ಕೇಂದ್ರ ಸರ್ಕಾರದ ಯೋಜನೆಯಡಿ ನಿರುದ್ಯೋಗಿ ಯುವಕ-ಯುವತಿಯರಿಂದ ಉಚಿತ ತರಬೇತಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸಲು ಮೇ 31 ಕೊನೆಯ ದಿನ

ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯದಡಿ ಕೆನರಾ ಬ್ಯಾಂಕ್‌ನ ಸಹಭಾಗಿತ್ವದಲ್ಲಿ ಗ್ರಾಮೀಣ ಭಾಗದ ಅರ್ಹ ಬಿ.ಪಿ.ಎಲ್ ಕುಟುಂಬದ ನಿರುದ್ಯೋಗಿ ಯುವಕ-ಯುವತಿಯರಿಗೆ ವಿವಿಧ ತರಬೇತಿಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಬಿ.ಪಿ.ಎಲ್ ಕುಟುಂಬದ 18 ರಿಂದ 45 ವರ್ಷದೊಳಗಿನ ವಾಣಿಜ್ಯ ವಿಷಯವನ್ನು ಓದಿದ ನಿರುದ್ಯೋಗಿ ಯುವಕ-ಯುವತಿಯರಿಗೆ 10 ದಿನಗಳ ಪೇಪರ್ ಕವರ್, ಬ್ಯಾಗ್ ಮತ್ತು ಪೇಪರ್ ಲಕೋಟೆಗಳ ತಯಾರಿಕಾ ತರಬೇತಿ, 10 ದಿನಗಳ ಫಾಸ್ಟ್ ಫುಡ್ ತರಬೇತಿ ಹಾಗೂ ನಿರುದ್ಯೋಗಿ ಯುವಕರಿಗಾಗಿ 13 ದಿನಗಳ ಸಿ.ಸಿ ಕ್ಯಾಮೆರಾ ದುರಸ್ತಿ ಮತ್ತು ಅಳವಡಿಕೆಯ ತರಬೇತಿ, 30 ದಿನಗಳ ಎಲೆಕ್ಟ್ರಿಕ್ ಮೋಟರ್ ರಿವೈಂಡಿಂಗ್ ತರಬೇತಿಯನ್ನು ಊಟ ಹಾಗೂ ವಸತಿಯೊಂದಿಗೆ ಉಚಿತವಾಗಿ ನೀಡಲಾಗುತ್ತದೆ.

ಆಸಕ್ತರು ಕೆನರಾ ಬ್ಯಂಕ್ ದೇಶಪಾಂಡೆ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಹಳಿಯಾಳ, ಉತ್ತರ ಕನ್ನಡ ಜಿಲ್ಲೆ ವಿಳಾಸಕ್ಕೆ ಮೇ 31 ರೊಳಗಾಗಿ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08284-295307, ಮೊ.ಸಂ: 9483485489, 9482188780, 9844796998, 8197022501 ಗೆ ಸಂಪರ್ಕಿಸಬಹುದು ಎಂದು ಆರ್‌ಸೆಟಿ ಸಂಸ್ಥೆಯ ನಿರ್ದೇಶಕ ಪ್ರಸನ್ನಕುಮಾರ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.