ಸಮಂತಾ-ವಿಜಯ್ ದೇವರಕೊಂಡ ಹೊಸ ಸಿನಿಮಾ “ಖುಷಿ”ಯಲ್ಲಿ ಬೋಲ್ಡ್ ಸೀನ್ : ವಿಜಯ್ ದೇವರಕೊಂಡಗೆ ಲಿಪ್ ಲಾಕ್ ಮಾಡಲಿದ್ದಾರೆ ಸಮಂತಾ| ಅಭಿಮಾನಿಗಳ ಕಾತುರ ಹೆಚ್ಚಿಸಿದ ಸುದ್ದಿ

ಸಮಂತಾ ಇತ್ತೀಚೆಗೆ ನಾಗಚೈತನ್ಯರಿಂದ ದೂರ ಆದ ಮೇಲೆ, ಹೆಚ್ಚು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಸ್ನೇಹಿತರ ಜೊತೆ ಔಟಿಂಗ್ ಹೋಗಿ ತಮ್ಮ ಮನಸ್ಸಿನಲ್ಲಿ ಯಾವುದೇ ನೆಗೆಟಿವ್ ಥಾಟ್ ಬರದ ಹಾಗೇ ನೋಡ್ಕೋತ್ತಾ ಇದ್ದಾರೆ. ಮೇಲಾಗಿ ಆಕೆ ತನ್ನನ್ನು ತಾನು ಖುಷಿಯಾಗಿ ಇಡಲು ಪ್ರಯತ್ನ ಪಡುತ್ತಿದ್ದಾರೆ. ಅಂದ ಹಾಗೆ ಸಮಂತಾ “ಖುಷಿ” ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇತ್ತೀಚೆಗೆ ಸಮಂತಾ  ಹಾಗೂ ವಿಜಯ್ ದೇವರಕೊಂಡ ನಟನೆಯ ‘ಖುಷಿ’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ಕಾಶ್ಮೀರ ಸೇರಿದಂತೆ ಹಲವೆಡೆ ಚಿತ್ರೀಕರಣವಾಗಿರುವ ಈ ರೋಮ್ಯಾಂಟಿಕ್ ಚಿತ್ರ ಈಗಾಗಲೇ ನಿರೀಕ್ಷೆ ಹುಟ್ಟಿಸಿದೆ. ಈ ನಡುವೆ ಚಿತ್ರದ ಬಗ್ಗೆ ಮತ್ತೊಂದು ಗುಸು ಗುಸು ಕೇಳಿ ಬಂದಿದ್ದು, ಅದೇನೆಂದರೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.  ಮದುವೆ ಮುರಿದ ನಂತರ ಸಮಂತಾ ಹೆಚ್ಚಾಗಿ ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬೋಲ್ಡ್ ಸೀನ್ ಗಳೆಲ್ಲ ‘ಖುಷಿ’ ಚಿತ್ರದಲ್ಲೂ ಸಿಗಲಿವೆ ಎನ್ನುತ್ತಿವೆ ವರದಿಗಳು.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಈ ಸಿನಿಮಾದ ನಾಯಕ ನಟ ವಿಜಯ್ ದೇವರಕೊಂಡ ಈಗಾಗಲೇ ಹಲವು ಚಿತ್ರಗಳಲ್ಲಿ ಮೈಚಳಿ ಬಿಟ್ಟು ನಟಿಸಿರುವುದು ಎಲ್ಲರಿಗೂ ಗೊತ್ತಿದೆ. ಶಾಲಿನಿ ಪಾಂಡೆ, ರಶ್ಮಿಕಾ ಮಂದಣ್ಣ ಸೇರಿದ ಹಲವು ನಟಿಯರೊಂದಿಗೆ ಅವರು ರೊಮ್ಯಾಂಟಿಕ್ ಸೀನ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ‘ಖುಷಿ’ ಚಿತ್ರದಲ್ಲೂ ಮುಂದುವರೆಯಲಿದೆ ಎನ್ನಲಾಗಿದೆ. ಈ ಬಗ್ಗೆ ಬಾಲಿವುಡ್ ಲೈಫ್ ವರದಿ ಮಾಡಿದ್ದು, ಸಮಂತಾ ಹಾಗೂ ವಿಜಯ್ ಜೋಡಿ ಲಿಪ್‌ಲಾಕ್ ಹಾಗೂ ಇಂಟಿಮೇಟ್ ದೃಶ್ಯಗಳಲ್ಲಿ ನಟಿಸಲಿದ್ದಾರೆ ಎಂದಿದೆ. ಈ ಸುದ್ದಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ. ಅಭಿಮಾನಿಗಳಂತೂ ಈ ಸಿನಿಮಾದ ಬಿಡುಗಡೆಗೆ ಕಾತುರದಿಂದ ಕಾಯುತ್ತಾ ಇರುವುದಂತೂ ಸುಳ್ಳಲ್ಲ.

Leave a Reply

error: Content is protected !!
Scroll to Top
%d bloggers like this: