ಕಾನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಬಟ್ಟೆಯನ್ನು ಕಿತ್ತೆಸೆದು ಪ್ರತಿಭಟಿಸಿದ ಹೋರಾಟಗಾರ್ತಿ !! | ಕಾರಣ !??

ಯುದ್ಧದ ಬಳಿಕ ಸಂಪೂರ್ಣ ಕುಗ್ಗಿ ಹೋಗಿದೆ. ಅಲ್ಲಿನ ಜನ ತಮ್ಮ ಮೇಲಿನ ದೌರ್ಜನ್ಯವನ್ನು ವ್ಯಕ್ತಪಡಿಸಲು ಹಲವಾರು ರೀತಿಯಲ್ಲಿ ಸರ್ಕಸ್ ಮಾಡುತ್ತಿರುವಾಗ, ಉಕ್ರೇನಿಯನ್ ಸೆಲೆಬ್ರಿಟಿಯೊಬ್ಬಳು ಏನು ಮಾಡಿದ್ದಾಳೆ ಗೊತ್ತಾ!?? ‌ ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಕಾನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಉಕ್ರೇನಿಯನ್ ಹೋರಾಟಗಾರ್ತಿ ಬಟ್ಟೆಯನ್ನು ಕಿತ್ತೆಸೆದು ಸೆಲೆಬ್ರಿಟಿಗಳ ಮತ್ತು ಜನರ ನಡುವೆ ಬೆತ್ತಲಾಗಿ ನಮ್ಮ ಮೇಲೆ ದೌರ್ಜನ್ಯ ನಿಲ್ಲಿಸಿ ಎಂದು ಪ್ರತಿಭಟಿಸಿದ್ದಾಳೆ.

ಉಕ್ರೇನಿ ಮಹಿಳೆ ಕಾನ್ ಚಿತ್ರೋತ್ಸವದಲ್ಲಿ ತನ್ನ ದೇಹದ ಮೇಲೆ ಉಕ್ರೇನ್ ಮೇಲೆ ನಡೆಯುತ್ತಿರುವ ಅತ್ಯಾಚಾರದ ವಿರುದ್ಧ ಸಂದೇಶವನ್ನು ಬರೆದುಕೊಂಡು ಬಂದಿದ್ದಾಳೆ. ಈ ವೇಳೆ ಎಲ್ಲರೂ ಚಿತ್ರೋತ್ಸವಕ್ಕೆ ಬರುತ್ತಿರುವುದನ್ನು ಗಮನಿಸಿ ತನ್ನ ಮೈ ಮೇಲಿದ್ದ ಬಟ್ಟೆಯನ್ನು ಬಿಚ್ಚಿ ‘ನಮ್ಮನ್ನು ಅತ್ಯಾಚಾರ ಮಾಡುವುದನ್ನು ನಿಲ್ಲಿಸಿ’ ಎಂದು ಕಿರುಚುತ್ತ ಓಡಾಡಿದ್ದಾಳೆ.

ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ನಾಲ್ಕನೇ ದಿನದಂದು ಜಾರ್ಜ್ ಮಿಲ್ಲರ್ ಅವರ ತ್ರೀ ಥೌಸಂಡ್ ಇಯರ್ಸ್ ಆಫ್ ಲಾಂಗಿಂಗ್‍ನ ಪ್ರಥಮ ಪ್ರದರ್ಶನದ ಸಂದರ್ಭದಲ್ಲಿ ಉಕ್ರೇನಿಯನ್ ಮಹಿಳೆ ಈ ರೀತಿ ಪ್ರತಿಭಟನೆ ಮಾಡಿದ್ದಾಳೆ. ಈ ಮಹಿಳೆಯೂ ರೆಡ್ ಕಾರ್ಪೆಟ್ ಸಂದರ್ಭದಲ್ಲಿ ಬಟ್ಟೆ ಕಿತ್ತೆಸೆದು ಬೆತ್ತಲಾಗಿದ್ದಾಳೆ. ಈ ವೇಳೆ ಎಲ್ಲರಿಗೂ ಕೇಳಿಸುವಂತೆ ಕೂಗಾಡಲು ಪ್ರಾರಂಭಿಸಿದ್ದಾಳೆ.

ಮಹಿಳೆಯೂ ಆಕೆಯ ಎದೆಯ ಮೇಲೆ ಉಕ್ರೇನ್ ಧ್ವಜದ ನೀಲಿ ಮತ್ತು ಹಳದಿ ಬಣ್ಣದಲ್ಲಿ ‘ನಮ್ಮನ್ನು ಅತ್ಯಾಚಾರ ಮಾಡುವುದನ್ನು ನಿಲ್ಲಿಸಿ ಎಂದು ಬರೆದುಕೊಂಡಿದ್ದಾಳೆ. ಕಾಲು ಮತ್ತು ತೊಡೆಯಲ್ಲಿ ಕೆಂಪು ಬಣ್ಣದಲ್ಲಿ ಚಿತ್ರೀಸಿಕೊಂಡಿದ್ದಾಳೆ. ಮಹಿಳೆ ಕೂಗಾಡಲು ಪ್ರಾರಂಭ ಮಾಡುತ್ತಿದ್ದಂತೆ ಸೆಕ್ಯುರಿಟಿ ಗಾರ್ಡ್‍ಗಳು ಆಕೆಯನ್ನು ಸುತ್ತಿಕೊಂಡು ರೆಡ್ ಕಾರ್ಪೆಟ್‍ನಿಂದ ಕೆಳಗೆ ಇಳಿಸಿದ್ದಾರೆ.

ಈ ವರ್ಷದ ಕಾನ್ ಚಿತ್ರೋತ್ಸವದಲ್ಲಿ ಉಕ್ರೇನ್-ರಷ್ಯಾ ಯುದ್ಧ ಎಲ್ಲರ ಗಮನ ಸೆಳೆದಿದೆ. ಈ ಕಾರ್ಯಕ್ರಮದಲ್ಲಿ ಉಕ್ರೇನ್ ನಿರ್ಮಾಪಕರು ಹಲವು ಉಕ್ರೇನ್ ಸಿನಿಮಾವನ್ನು ಪ್ರದರ್ಶನ ಮಾಡಿದ್ದಾರೆ. ಅಲ್ಲದೇ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಈ ಕಾರ್ಯಕ್ರಮದಲ್ಲಿ ಅದ್ಭುತವಾಗಿ ಭಾಷಣ ಮಾಡಿ ಎಲ್ಲರ ಗಮನ ಸೆಳೆದಿದ್ದರು.

Leave A Reply

Your email address will not be published.