಳನ್ನು ಮಾಡಿದರೆ, ಎಂಜಿನ್ ಅನ್ನು ನಿಯಂತ್ರಿಸಲು ಚಾಲಕ ಸಿಗ್ನಲ್ ನೀಡುತ್ತಿದ್ದಾನೆ ಎಂದರ್ಥ.

ಎರಡು ವಿರಾಮಗಳೊಂದಿಗೆ ಎರಡು ಹಾರ್ನ್

ರೈಲ್ವೇ ಕ್ರಾಸಿಂಗ್ ಮೂಲಕ ರೈಲು ಹಾದು ಹೋಗುತ್ತಿರುವಾಗ, ಪ್ರಯಾಣಿಕರಿಗೆ ಎಚ್ಚರಿಕೆ ನೀಡಲು ಈ ಸಿಗ್ನಲ್ ಅನ್ನು ಬಳಸಲಾಗುತ್ತದೆ. ಇದನ್ನು ಬಹುತೇಕ ಜನರು ಕ್ರಾಸಿಂಗ್ ವೇಳೆ ಕೇಳಿರುತ್ತೀರಾ.

ಎರಡು ಲಾಂಗ್ ಮತ್ತು ಒಂದು ಶಾರ್ಟ್ ಹಾರ್ನ್

ಚಾಲಕ ರೈಲಿನ ಹಳಿ ಬದಲಿಸಲು ತಯಾರಿ ನಡೆಸಿದಾಗಲೆಲ್ಲ ಈ ರೀತಿಯಲ್ಲಿ ಹಾರ್ನ್ ಮಾಡಬೇಕಾಗುತ್ತದೆ. ಇದು ಸಿಬ್ಬಂದಿ ಹಳಿಯ ಬಳಿ ದುರಸ್ತಿ ನಡೆಸುತ್ತಿದ್ದರೆ ಎಚ್ಚುತ್ತುಕೊಳ್ಳಲು ಉಪಯುಕ್ತವಾಗುತ್ತದೆ.

ಎರಡು ಶಾರ್ಟ್ ಮತ್ತು ಒಂದು ಲಾಂಗ್ ಹಾರ್ನ್

ಈ ಹಾರ್ನ್ ಎರಡು ವಿಷಯಗಳನ್ನು ಅರ್ಥ ಹೊಂದಿದೆ. ಚಾಲಕ ಈ ರೀತಿ ಹಾರ್ನ್ ಬಾರಿಸಿದರೆ ಪ್ರಯಾಣಿಕರೊಬ್ಬರು ಚೈನ್ ಎಳೆದಿದ್ದಾರೆ. ಅಥವಾ ಸಿಬ್ಬಂದಿ ವ್ಯಾಕ್ಯೂಮ್ ಬ್ರೇಕ್ ಹಾಕಿದ್ದಾರೆ ಎಂದು ತಿಳಿದುಕೊಳ್ಳಬೇಕು.

ಆರು ಬಾರಿ ಶಾರ್ಟ್ ಹಾರ್ನ್

ಇದು ಒಂದು ರೀತಿಯ ಡಿಸ್ಟೆಸ್ ಸಿಗ್ನಲ್ ಎಂದೇ ಹೇಳಬಹುದು, ರೈಲು ಕೆಲವು ತೊಂದರೆಗಳಲ್ಲಿ ಸಿಲುಕಿಕೊಂಡಿದೆ ಎಂದರ್ಥ. ಈ ಹಾರ್ನ್ ಮೂಲಕ ರೈಲು ಸಹಾಯಕ್ಕಾಗಿ ಸಿಬ್ಬಂದಿಗೆ ಮನವಿ ಮಾಡುತ್ತಿದೆ ತಿಳಿದುಕೊಳ್ಳಬೇಕು.

Leave A Reply

Your email address will not be published.