‘ಕನ್ನಡತಿ’ ಧಾರಾವಾಹಿಯಲ್ಲಿ ಹರ್ಷ ಹಾಗೂ ಭುವಿ ಮದುವೆಗೆ ದಿನಗಣನೆ ಶುರು | ಕನ್ನಡದ ಮದುವೆಯಾಗಲಿರುವ ಹರ್ಷ ಹಾಗೂ ಭುವಿ| ಕನ್ನಡದ ಮದುವೆ ಎಂದರೇನು?

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಸೂಪರ್ ಹಿಟ್ ಧಾರಾವಾಹಿ ‘ಕನ್ನಡತಿ’ ಧಾರಾವಾಹಿಯಲ್ಲಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿರೋದರಲ್ಲಿ ಎರಡು ಮಾತಿಲ್ಲ.ಈಗ ಪ್ರೇಕ್ಷಕರು ಇಷ್ಟಪಟ್ಟ ಎಪಿಸೋಡ್ ಪ್ರಸಾರವಾಗಲು ದಿನಗಣನೆ ಶುರುವಾಗಿದೆ. ಹೌದು, ಹರ್ಷ, ಭುವಿ ಕುಟುಂಬದ ಸಾಕ್ಷಿಯಾಗಿ ಮದುವೆಯಾಗಲಿದ್ದಾರೆ. ಈಗಾಗಲೇ ಆಹ್ವಾನ ಪತ್ರಿಕೆ ಕೂಡ ರೆಡಿಯಾಗಿದ್ದು, ಮೊದಲ ಪತ್ರಿಕೆಯನ್ನು ವರುಧಿನಿಗೆ ನೀಡಬೇಕೆಂದು ಭುವಿ ಆಸೆ ಪಟ್ಟಿದ್ದಾಳೆ. ಯಾವ ಥೀಮ್‌ನಲ್ಲಿ ಹರ್ಷ, ಭುವಿ ಮದುವೆ ಆಗಲಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರಿಗೆ ಕಾಡುತ್ತಿರಬಹುದು.

ಧಾರಾವಾಹಿಯ ಹೊಸ ವಿಡಿಯೋ ತುಣುಕೊಂದು ರಿಲೀಸ್ ಆಗಿದ್ದು ಅದರ ಪ್ರಕಾರ, ಹರ್ಷ, ಭುವಿ ಕನ್ನಡದ ಮದುವೆ ಆಗಲಿದೆ ಎಂದಿದೆ. ‘ಕನ್ನಡತಿ’ ಧಾರಾವಾಹಿಯಲ್ಲಿ ಪಕ್ಕಾ ಹಳ್ಳಿಯ ಶೈಲಿಯಂತೆ ನಿಶ್ಚಿತಾರ್ಥ ನಡೆದಿತ್ತು, ಅಂತೆಯೇ ಮದುವೆ ಕೂಡ ವಿಭಿನ್ನವಾಗಿ ಕನ್ನಡದ ನೆಲದ ರೀತಿಯಲ್ಲಿ ನಡೆಯಬೇಕಲ್ಲವೇ? ಆದರೆ ಎಲ್ಲಿ ಮದುವೆಯಾಗಲಿದೆ ಎಂಬ ಗುಟ್ಟನ್ನು ‘ಕನ್ನಡತಿ’ ತಂಡ ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ.

ಕನ್ನಡದ ಮದುವೆ ಆಗಲಿರುವ ಹರ್ಷ, ಭುವಿ ಯಾವ ರೀತಿ ಮದುವೆ ಆಗಲಿದೆ ಎಂಬ ಕುತೂಹಲಕ್ಕೆ ಈಗ ಸಣ್ಣ ಸುಳುವು ಸಿಕ್ಕಿದೆ‌. ಕನ್ನಡದ ಮದುವೆ ಆಗಲಿದೆ ಎಂಬುದಷ್ಟೇ ಗೊತ್ತಾಗಿದೆ. ಆದರೆ ಕನ್ನಡದ ಮದುವೆ ಹೇಗಿರುತ್ತದೆ? ಎಂಬುದಕ್ಕೂ ಕೂಡ ಉತ್ತರ ಸಿಕ್ಕಿದೆ. ಕುವೆಂಪು ಅವರ ಮಂತ್ರ ಮಾಂಗಲ್ಯದ ರೀತಿ ಮದುವೆ ಆದರೂ ಭುವಿಗೆ ಓಕೆ, ಆದರೆ ಹರ್ಷನ ಮನಸ್ಸಿಗೂ ಇಷ್ಟವಾಗುವಂತೆ ಭುವಿ ಮದುವೆ ಆಗಲು ಬಯಸುತ್ತಿದ್ದಾಳೆ.

ಆದರೆ ಹರ್ಷನ ಪ್ರಕಾರ ಕನಸಿನ ಮದುವೆ ಈ ರೀತಿ ಇದೆ, ಕನ್ನಡದಲ್ಲಿ ಮದುವೆ ಆಗೋದು ಅಂದ್ರೆ ನಮ್ಮ ಭಾಷೆಯಲ್ಲಿ ನಮಗೆ ಅರ್ಥವಾಗುವ ರೀತಿ ಮಂತ್ರ ಹೇಳುವುದು, ಶಾಸ್ತ್ರ ಮಾಡುವುದು. ನಮಗೆ ನಾವು ಏನು ಮಾಡುತ್ತಿದ್ದೀವಿ ಅಂತ ಅರ್ಥ. ಆದರೆ ಅದನ್ನು ಮನಸ್ಸಿಟ್ಟು ಮಾಡುತ್ತೀವಿ, ಮದುವೆ ಆಗಿ 50 ವರ್ಷ ಆದಮೇಲೆ ಅದು ನೆನಪಿರಬೇಕು. ಈ ರೀತಿಯಲ್ಲಿ ಹರ್ಷನ ಕನಸು ಸಾಗುತ್ತೆ.

ಯಾವುದೇ ವಿಘ್ನವಿಲ್ಲದೇ, ನಿರ್ವಿಘ್ನವಾಗಿ ಹರ್ಷ ಭುವಿ ನಡೆಯಬೇಕೆನ್ನುವುದು ಪ್ರೇಕ್ಷಕರ ಆಸೆ.

Leave A Reply

Your email address will not be published.