ಇವರೇ ನೋಡಿ ಪಾರ್ಟ್ನರ್ಸ್ ಇನ್ ಕ್ರೈಂ !! | ನಾಯಿಯ ಬೆನ್ನ ಮೇಲೆ ಕೂತು ಅಂಗಡಿಯಿಂದ ಚಿಪ್ಸ್ ಪ್ಯಾಕೆಟ್ ಕದಿಯಲು ಹೊರಟ ಮಂಗ | ಈ ಕುಚುಕು ಗೆಳೆಯರ ವಿಡಿಯೋ ವೈರಲ್

ಪರಿಶುದ್ಧ ಸ್ನೇಹಕ್ಕೆ ಬಣ್ಣ, ಆಕಾರ, ಆಸ್ತಿ ಬೇಕಾಗಿಲ್ಲ. ಬದಲಿಗೆ ಒಳ್ಳೆಯ ಮನಸ್ಸಿನಿಂದ ಕಷ್ಟ-ಸುಖದಲ್ಲಿ ಕೈ ಹಿಡಿಯುವಂತಹ ಗುಣ. ಈ ಪ್ರಪಂಚದಲ್ಲಿರುವ ಅಮೂಲ್ಯವಾದ ವಸ್ತುವನ್ನು ಸ್ನೇಹವೆಂದೇ ಹೇಳಬಹುದು. ಸಾಮಾನ್ಯವಾಗಿ ನಾವೆಲ್ಲರೂ ಫ್ರೆಂಡ್ ಶಿಪ್ ಅನ್ನು ಮನುಷ್ಯರಲ್ಲಿ ಕಾಣಿರುತ್ತೇವೆ. ಆದರೆ ಇದಕ್ಕಿಂತ ಮಿಗಿಲಾಗಿ ‘ಗೆಳೆತನ’ ಎಂಬ ಪದಕ್ಕೆ ನಿದರ್ಶನವಾಗಿದೆ ಈ ಮೂಕ ಪ್ರಾಣಿಗಳ ಸ್ನೇಹ.

ಸೋಶಿಯಲ್ ಮೀಡಿಯಾಗಳಲ್ಲಿ ಇಲ್ಲಿಯವರೆಗೆ ವೈರಲ್ ಆಗಿರುವ ವಿಡಿಯೋ ಪ್ರಕಾರ ನಾಯಿ ಮತ್ತು ಮಂಗ ಕಿತ್ತಾಡೋದನ್ನ ನೋಡಿದ್ದೇವೆ. ಆದ್ರೆ ಇದೀಗ ವೈರಲ್ ಆಗಿರುವ ವಿಡಿಯೋ ಮಾತ್ರ ‘ಓ ಗೆಳೆಯ ಜೀವದ್ ಗೆಳೆಯ ನೀನೇ ನಂಗೆ ಸಾಟಿ ಕಣೋ’ ಎಂಬಂತಿದೆ. ಹೌದು. ಈ ವಿಡಿಯೋ ತಮಾಷೆ ಎನಿಸಿದರೂ ಅರ್ಥಪೂರ್ಣವಾಗಿದೆ.

ಈ ವೈರಲ್ ವಿಡಿಯೋದಲ್ಲಿ, ಮಂಗ ಹಾಗೂ ನಾಯಿ ಒಟ್ಟಿಗೆ ಸೇರಿಕೊಂಡು ಒಂದು ಅಂಗಡಿಯಲ್ಲಿ ಚಿಪ್ಸ್ ಪ್ಯಾಕೆಟನ್ನು ಕಳ್ಳತನ ಮಾಡುತ್ತಿವೆ. ಮಂಗವು ನಾಯಿಯ ಬೆನ್ನ ಮೇಲೆ ಕುಳಿತು ಅಂಗಡಿಯಲ್ಲಿ ನೇತುಹಾಕಿರುವ ಚಿಪ್ಸ್ ಪ್ಯಾಕೆಟ್ ನ್ನು ಕದಿಯಲು ಯತ್ನಿಸುತ್ತಿದೆ. ಬಳಿಕ ಬೆನ್ನ ಮೇಲೆಯೇ ಕುಳಿತು ಪ್ಯಾಕೆಟ್ ಹರಿಯಲು ಯತ್ನಿಸುತ್ತಿದೆ. ಈ ಪ್ರಯತ್ನ ಮಾಡುವಾಗ ಮಂಗ ಒಮ್ಮೆ ಕೆಳಗೆ ಜಾರುತ್ತದೆ. ಆದರೂ ತನ್ನ ಪ್ರಯತ್ನ ಬಿಡದ ಮಂಗ ಮತ್ತೆ ತನ್ನ ಪ್ರಯತ್ನ ಮುಂದುವರಿಸುತ್ತದೆ.

ಈ ದೃಶ್ಯವನ್ನು ಅಲ್ಲಿಯ ವ್ಯಕ್ತಿಯೊಬ್ಬ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ. naughty.raa ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾದ ಈ ವಿಡಿಯೋವನ್ನು ಇಲ್ಲಿಯವರೆಗೆ 10 ಲಕ್ಷಕ್ಕೂ ಮೀರಿ ಜನರು ವೀಕ್ಷಿಸಿದ್ದಾರೆ. ಅನೇಕರು ಈ ವಿಡಿಯೋವನ್ನು ಕುಚುಕು ಗೆಳೆಯರು ಅಂತ ಸಾಕಷ್ಟು ಶೇರ್ ಮಾಡಿದ್ದಾರೆ.ಒಟ್ಟಾರೆ ಈ ಮಂಗ ಹಾಗೂ ನಾಯಿಯ ಗೆಳೆತನ ಮಾತ್ರ ಮೆಚ್ಚುವಂತದ್ದೇ ಅಲ್ವಾ!?..ಏನೇ ಆಗಲಿ ಈ ಕುಚುಕು ಗೆಳೆಯರ ಹಾಸ್ಯಮಯ ವಿಡಿಯೋ ನೀವೂ ನೋಡಿ ಆನಂದಿಸಿ..

https://www.instagram.com/reel/CWySz9Bhmzd/?igshid=YmMyMTA2M2Y=
Leave A Reply

Your email address will not be published.